ಮಹಿಳೆಯರನ್ನು ಬೆಂಬಿಡದೆ ಕಾಡುವ ‘ಋತು ಚಕ್ರ’

ಈ ಸುದ್ದಿಯನ್ನು ಶೇರ್ ಮಾಡಿ

Pain--02

– ಜಯಶ್ರೀ. ಜೆ. ಅಬ್ಬಿಗೇರಿ
ಯಾಕಾದ್ರೂ ಈ ಜನ್ಮ ಹೆಣ್ಣಾಗಿ ಹುಟ್ಟಿತೇನೋ? ಹದಿ ಹರೆಯದಿಂದ ಈ ನೋವು ಸಹಿಸಿ ಸಹಿಸಿ ಸಾಕಾಗಿದೆ. ಯಾರ ಮುಂದೆ ಬಾಯಿ ತೆಗಿಯೋ ಹಾಗಿಲ್ಲ. ಒಳಗೊಳಗೆ ನೋವು ನುಂಗಿಕೊಳ್ಳಬೇಕು.  ನೋವು ತಾಳಲಾರದೇ ಸಂಗಾತಿಯ ಮುಂದೆ ಹೇಳಿಕೊಂಡರೆ ಹೆಣ್ಣು ಮಕ್ಕಳದು ತಿಂಗಳಿಗೊಮ್ಮೆ ಇದ್ದಿದ್ದೆ ಅದಕ್ಕೆ ಹೀಗೆಲ್ಲ ಕಿರಿ ಕಿರಿ ಮಾಡಿಕೊಂಡರೆ ಹೇಗೆ? ಎನ್ನುವ ಉದಾಸೀನ ಮಾತು. ಮುಟ್ಟು ನಿಲ್ಲುವಾಗಲೂ ಇಂಥ ತೊಂದರೆ. ಯಾವುದರಲ್ಲೂ ಸಮಾಧಾನವಿಲ್ಲ. ವೈದ್ಯರನ್ನು ಭೇಟಿಯಾದರೆ ನಲವತ್ತರ ನಂತರ ಇದು ಸಾಮಾನ್ಯ ಎಂಬ ಮಾತಿನೊಂದಿಗೆ ಕೆಲವು ಔಷ„ ಗುಳಿಗೆ ಕೊಡುತ್ತಾರೆ. ಏನು ಮಾಡೋದು ತಿಳಿತಿಲ್ಲ ಎನ್ನುವುದು ಸುನಂದಾಳ ಮಾತು.

ಮನೆಯಲ್ಲಿ ಎಲ್ಲರ ಮೇಲೂ ಹರಿ ಹಾಯಿತ್ತಿದ್ದೀನಿ. ಮಕ್ಕಳು ಎಷ್ಟು ಪ್ರೀತಿಯಿಂದ ಏನಾದರೂ ಆಸೆಯಿಂದ ತಿನ್ನೋಕೆ ಮಾಡಿಕೊಡು ಎಂದು ಕೇಳಿದರೆ ಅವರ ಮೇಲೂ ಸಿಡಿಮಿಡಿ ಮಾಡಿತ್ತೀದ್ದೀನಿ. ಸಣ್ಣ ಪುಟ್ಟದಕ್ಕೂ ಉರಿದು ಬೀಳತ್ತೀನಿ. ಮೊದಲೆಲ್ಲಾ ಹೀಗಿರಲಿಲ್ಲದ ನಾನು ಹೀಗೆಕಾಗ್ತಿದ್ದೀನಿ ತಿಳಿತಿಲ್ಲ. ಋತು ಚಕ್ರದಲ್ಲಿ ಏರು ಪೇರಿನಿಂದ ನನ್ನಲ್ಲಾಗುತ್ತಿರುವ ಬದಲಾವಣೆಗೆ ಮಕ್ಕಳಿಗೂ ಬೇಜಾರ ಮಾಡಿತ್ತಿದ್ದೀನಿ ಅನ್ನೋ ನೋವು ನನ್ನನ್ನು ಕಾಡುತ್ತಿದೆ ಎನ್ನುವ ಸಂಕಟದ ಮಾತುಗಳು ನೀಲಮ್ಮನದು.  ಇವು ಕೇವಲ ಸುನಂದಾ ಮತ್ತು ನೀಲಮ್ಮಳ ಮನದ ನೋವಿನ ಮಾತುಗಳಲ್ಲ. ರಜೋ ನಿವೃತ್ತಿಯಾಗುವ ಸ್ಥಿತಿಯಲ್ಲಿರುವ ಹೆಂಗಳೆಯರ ಮನಸ್ಸಿನ ತಲ್ಲಣಗಳು. ನಲವತ್ತು ವಯಸ್ಸಿನ ಹಿಂದೆ ಮುಂದೆ ಈ ಸಮಸ್ಯೆ ಶುರುವಾಗುತ್ತದೆ. ರಜೋ ನಿವೃತ್ತಿಯಾಗುವ ಮೊದಲೇ ಕೆಲ ವರ್ಷಗಳಿಂದ ಋತು ಚಕ್ರದಲ್ಲಿ ಏರುಪೇರು ಕಾಣಿಸಿಕೊಂಡು ದೇಹದಲ್ಲಿ ಅತಿಯಾಗಿ ಎದ್ದು ಕಾಣಿಸಿಕೊಳ್ಳುವಷ್ಟು ಬದಲಾವಣೆಗಳು ಪ್ರಾರಂಭವಾಗುತ್ತವೆ.

