ಸಂಸದರಿಗೆ ಐಫೋನ್ ನೀಡುವ ಪ್ರಕರಣಕ್ಕೆ ಹೊಸ ಟ್ವಿಸ್ಟ್ …!

ಈ ಸುದ್ದಿಯನ್ನು ಶೇರ್ ಮಾಡಿ

Iphones
ಬೆಂಗಳೂರು,ಜು.19- ಸಂಸದರಿಗೆ ಬೆಲೆ ಬಾಳುವ ಐಫೋನ್ ನೀಡಲು ಮುಂದಾಗಿದ್ದ ಪ್ರಕರಣ ಇದೀಗ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದೆ. ರಾಜ್ಯದ 28 ಲೋಕಸಭಾ ಸದಸ್ಯರು, 12 ಮಂದಿ ರಾಜ್ಯಸಭಾ ಸದಸ್ಯರು ಹಾಗೂ ಸುಪ್ರೀಂಕೋರ್ಟ್‍ನಲ್ಲಿ ಕಾವೇರಿ ನದಿ ನೀರು ಹಂಚಿಕೆ ಸಂಬಂಧ ರಾಜ್ಯಪರ ವಾದ ಮಂಡಿಸುತ್ತಿರುವ ಹಿರಿಯ ವಕೀಲರಿಗೆ ಒಂದು ಲಕ್ಷ ಮೌಲ್ಯದ ಐಫೋನ್ -ಎಕ್ಸ್ ಮೊಬೈಲ್‍ನ್ನು ನೀಡಿದ್ದು ನಾಲ್ಕು ಜಲನಿಗಮಗಳು ಎಂಬುದು ಬೆಳಕಿಗೆ ಬಂದಿದೆ.

ಎರಡು ದಿನಗಳ ಹಿಂದೆಯಷ್ಟೇ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸಂಸದರಿಗೆ ನನ್ನ ಸ್ವಂತ ಖರ್ಚಿನಲ್ಲೇ ನಾನೇ ಐಫೋನ್ ಗಳನ್ನು ನೀಡಿದ್ದೆ ಎಂದು ಹೇಳಿದ್ದರು. ಆದರೆ ವಾಸ್ತವವಾಗಿ 37 ಸಂಸದರು , 12 ಮಂದಿ ಕಾನೂನು ತಜ್ಞರಿಗೆ ಮೊಬೈಲ್ ನೀಡಿರುವುದು ಕೃಷ್ಣ ಭಾಗ್ಯ ಜಲನಿಗಮ, ಕರ್ನಾಟಕ ನೀರಾವರಿ ನಿಗಮ,ಕಾವೇರಿ ನೀರಾವರಿ ನಿಗಮ ಮತ್ತು ವಿಶ್ವೇಶ್ವರಯ್ಯ ಜಲನಿಗಮದ ಅಧಿಕಾರಿಗಳೇ ಸಂಸದರಿಗೆ ಬೆಲೆ ಬಾಳುವ ಉಡುಗೊರೆ ನೀಡಿದ್ದಾರೆ.

ಒಂದು ಲಕ್ಷ ಮೌಲ್ಯದ 64ಜಿಬಿಯ ಐಫೋನ್ ಎಕ್ಸ್ ಮೊಬೈಲ್‍ಗಳನ್ನು ಈ ನಾಲ್ಕು ನಿಗಮದ ಅಧಿಕಾರಿಗಳು ಮೊಬೈಲ್ ಖರೀದಿಗಾಗಿ 50 ಲಕ್ಷ ಹಾಗೂ ಐದು ಸಾವಿರ ಮೌಲ್ಯದ ಕಿಟ್ ಬ್ಯಾಗ್‍ನ್ನು ಖರೀದಿ ಮಾಡಿದ್ದಾರೆ. ಯಾವಾಗ ಈ ಪ್ರಕರಣ ಮಾಧ್ಯಮಗಳಲ್ಲಿ ವಿವಾದ ಪಡೆದುಕೊಂಡಿತೋ ಎಚ್ಚೆತ್ತುಕೊಂಡ ಸಂಸದರು ನಮಗೆ ಮೊಬೈಲ್ ಉಸಾಬರಿಯೇ ಬೇಡ ಎಂಬ ತೀರ್ಮಾನಕ್ಕೆ ಬಂದರು. ಪ್ರತಿ ವರ್ಷ ಈ ರೀತಿ ಸಂಸದರಿಗೆ ಜಲ ಸಂಪನ್ಮೂಲ ಇಲಾಖೆ ವತಿಯಿಂದ ಐಫೋನ್ ಗಳನ್ನು ಕಳೆದ ಹಲವು ವರ್ಷಗಳಿಂದ ನೀಡುತ್ತಾ ಬರಲಾಗಿದೆ. ಆದರೆ ಈ ಬಾರಿ ಮಾತ್ರ ಇದು ಬೆಳಕಿಗೆ ಬಂದು ವಿವಾದ ಪಡೆದುಕೊಂಡಿದೆ.

ರಾಜ್ಯದಲ್ಲಿ ರೈತರು ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಬೆಲೆ ಬಾಳುವ ಐಫೋನ್ ನ್ನು ಪಡೆದುಕೊಳ್ಳಲು ಮುಂದಾಗಿರುವುದಕ್ಕೆ ಅಸಮಾಧಾನ ವ್ಯಕ್ತವಾಗಿತ್ತು. ಹೀಗಾಗಿ ಎಲ್ಲ ಸಂಸದರು ಮೊಬೈಲ್ ತೆಗೆದುಕೊಳ್ಳುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದರಿಂದ ಸರ್ಕಾರ ಈ ಪ್ರಸ್ತಾವನೆಯಿಂದ ಹಿಂದೆ ಸರಿದಿದೆ ಎಂದು ತಿಳಿದುಬಂದಿದೆ.

Facebook Comments

Sri Raghav

Admin