ಶಿರೂರು ಶ್ರೀಗಳ ನಿಧಾನಕ್ಕೆ ದೇವೇಗೌಡರ ತೀವ್ರ ಸಂತಾಪ

ಈ ಸುದ್ದಿಯನ್ನು ಶೇರ್ ಮಾಡಿ

Devegowda--01
ಬೆಂಗಳೂರು, ಜು.19- ಉಡುಪಿ ಶಿರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀಗಳ ನಿಧನದಿಂದ ತೀವ್ರ ನೋವುಂಟಾಗಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಂತಾಪ ವ್ಯಕ್ತಪಡಿಸಿದ್ದಾರೆ. ಶ್ರೀಗಳ ಅಗಲಿಕೆಯಿಂದ ಇಡೀ ಭಕ್ತ ಸಮೂಹಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅತ್ಯಂತ ಕಿರಿಯ ವಹಿಸಿನಲ್ಲೇ ಸನ್ಯಾಸತ್ವ ಪಡೆದಿದ್ದ ಶ್ರೀಗಳಿಗೆ ಸಾಹಿತ್ಯ, ಸಂಗೀತದ ಬಗ್ಗೆಯೂ ಬಹಳ ಆಸಕ್ತಿ ಇತ್ತು. ಸಮಾಜವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಲು ಶ್ರೀಗಳು ಮಾರ್ಗದರ್ಶಕರಾಗಿದ್ದರು. ಇಡೀ ಭಕ್ತ ಸಮೂಹಕ್ಕೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಕೋರಿರುವುದಾಗಿ ಹೇಳಿದರು.

Facebook Comments

Sri Raghav

Admin