ಚರ್ಚೆ ಆರಂಭದಲ್ಲೇ ಲೋಕಸಭೆಯಲ್ಲಿ ಹೈಡ್ರಾಮಾ

ಈ ಸುದ್ದಿಯನ್ನು ಶೇರ್ ಮಾಡಿ

Loksabha--01
ನವದೆಹಲಿ, ಜು.20-ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಟಿಡಿಪಿ ಮಂಡಿಸಿರುವ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಲೋಕಸಭೆಯಲ್ಲಿ ಇಂದು ನಡೆಯುತ್ತಿದೆ. ಕಲಾಪ ಆರಂಭವಾಗುತ್ತಿದ್ದಂತೆ ಬಿಜು ಜನತಾದಳದ 19 ಸಂಸದರು ಸಭಾತ್ಯಾಗ ಮಾಡಿದ ಪ್ರಸಂಗವೂ ಜರುಗಿತು. ಇದರ ಹಿಂದೆಯೇ ಶಿವಸೇನೆಯ 18 ಸಂಸದರೂ ಸಹ ಸದನದಿಂದ ಹೊರನಡೆದರು. ಇದರಿಂದ ಕಲಾಪ ಆರಂಭದಲ್ಲೇ ಲೋಕಸಭೆಯಲ್ಲಿ ಹೈಡ್ರಾಮಾ ನಡೆಯಿತು.

ಈ ಬೆಳವಣಿಗೆಯಿಂದಾಗಿ ಲೋಕಸಭೆಯ ಒಟ್ಟು ಸಾಮಥ್ರ್ಯ 515ಹಾಗೂ ಮ್ಯಾಜಿಕ್ ನಂಬರ್ 258ಕ್ಕೆ ಕುಸಿದಂತಾಗಿದೆ. ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಈ ವಿಷಯ ಕುರಿತು ಚರ್ಚಿಸಲು ಒಂದು ಪಕ್ಷಕ್ಕೆ 20 ರಿಂದ 30 ನಿಮಿಷ ಕಾಲಾವಕಾಶ ನಿಗದಿಗೊಳಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಈ ಸಮಯದಲ್ಲಿ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಲು ಸಾಧ್ಯವಾಗುವುದಿಲ್ಲ. ಇದು ಅತ್ಯಂತ ಕಡಿಮೆ ಸಮಯಾವಕಾಶ. ಹೀಗಾಗಿ ಅವಧಿಯನ್ನು ಹೆಚ್ಚಿಸಬೇಕೆಂದು ಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರಲ್ಲಿ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಬಿಜು ಜನತಾದಳದ (ಬಿಜೆಡಿ) 19 ಸದಸ್ಯರು ತಾವು ಮತದಾನದಿಂದ ದೂರ ಉಳಿಯುವುದಾಗಿ ಹೇಳಿ ಸಭಾತ್ಯಾಗ ಮಾಡಿದರು. ಈ ಘಟನೆ ನಡೆದಾಗ ಸದನದಲ್ಲಿ ಹಾಜರಿದ್ದ ಪ್ರಧಾನಿ ಮೋದಿ ಮುಗುಳ್ನಕ್ಕು ಈ ಬೆಳವಣಿಗೆಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

Facebook Comments

Sri Raghav

Admin