Pain--01

ರಜಚಕ್ರ ತುಂಬಾ ದೂರವಾಗಿ ಹೋದಾಗ ಅಬ್ಬಾ ಒಳ್ಳೆಯದಾಯ್ತು ನಿಂತು ಹೋಯ್ತು ಎಂದು ನಿಟ್ಟುಸಿರು ಬಿಡುವಾಗಲೇ ದಿಢೀರನೇ ಪ್ರವಾಹವೆನ್ನಿಸುವ ಹಾಗೆ ಕಾಣಿಸಿಕೊಂಡು ಸಂಕಷ್ಟಕ್ಕೆ ಒಡ್ಡುತ್ತದೆ. ಇಲ್ಲವೇ ಇದಕ್ಕೆ ವಿರುದ್ಧ ಎನ್ನುವಂತೆ ರಜಸ್ರಾವ ತುಂಬಾ ಕಡಿಮೆ ಆಗುತ್ತದೆ. ನಿಯಮಿತವಾಗಿದ್ದ ಋತು ಚಕ್ರ ಯಾವಾಗ ಬೇಕಾದಾಗ ಹಾಜರಾಗಿ ಬಿಡುತ್ತದೆ.  ಉದ್ಯೋಗಸ್ಥ ಮಹಿಳೆಯರಿಗಂತೂ ಇದೊಂದು ಸವಾಲಾಗಿ ಬಿಡುತ್ತದೆ. ಇದನ್ನು ಹೇಗೆ ನಿಭಾಯಿಸುವುದೆಂದು ಅರ್ಥವಾಗದೆ ಪಡುವ ಪಾಡು ಅಷ್ಟಿಷ್ಟಲ್ಲ. ಮೊದಲೇ ಒತ್ತಡದ ಬದುಕು ಕಛೇರಿ ಮನೆ ನಿಭಾಯಿಸುವುದು ಕಷ್ಟ. ಇದರ ನಡುವೆ ಈ ಸಮಸ್ಯೆ ಬೇರೆ ಹೀಗಾಗಿ ರಜೋ ನಿವೃತ್ತಿಯ ಸಮಯವನ್ನು ದಾಟಿ ಬರುವುದೇ ಸಾಹಸಮಯವಾಗಿ ಗೋಚರಿಸುತ್ತದೆ.

