ಸೇಡು ತೀರಿಸಿಕೊಳ್ಳಲು ಶಾಲೆಯ ಬಸಿಯೂಟದಲ್ಲಿ ವಿಷ ಬೆರೆಸಿದ ಬಾಲಕಿ..!

ಈ ಸುದ್ದಿಯನ್ನು ಶೇರ್ ಮಾಡಿ

Mid-Day-Meal--01

ಗೋರಖ್‍ಪುರ್,ಜು.19-ತನ್ನ ಸೋದರನ ಕೊಲೆಗೆ ಸೇಡು ತೀರಿಸಿಕೊಳ್ಳಲು ಶಾಲೆಯ ಮಧ್ಯಾಹ್ನದ ಬಸಿಯೂಟದಲ್ಲಿ ವಿಷ ಬೆರಸಲು 7ನೇ ತರಗತಿಯ ಬಾಲಕಿಯೊಬ್ಬಳು ಯತ್ನಿಸಿರುವ ಘಟನೆ ಉತ್ತರಪ್ರದೇಶದ ಡಿಯೋರಿಯಾ ಜಿಲ್ಲೆಯಲ್ಲಿ ನಡೆದಿದೆ. ಈ ಸಂಬಂಧ ಬೌಲಿಯಾ ಗ್ರಾಮದ ಸರ್ಕಾರಿ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಇದೇ ಶಾಲೆಯ ಮೂರನೇ ತರಗತಿಯಲ್ಲಿ ಓದುತ್ತಿದ್ದ ಈ ಬಾಲಕಿಯ ತಮ್ಮನನ್ನು ಐದನೇ ತರಗತಿಯ ಬಾಲಕನೊಬ್ಬ ಏಪ್ರಿಲ್ 2ರಂದು ಕೊಂದಿದ್ದ. ಬಾಲಾಪರಾಧಿ ಈಗ ರಿಮ್ಯಾಂಡ್ ಹೋಮ್‍ನಲ್ಲಿದ್ದಾನೆ.   ತನ್ನ ಸಹೋದರನ ಕೊಲೆಗೆ ಪ್ರತೀಕಾರವಾಗಿ ಶಾಲೆಯ ಎಲ್ಲ ಮಕ್ಕಳನ್ನು ಕೊಲ್ಲುವುದು ಈ ವಿದ್ಯಾರ್ಥಿನಿಯ ಉದ್ದೇಶವಾಗಿತ್ತು.

ಮಂಗಳವಾರ ಈ ಬಾಲಕಿ ಮಧ್ಯಾಹ್ನದ ಬಿಸಿಯೂಟ ತಯಾರಿಸುತ್ತಿದ್ದ ಪಾತ್ರೆಗಳಿಗೆ ವಿಷ ವಸ್ತು ಹಾಕಿದ್ದನ್ನು ಅಡುಗೆ ಸಿಬ್ಬಂದಿ ನೋಡಿ, ಶಾಲಾ ಮುಖ್ಯಸ್ಥರಿಗೆ ದೂರು ನೀಡಿದರು. ಶಾಲಾ ವಿದ್ಯಾರ್ಥಿಗಳು ಆಹಾರ ಸೇವಿಸುವುದಕ್ಕೆ ಮುನ್ನವೇ ಇದು ಪತ್ತೆಯಾಗಿತ್ತು. ಸುದ್ದಿ ತಿಳಿದ ಗ್ರಾಮಸ್ಥರು ಬಾಲಕಿ ತಾಯಿಯನ್ನು ಥಳಿಸಿದರು. ಶಾಲೆಯ ಮುಖ್ಯಸ್ಥರು ನೀಡಿದ ದೂರಿನ ಮೇರೆಗೆ ಬಂಟಕ ಠಾಣೆ ಪೊಲೀಸರು ಈಕೆಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin