ಕಣ್ ಸೆಳೆಯುತ್ತಿದೆ ಕಾಮನಬಿಲ್ಲು ಬಣ್ಣದ ಕಲರ್ ಫುಲ್ ಫಿಜ್ಜಾ..!

ಈ ಸುದ್ದಿಯನ್ನು ಶೇರ್ ಮಾಡಿ

ds
ರುಚಿಕರ ಭಕ್ಷ್ಯಗಳನ್ನು ಆತ್ಯಾಕರ್ಷಕವಾಗಿ ವಿನ್ಯಾಸಗೊಳಿಸಿ ಗ್ರಾಹಕರನ್ನು ಸೆಳೆಯುವುದು ಈಗ ಟ್ರೆಂಡ್ ಆಗಿಬಿಟ್ಟಿದೆ. ಕ್ಯಾಲಿಫೋರ್ನಿಯಾದಲ್ಲಿ ಈಗ ಹೊಳೆಯುವ ಕಾಮನಬಿಲ್ಲಿನ ಬಣ್ಣದ ಫಿಜ್ಜಾ ಎಲ್ಲರನ್ನು ಆಕರ್ಷಿಸುತ್ತಿದೆ. ಅಮೆರಿಕದ ಲಾಸ್ ಏಂಜೆಲ್ಸ್‍ನ ಕ್ಯಾಲಿಫೋರ್ನಿಯಾ ಕರಾವಳಿ ಪಟ್ಟ ಸಾಂತಾ ಮೋನಿಕಾದಲ್ಲಿ ಫಿಜ್ಜಾ ಪ್ರಿಯರಿಗಾಗಿ ಬಹು ಆಕರ್ಷಕ ತಿನಿಸು ಸಿದ್ಧವಾಗಿದೆ. ಡ್ಯಾಗ್‍ಫುಡ್ ಫಿಜೆರಿಯಾ ರೆಸ್ಟೋರೆಂಟ್‍ನಲ್ಲಿ ಹೊಳೆಯುವ ಕಾಮನಬಿಲ್ಲಿನ ಫಿಜ್ಜಾ ಈಗ ವಿಶೇಷ ಆಕರ್ಷಣೆ.
ಈ ರೈನ್‍ಬೋ ಫಿಜ್ಜಾಗೆ ಮ್ಯಾಜಿಕಲ್ ಎಎಫ್ ಎಂದು ಹೆಸರಿಡಲಾಗಿದೆ. ಸಪ್ತ ವರ್ಣಗಳ ಖಾದ್ಯ ಲೇಪನದೊಂದಿಗೆ ಮಾರ್ಗರಿಟಾ ಪೈ ಒಳಗೊಂಡಿರುವ ಇದು ಬಹು ಆಕರ್ಷಣೆ ಜೊತೆ ರುಚಿಕರವೂ ಆಗಿದೆ.

ಕಳೆದ ವರ್ಷ ಈ ರೆಸ್ಟೋರೆಂಟ್‍ನಲ್ಲಿ ಹೊಳೆಯುವ ಫಿಜ್ಜಾದ ಸೀಮಿತ ತಿನಿಸುಗಳನ್ನು ಮೆನುವಿನಲ್ಲಿ ಸೇರಿಸಲಾಗಿತ್ತು. ಇಂಥ ಫಿಜ್ಜಾಗಳಿಗೆ ತಿಂಡಿ ಪ್ರಿಯರಿಂದ ಭಾರೀ ಬೇಡಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಫಿಜ್ಜಾಗೆ ಕಾಮನಬಿಲ್ಲಿನ ರೂಪ ನೀಡಲಾಗಿದ್ದು, ಗ್ರಾಹಕರು ಇದನ್ನು ಬಹುವಾಗಿ ಇಷ್ಟಪಟ್ಟು ಚಪ್ಪರಿಸುತ್ತಾರೆ. ಅಬಾಲವೃದ್ಧರಾಗಿ ಎಲ್ಲರೂ ರೈನ್‍ಬೋ ಫಿಜ್ಜಾವನ್ನು ಮೆಲ್ಲುತ್ತಾರೆ ಎಂದು ಡ್ಯಾಗ್‍ಫುಡ್ ಫಿಜ್ಜೇರಿಯಾದ ಜನರಲ್ ಮ್ಯಾನೇಜರ್ ಮಾರ್ಕ್ ಪೀಟರ್ಸ್ ವಿವರಿಸಿದ್ದಾರೆ. ಈ ಹಿಂದೆ ರೆಸ್ಟೋರೆಂಟ್‍ನಲ್ಲಿ ಸೇಂಟ್ ಪ್ಯಾಟ್ರಿಕ್ಸ್ ಡೇಗಾಗಿ ಗ್ರೀನ್ ಫಿಜ್ಜಾ ಹಾಗೂ 4/20 (ಫೋರ್ ಬಾರ್ ಟ್ವೆಂಟಿ) ಉತ್ಸವಕ್ಕಾಗಿ ಮಾರಿಜುನಾ ಫಿಜ್ಜಾ ಸೃಷ್ಟಿಸಲಾಗಿತ್ತು. ಈಗ ರೈನ್‍ಬೋ ಗ್ಲಿಟರ್ ಫಿಜ್ಜಾ ಅಪಾರ ಜನಪ್ರಿಯತೆ ಪಡೆಯುತ್ತಿದೆ.

Facebook Comments