ಬಿಡದೇ ಕಾಡುವ ನೋವುಗಳು
ಮೊದಲಿಗೆ ಕಾಣಿಸಿಕೊಳ್ಳುತ್ತಿದ್ದ ಸಣ್ಣನೆಯ ತಲೆನೋವು ಈಗ ಮೈಗ್ರೇನ್ ಆಗಿ ಬದಲಾಗುವ ಸಾಧ್ಯತೆಗಳು ಇರುತ್ತವೆ. ಸ್ವಲ್ಪ ಕೆಲಸ ಮಾಡಿದರೂ ದೊಡ್ಡ ಗುಡ್ಡ ಕಡಿದವರ ಹಾಗೆ ಸುಸ್ತು ಕೆಲಸದಲ್ಲಿ ಹಿಂದೆಯಿದ್ದ ಶಿಸ್ತು ಅಚ್ಚು-ಕಟ್ಟುತನ ಮಾಯವಾಗುತ್ತವೆ. ತಾನು ಆಶಕ್ತಳಾಗಿದ್ದೇನೆ ಎಂಬ ಚಿಂತೆ ಮನದಲ್ಲಿ ಮೂಡುತ್ತದೆ. ತನ್ನ ಮೇಲೆ ತನಗೆ ಬೇಜಾರು ಮಾಡಿಕೊಳ್ಳುವುದು ಹೆಚ್ಚಾಗುತ್ತದೆ.  ಸುಸ್ತಾಗಿದ್ದರೂ ನಿದ್ದೆಗೆ ಪರದಾಡ¨ಹುದು. ಕಾಲುಗಳು ಸೇದಬಹುದು. ಪ್ರೊಜೆಸ್ಟಿರಾನ್ ಪ್ರಮಾಣ ಕಡಿಮೆಯಾಗುತ್ತಿರುವುದೇ ಹೀಗೆಲ್ಲಾ ಆಗಲು ಕಾರಣ ಎನ್ನುವುದು ತಜ್ಞರ ಹೇಳಿಕೆ. ಈಸ್ಟ್ರೋಜನ್ ಪ್ರಭಾವ ಕಡಿಮೆಯಾದಂತೆ ದೇಹದ ತೂಕ ಹೆಚ್ಚಾಗುವುದು. ಹೃದಯ ರೋಗಕ್ಕೀಡಾಗುವ ಸಂಭವನೀಯತೆ ಹೆಚ್ಚಾಗುವುದು. ಕೊಲೆಸ್ಟ್ರಾಲ್ ಪ್ರಮಾಣದಲ್ಲಿ ಏರಿಳಿತ. ರಕ್ತದ ಒತ್ತಡವೂ ಏರುವುದು. ಇದಷ್ಟೇ ಅಲ್ಲ ಸೊಂಟದಲ್ಲಿ ಪದೇ-ಪದೇ ನೋವು ಕಂಡು ಬರುತ್ತದೆ. ಕೆಲವರಲ್ಲಿ ಮೂತ್ರವಿಸರ್ಜನೆಯ ಸಮಸ್ಯೆ ಉಂಟಾಗುತ್ತದೆ. ನೀರು ಕುಡಿಯುವುದೇ ಬೇಡ ಎಂದು ಕಡಿಮೆ ನೀರು ಕುಡಿದರೂ ಅತಿಯಾದ ಮೂತ್ರ ವಿಸರ್ಜನೆಯಾಗುತ್ತದೆ. ಒಮ್ಮೊಮ್ಮೆಯಂತೂ ಮೂತ್ರ ವಿಸರ್ಜನೆ ಏಕಾಏಕಿ ಉಂಟಾಗಿ ನಿಯಂತ್ರಣ ಕಷ್ಟಕರವೆನಿಸುತ್ತದೆ. ಮೂತ್ರ ವಿಸರ್ಜನೆಗೆ ಅವಸರ ಪಡಬೆಕಾಗುತ್ತದೆ.

