27 ಉಪಗ್ರಹಗಳ ಜೋಡಣೆಗೆ 3 ಸಂಸ್ಥೆಗಳ ಜತೆ ಇಸ್ರೋ ಸಹಿ

ಈ ಸುದ್ದಿಯನ್ನು ಶೇರ್ ಮಾಡಿ

Isro--01
ಬೆಂಗಳೂರು, ಜು.19-ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) 27 ಉಪಗ್ರಹಗಳ ಜೋಡಣೆಗಳಿಗಾಗಿ ಮೂರು ಸಂಸ್ಥೆಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿದೆ. ಬೆಂಗಳೂರಿನ ಅಲ್ಫಾ ಟೆಕ್ನೋಲಾಜಿಸ್ ಪ್ರೈವೇಟ್ ಲಿಮಿಟೆಡ್ ಮತ್ತು ಸಮೂಹ ಸಂಸ್ಥೆ ಪಾಲುದಾರಿಕೆ ಸಂಸ್ಥೆಗಳು, ಬೆಂಗಳೂರಿನ ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(ಬಿಇಎಲ್) ಹಾಗೂ ಹೈದರಾಬಾದ್‍ನ ಟಾಟಾ ಅಡ್ವಾನ್ಸ್‍ಡ್ ಸಿಸ್ಟಮ್ಸ್ ಲಿಮಿಟೆಡ್-ಈ ಮೂರು ಸಂಸ್ಥೆಗಳು ಈ ಸಂಬಂಧ ಇಸ್ರೋ ಜತೆ ಒಡಂಬಡಿಕೆಗಳಿಗೆ ಸಹಿ ಹಾಕಿವೆ.

ಬಾಹ್ಯಾಕಾಶನೌಕೆ ಜೋಡಣೆ ಮತ್ತು ಪರೀಕ್ಷೆ ಚಟುವಟಿಕೆಗಳನ್ನು(ಎಐಟಿ) ಕೈಗೊಳ್ಳಲು ಇಸ್ರೋ ಈ ಸಂಸ್ಥೆಗೆ ಹೊರ ಗುತ್ತಿಗೆ ನೀಡಿದೆ. ಮುಂದಿನ ಮೂರು ವರ್ಷಗಳಲ್ಲಿ 27 ಉಪಗ್ರಹಗಳು ಮತ್ತು ಬಾಹ್ಯಾಕಾಶ ನೌಕೆಗಳನ್ನು ಜೋಡಿಸಲು ಮತ್ತು ಪರೀಕ್ಷೆಗೆ ಒಳಪಡಿಸಲು ಈ ಸಂಸ್ಥೆಗಳು ಇಸ್ರೋಗೆ ನೆರವಾಗಲಿದೆ.
ಸಾಮಥ್ರ್ಯ ನಿರ್ಮಾಣ ಚಟುವಟಿಕೆಯ ಭಾಗವಾಗಿ, ಯು.ಆರ್.ರಾವ್ ಉಪಗ್ರಹ ಕೇಂದ್ರವು (ಯುಆರ್‍ಎಸ್‍ಸಿ) ಗಗನನೌಕೆ ಉಪ ವ್ಯವಸ್ಥೆಯಿಂದ ಮೊದಲ್ಗೊಂಡು ಉಪಗ್ರಹ ಜೋಡಣೆ ಮತ್ತು ಪರೀಕ್ಷಾ ಚಟುವಟಿಕೆಗಳನ್ನು ಕೈಗೊಳ್ಳಲು ಭಾರತೀಯ ಉದ್ಯಮಗಳ ಸಹಭಾಗಿತ್ವಕ್ಕೆ ಉತ್ತೇಜನ ನೀಡುವ ಉಪಕ್ರಮ ಕೈಗೊಂಡಿದೆ ಎಂದು ಯುಆರ್‍ಎಸ್‍ಸಿ ತನ್ನ ವೆಬ್‍ಸೈಟ್‍ನಲ್ಲಿ ತಿಳಿಸಿದೆ.

ಇದೇ ಉದ್ದೇಶಕ್ಕಾಗಿ ನಿನ್ನೆ ಯುಆರ್‍ಎಸ್‍ಸಿ-ಇಸ್ರೋ ಈ ಮೂರು ಸಂಸ್ಥೆಗಳೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಿದ್ದು, ಉಪಗ್ರಹ ನಿರ್ಮಾಣ ಚಟುವಟಿಕೆಗಳಲ್ಲಿ ಉದ್ಯಮದ ಸಹಭಾಗಿತ್ವಕ್ಕೆ ಇದರಿಂದ ಹೆಚ್ಚಿನ ಒತ್ತು ನೀಡಿದಂತಾಗಿದೆ ಎಂದು ಯುಆರ್‍ಎಸ್‍ಸಿ ನಿರ್ದೇಶಕ ಎಂ. ಅಣ್ಣಾದೊರೈ ಹೇಳಿದ್ದಾರೆ.

Facebook Comments

Sri Raghav

Admin