ಕಾಂಗ್ರೆಸ್ ಕಾಮಗಾರಿಗಳನ್ನು ಬಿಜೆಪಿಯವರು ಹೈಜಾಕ್ ಮಾಡುತ್ತಿದ್ದಾರೆ : ಶ್ಯಾಮನೂರು ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

Shyamanuru-Shivashanrappa

ದಾವಣಗೆರೆ, ಜು.19-ಕಾಂಗ್ರೆಸ್ ಮಾಡಿದ್ದ ಕಾಮಗಾರಿಗಳನ್ನು ಬಿಜೆಪಿಯವರು ಹೈಜಾಕ್ ಮಾಡುತ್ತಿದ್ದಾರೆ ಎಂದು ಶಾಸಕ ಶ್ಯಾಮನೂರು ಶಿವಶಂಕರಪ್ಪ ಆರೋಪಿಸಿದ್ದಾರೆ. ಚಂದ್ರಮೌಳೇಶ್ವರ ದೇವಸ್ಥಾನ ಪಾರ್ಕ್‍ನಲ್ಲಿ ನೂತನವಾಗಿ ನಾಲ್ಕು ಲಕ್ಷ ರೂ. ವೆಚ್ಚದಲ್ಲಿ ಸ್ಥಾಪಿಸಲಾಗಿರುವ ಶುದ್ಧ ನೀರಿನ ಘಟಕ ಉದ್ಘಾಟಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಸಂಸದರಿಗೆ ಐಫೋನ್ ಕೊಟ್ಟಿರುವುದರ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಇದರಲ್ಲಿ ತಪ್ಪೇನಿದೆ ? ನನಗೆ ಕೊಟ್ಟರೆ ನಾನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೆಲಸದ ಒತ್ತಡದಿಂದ ಕಣ್ಣೀರು ಹಾಕಿರಬಹುದು. ಇದು ಅಪರಾಧವೇನಲ್ಲ ಎಂದು ಸಮರ್ಥಿಸಿಕೊಂಡರು. ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯರಾದ ದಿನೇಶ್ ಕೆ.ಶೆಟ್ಟಿ, ಲಕ್ಷ್ಮೀದೇವಿ, ಅನಿತಾಬಾಯಿ, ಮಲ್ತೇಶ್‍ಜಾದವ್, ವೀರಣ್ಣಗೌಡ ಉಪಸ್ಥಿತರಿದ್ದರು.

Facebook Comments

Sri Raghav

Admin