ಕೆಲವರಲ್ಲಿ ಭೇದಿ ಇಲ್ಲವೆ ಮಲಬದ್ಧತೆಯೂ ಉಂಟಾಗಬಹುದು. ಮೈಕೈ ನೋವು ಕಾಣಿಸಿಕೊಳ್ಳುತ್ತದೆ. ಹಲವರಲ್ಲಿ ಕಣ್ಣುಗಳ ಸುತ್ತ ಕಪ್ಪು ಕಲೆಯಾಗುತ್ತದೆ. ಸ್ತನಗಳು ಇಳಿ ಬೀಳತೊಡುಗುತ್ತವೆ.  ಯೋನಿ ಪ್ರದೇಶ ಒಣಗಿರುವುದರಿಂದ ಸಂಭೋಗ ನೋವಿಗೆಡೆ ಮಾಡುವುದು ಇನ್ನೂ ಕೆಲವರಲ್ಲಿ ವಿಶೇóಷ ರಸದೂತಗಳ ಕೊರತೆಯ -ಫಲವಾಗಿ ಲೈಂಗಿಕ ಕ್ರಿಯೆಯಲ್ಲಿ ನಿರಾಸಕ್ತಿ ಉಂಟಾಗಬಹುದು.  ಹಲವರಲ್ಲಿ ಹರೆಯದರಲ್ಲಿ ಎದ್ದು ಕಾಣುತ್ತಿದ್ದ ಮೊಡವೆಗಳು ಮತ್ತೆ ಕಾಣಿಸಿಕೊಳ್ಳುತ್ತವೆ. ಪಾದ ಹಿಮ್ಮಡಿಗಳು ಉಬ್ಬುವುದು. ತೊಡೆ ಸೊಂಟ ನಿತಂಬಗಳಲ್ಲಿ ಕೊಬ್ಬು ಶೇಖರಗೊಳ್ಳುವುದು. ಕೂದಲು ಉದುರುವುದು ರಸದೂತಗಳ ವೈಪರೀತ್ಯದಿಂದ ದೇಹದಲ್ಲಿ ಈ ಎಲ್ಲಾ ಸಮಸ್ಯೆಗಳು ಉಂಟಾಗುವವು. ಹಸಿವಿನಲ್ಲೂ ಬದಲಾವಣೆ ಕಂಡು ಬರುವುದು. ರಕ್ತದಲ್ಲಿನ ಗ್ಲುಕೋಸ್ ಪ್ರಮಾಣ ಕಡಿಮೆಯಾಗಿರುವುದರ ಪರಿಣಾಮವಾಗಿ ಸಂಜೆ ವೇಳೆಗೆ ಏನಾದರೂ ತಿನ್ನಲೇ ಬೇಕೆನ್ನಿಸುವಷ್ಟು ಹಸಿವು ಉಂಟಾಗುತ್ತದೆ. ಉಪ್ಪಿನ ವಸ್ತುಗಳನ್ನು ಸಿಹಿ ಖಾದ್ಯಗಳನ್ನು ತಿನ್ನಬೇಕೆಂಬ ಆಸೆಯೂ ಹುಟ್ಟಿಕೊಳ್ಳುತ್ತದೆ. ಹೀಗೇ ರಜೋ ನಿವೃತ್ತಿಯ ಸನ್ನಿಹಿತ ಸಮಯದಲ್ಲಿ ದೇಹದಲ್ಲಾಗುವ ಬದಲಾವಣೆಗಳು ಎಲ್ಲರಿಗೂ ಒಂದೇ ತೆರನಾಗಿ ಇರುವುದಿಲ್ಲ. ಮೆನೋ ಪಾಸ್ ಎನ್ನುವುದು ಮಹಿಳೆಯರಿಗೆ ಹೆಮ್ಮಾರಿಯಂತೆ ಕಾಡುತ್ತದೆ. ಹಿಂಡಿ ಹಿಪ್ಪೆ ಮಾಡುತ್ತದೆ.

