ನಾಯಕನಾಗಿ ಮೊದಲ ಬಾರಿಗೆ ಏಕದಿನ ಸರಣಿ ಸೋತ ಕೊಹ್ಲಿ

ಈ ಸುದ್ದಿಯನ್ನು ಶೇರ್ ಮಾಡಿ

KOhli-Tam

ಲೀಡ್ಸ್. ಜು.18 : ನಿನ್ನೆ ಇಂಗ್ಲೆಂಡ್ ವಿರುದ್ಧ ನಡೆದ ಏಕದಿನ ಸರಣಿಯ ಅಂತಿಮ ಮತ್ತು ನಿರ್ಣಾಯಕ ಪಂದ್ಯದಲ್ಲಿ ಭಾರತ ಸೋಲುವ ಮೂಲಕ ಸರಣಿ ಸೋಲು ಅನುಭವಿಸಿದೆ. ಟೀಮ್ ಇಂಡಿಯಾದ ನಾಯಕನಾದ ನಂತರ ವಿರಾಟ್ ಕೊಹ್ಲಿ ಸೋತ ಮೊದಲ ಏಕದಿನ ಸರಣಿ ಇದಾಗಿದೆ. 2016 ರಿಂದ 8 ಏಕದಿನ ಸರಣಿಗಳನ್ನು ಆಡಿದ್ದು, ಇದು ಅವರು ಸೋತ ಮೊದಲ ಸರಣಿ ಇದಾಗಿದೆ. ಶ್ರೀಲಂಕಾ ವಿರುದ್ಧ 2 ಬಾರಿ, ಜಿಂಬಾಬ್ವೆ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಗಳ ವಿರುದ್ಧ ಆಡಿದ ಏಕದಿನ ಸರಣಿಯನ್ನು ಗೆದ್ದು ಬೀಗಿದ್ದಾರೆ. ವಿರಾಟ್ ಕೊಹ್ಲಿ ನಾಯಕನಾಗಿ ಆಡಿದ ಒಟ್ಟು 52 ಪಂದ್ಯಗಳಲ್ಲಿ 39 ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ.

ಅಂದಹಾಗ್ ನಿನ್ನೆ ಲೀಡ್ಸ್ ನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ಏಕದಿನ ಸರಣಿಯ ಅಂತಿಮ ಹಾಗೂ ನಿರ್ಣಾಯಕ ಪಂದ್ಯದಲ್ಲಿ 8 ವಿಕೆಟ್ ಗಳಿಂದ ಭಾರತವನ್ನು ಪರಾಭವಗೊಳಿಸುವ ಮೂಲಕ ಇಂಗ್ಲೆಂಡ್ ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿದೆ. ತೀವ್ರ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 256 ರನ್ ಗಳಿಸುವ ಮೂಲಕ ಇಂಗ್ಲೆಂಡ್’ಗೆ 257 ರನ್ ಗಳ ಸಾಧಾರಣ ಮೊತ್ತದ ಟಾರ್ಗೆಟ್ ನೀಡಿತ್ತು. ಭಾರತದ ಪರ ಕೊಹ್ಲಿ ಗರಿಷ್ಟ 71 ರನ್ ಗಳಿಸಿದರೆ, ಔಟಾಗದೆ ಧವನ್ 44, ಧೋನಿ 42, ದಿನೇಶ್ ಕಾರ್ತಿಕ್ 21, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್ ತಲಾ 21, ಹಾಗೂ ಶಾರ್ದೂಲ್ ಠಾಕೂರ್ ಅಜೇಯ 22 ರನ್ ಗಳ ಕಾಣಿಕೆ ನೀಡಿದ್ದರು.

257 ರನ್ ಗಳ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆದುಕೊಂಡಿತು. ಜೇಮ್ ಎಂ.ವಿನ್ಸ್(27) ಹಾಗೂ ಬೈರ್ಸ್ಟೌ(30) ಪಡೆದು ಔಟ್ ಆದ ನಂತರ ಜೊತೆಯಾದ ರೂಟ್ ಹಾಗೂ ಮಾರ್ಗನ್ ಉತ್ತಮ ಜೊತೆಯಾಟವಾಡುವ ಮೂಲಕ ಇನ್ನಿಂಗ್ಸ್ ಕಟ್ಟುವಲ್ಲಿ ಯಶಸ್ವಿಯಾದರು. ರೂಟ್ ಭರ್ಜರಿ ಶತಕ ಗಳಿಸಿದರೆ ಮಾರ್ಗನ್ 88 ರನ್ ಗಳಿಸಿ ಈ ಜೋಡಿ ಗೆಲುವಿನ ರೂವಾರಿಗಳೆನಿಸಿದರು.

ಅಂತಿಮವಾಗಿ ಇನ್ನೂ 33 ಎಸೆತಗಳು ಬಾಕಿ ಇರುವಾಗಲೇ ಇಂಗ್ಲೆಂಡ್ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸುವ ಮೂಲಕ 3 ಪಂದ್ಯಗಳ ಏಕದಿನ ಸರಣಿಯನ್ನು ತಮ್ಮದಾಗಿಸಿಕೊಂಡಿತು. ಇನ್ನು ಇಂಗ್ಲೆಂಡ್ ಪರ ರಶೀದ್ ಅದಿಲ್ ಮತ್ತು ವಿಲ್ಲಿ ತಲಾ 3 ವಿಕೆಟ್ ಹಾಗೂ ವೂಡ್ 1 ವಿಕೆಟ್ ಪಡೆದು ಮಿಂಚಿದರೆ ಭಾರತದ ಬೌಲರ್ ಗಳು ವಿಕೆಟ್ ಉರುಳಿಸುವಲ್ಲಿ ವಿಫಲಾರಾದರು. ರೈನಾ ಹಾಗೂ ಪಾಂಡ್ಯ ತಲಾ ಒಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್ :
ಭಾರತ : 256/8
ಇಂಗ್ಲೆಂಡ್ : 260/2 (44.3/50 ov, ಣಚಿಡಿgeಣ 257

Facebook Comments

Sri Raghav

Admin