ಹೊಟೇಲ್‍ನಲ್ಲಿ ಕಾಫಿ ಕುಡಿಯುವಾಗ ಹೃದಯಾಘಾತವಾಗಿ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Heart-Attakv

ಬೇಲೂರು, ಜು.19- ಬಸ್ ನಿರ್ವಾಹಕರೊಬ್ಬರು ಹೊಟೇಲ್‍ನಲ್ಲಿ ಕಾಫಿ ಕುಡಿಯುವ ಸಂದರ್ಭದಲ್ಲೆ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿರುವ ಘಟನೆ ಬಸ್ ನಿಲ್ದಾಣದಲ್ಲಿ ನಡೆದಿದೆ. ಧರ್ಮಸ್ಥಳದಿಂದ ಬೇಲೂರು ಮಾರ್ಗವಾಗಿ ಕೋಲಾರಕ್ಕೆ ತೆರಳುತ್ತಿದ್ದ ಬಸ್‍ನಲ್ಲಿ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದ ಗೌರಿಬಿದನೂರಿನ 46 ವರ್ಷದ ಆದಿ ನಾರಾಯಣ ಎಂಬುವವರೆ ಹೃದಯಾಘಾತಕ್ಕೊಳಗಾದವರು.

ಇವರು ಧರ್ಮಸ್ಥಳದಿಂದ ಪ್ರಯಾಣಿಕರನ್ನು ಕರೆದುಕೊಂಡು ಬೇಲೂರಿಗೆ ಬಂದು ಬಸ್ ನಿಲ್ದಾಣದ ಹೊಟೇಲ್‍ನಲ್ಲಿ ಕಾಫಿ ಕುಡಿಯುತ್ತಿದ್ದ ಸಂದರ್ಭದಲ್ಲಿ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೆ ನಿರ್ವಾಹಕ ಆದಿ ನಾರಾಯಣರನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲಾಗಲೆ ನಿರ್ವಾಹಕ ಆದಿನಾರಾಯಣ ಸಾವನ್ನಪ್ಪಿದ್ದರು.

ನಿರ್ವಾಹಕ ಸಾವನ್ನಪ್ಪಿರುವ ವಿಷಯ ತಿಳಿದ ಬಸ್ ನಿಲ್ದಾಣದಲ್ಲಿದ್ದ ಇತರೆ ಬಸ್‍ಗಳ ಚಾಲಕ ಮತ್ತು ನಿರ್ವಾಹಕರು ಮತ್ತು ಬಸ್ ನಿಲ್ದಾಣದ ಅಧಿಕಾರಿಗಳು ಸರ್ಕಾರಿ ಆಸ್ಪತ್ರೆಗೆ ತೆರಳಿ ಮೃತ ದೇಹದ ಅಂತಿಮ ದರ್ಶನ ಪಡೆದು ಅಂತಿಮ ಗೌರವ ಸಲ್ಲಿಸಿದರು. ಚಿಕ್ಕಮಗಳೂರು ಘಟಕದ ಅಧಿಕಾರಿ ಅರುಣ್, ತಾಂತ್ರಿಕ ಅಭಿಯಂತರ ನಾಗರಾಜ್, ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ನರಸೇಗೌಡ, ಜಾವಗಲ್ ಪ್ರಸನ್ನ ಸೇರಿದಂತೆ ಕೆಎಸ್‍ಆರ್‍ಟಿಸಿ ಸಿಬ್ಬಂದಿಗಳಿದ್ದರು.

Facebook Comments

Sri Raghav

Admin