ಅನೇಕ ಮಹಿಳೆಯರು ಇದನ್ನು ಹೇಳಿಕೊಳ್ಳಲಾಗದೇ ನಿತ್ಯ ನರಕ ಅನುಭವಿಸುತ್ತಿರುತ್ತಾರೆ. ತಜ್ಞರನ್ನು ಭೇಟಿಯಾಗಲೂ ಮುಜುಗುರ ಪಡುತ್ತಾರೆ. ಜವಾಬ್ದಾರಿಯ ಹೊರೆ ಹೊತ್ತು ಮೊದಲಿನಂತೆ ಕೆಲಸ ಮಾಡಲಾಗದೇ ಸೋಮಾರಿತನ ಹೆಚ್ಚಾಗಿ ಯಾಕಾದರೂ ಹೆಣ್ಣಾದೆನೋ ಎಂದು ಗೋಳಾಡುತ್ತಾರೆ.  ನೋವಿಗೆ ಶಮನ ಹೀಗಿದೆ ಮೆನೋ ಪಾಸ್‍ನ್ನು ನಿರ್ಲಕ್ಷಿಸಿ ಮೌನವಾಗಿ ಅನುಭವಿಸುವುದರ ಬದಲು ಇದರ ಬಗ್ಗೆ ತಿಳುವಳಿಕೆ ಹೊಂದಬೇಕು ಮುಜುಗರ ಬಿಟ್ಟು ತಜ್ಞರನ್ನು ಭೇಟಿಯಾಗಿ ಸೂಕ್ತ ಸಲಹೆ ಸೂಚನೆಗಳನ್ನು ಪಡೆದು ಪಾಲಿಸುವುದು.  ಹಾರ್ಮೋನ್ ತಯಾರಿಕೆ ನಿಲ್ಲಿಸುವುದರಿಂದ ಈ ಎಲ್ಲಾ ಕ್ಷಿಪ್ರ ಬದಲಾವಣೆಗಳು ಉಂಟಾಗುತ್ತವೆ. ಎಂಬುದನ್ನು ತಿಳಿದು ಇದನ್ನು ಮಾನಸಿಕವಾಗಿ ಎದುರಿಸಲು ಸನ್ನದ್ಧರಾಗಬೇಕು. ಇದರ ಕಾಲಾವ„ ಪೂರ್ವ ಭಾವಿ ಮತ್ತು ನಂತರದ ಕಾಲ ಸರಿ ಸುಮಾರು 5ರಿಂದ 10ವರ್ಷ ಅಂದರೆ ಸುಮಾರು 40ರಿಂದ 50ರವರೆಗೆ ಇದು ಎಲ್ಲರಲ್ಲೂ ಒಂದೇ ವಯೋಮಾನದಲ್ಲಿ ಉಂಟಾಗುವುದಿಲ್ಲ. ಕೆಲವರಲ್ಲಿ ಮುಂಚೆ ಕೆಲವರಲ್ಲಿ ತಡವಾಗಿ ಆಗುವುದು ಎಂಬುದರ ಅರಿವಿರಲಿ.

ಮೆನೋಪಾಸ್ ನೈಸರ್ಗಿಕ ಕ್ರಿಯೆ ಅದು ಪ್ರತಿಯೊಬ್ಬರಲ್ಲೂ ಒಂದೇ ವಯಸ್ಸಿನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಬೇರೆ-ಬೇರೆ ವೇಗ ಮತ್ತು ಲಕ್ಷಣಗಳಲ್ಲಿ ಕಾಣಿಸಿಕೊಳ್ಳುತ್ತದೆ. ಮೆನೋ ಪಾಸ್‍ನಿಂದ ಉಂಟಾಗುವ ಸಮಸ್ಯೆಗಳಿಗೆ ತುರ್ತು ಶಮನಕ್ಕೆ ಮನೆ ಮದ್ದು ಮತ್ತು ವ್ಯಾಯಾಮ ತಿಳಿದಿರಲಿ ತೆಗೆದುಕೊಳ್ಳಲೇ ಬೇಕಾದ ಸಾತ್ವಿಕ ಆಹಾರ ಮತ್ತು ಪಥ್ಯದ ಆಹಾರದ ಪಟ್ಟಿ ಗೊತ್ತು ಮಾಡಿಕೊಳ್ಳಿ. ಒತ್ತಡ ಕಡಿಮೆ ಮಾಡಿಕೊಳ್ಳಿ ಮತ್ತು ಭಾವನೆಗಳ ಮೇಲೆ ನಿಯಂತ್ರಣ ಸಾ„ಸಿರಿ. ನಿರಂತರ ಉತ್ತಮ ಆರೋಗ್ಯಕ್ಕೆ ನಿಮ್ಮನ್ನು ನೀವು ಒಪ್ಪಿಸಿಕೊಂಡರೆ ಮೆನೋ ಪಾಸ್ ಸಮಸ್ಯೆಗಳಿಗೆ ಪಾಸ್ ಬಟನ್ ಒತ್ತಲು ಸಾಧ್ಯವಾಗುವುದು.

Facebook Comments