ಜಿಲ್ಲಾ ಉಸ್ತುವಾರಿ ಸಚಿವರ ಸಂಭವನೀಯ ಪಟ್ಟಿ ಇಲ್ಲಿದೆ ನೋಡಿ

ಈ ಸುದ್ದಿಯನ್ನು ಶೇರ್ ಮಾಡಿ

Ministers-01
ಬೆಂಗಳೂರು, ಜು.20- ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಬಹುತೇಕ ಪೂರ್ಣಗೊಂಡಿದ್ದು, ಅಧಿಕೃತ ಪ್ರಕಟಣೆ ಮಾತ್ರ ಬಾಕಿ ಉಳಿದಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಂಪುಟದ ಸಚಿವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನು ವಹಿಸಲಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಸಚಿವರಿಬ್ಬರಿಗೂ ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆ ನೀಡಲಾಗಿದೆ.ಉಭಯ ಪಕ್ಷಗಳ ನಾಯಕರು ಸಮಾಲೋಚನೆ ನಡೆಸಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಹಂಚಿಕೆ ಮಾಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸಂಭವನೀಯ ಜಿಲ್ಲಾ ಉಸ್ತುವಾರಿ ಹಂಚಿಕೆ ಈ ಕೆಳಕಂಡಂತಿದೆ:
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್-ಬೆಂಗಳೂರು ನಗರ
ಜಿ.ಟಿ.ದೇವೇಗೌಡ- ಮೈಸೂರು
ಎಚ್.ಡಿ.ರೇವಣ್ಣ- ಹಾಸನ
ಸಿ.ಎಸ್.ಪುಟ್ಟರಾಜು-ಮಂಡ್ಯ
ಎಸ್.ಆರ್.ಶ್ರೀನಿವಾಸ್-ತುಮಕೂರು
ಪುಟ್ಟರಂಗಶೆಟ್ಟಿ- ಚಾಮರಾಜನಗರ
ಕೃಷ್ಣಬೈರೇಗೌಡ-ಗದಗ
ಎನ್.ಎಚ್.ಶಿವಶಂಕರರೆಡ್ಡಿ-ಚಿಕ್ಕಬಳ್ಳಾಪುರ
ಕೆ.ಜೆ.ಜಾರ್ಜ್-ಕೊಡಗು
ಯು.ಟಿ.ಖಾದರ್-ದಕ್ಷಿಣ ಕನ್ನಡ
ಡಾ.ಜಯಮಾಲ-ಉಡುಪಿ
ಡಿ.ಸಿ.ತಮ್ಮಣ್ಣ-ಶಿವಮೊಗ್ಗ
ಸಾ.ರಾ.ಮಹೇಶ್-ಚಿಕ್ಕಮಗಳೂರು
ಡಿ.ಕೆ.ಶಿವಕುಮಾರ್-ರಾಮನಗರ ಹಾಗೂ ಬಳ್ಳಾರಿ
ಎನ್.ಮಹೇಶ್-ದಾವಣಗೆರೆ
ಜಮೀರ್ ಅಹಮ್ಮದ್ ಖಾನ್-ಬೆಂಗಳೂರು ಗ್ರಾಮಾಂತರ
ವೆಂಕಟರಮಣಪ್ಪ-ಚಿತ್ರದುರ್ಗ
ಆರ್.ಶಂಕರ್-ಹಾವೇರಿ
ರಮೇಶ್ ಜಾರಕಿಹೊಳಿ-ಧಾರವಾಡ, ಬೆಳಗಾವಿ.
ಆರ್.ವಿ.ದೇಶಪಾಂಡೆ -ಉತ್ತರ ಕನ್ನಡ
ಬಂಡೆಪ್ಪ ಕಾಶಂಪುರ್-ಕೊಪ್ಪಳ
ಪ್ರಿಯಾಂಕ್ ಖರ್ಗೆ-ಕಲಬುರ್ಗಿ ಹಾಗೂ ಯಾದಗಿರಿ
ವೆಂಕಟರಾವ್ ನಾಡಗೌಡ-ರಾಯಚೂರು
ಎಂ.ಸಿ.ಮನಗೂಳಿ-ಬಾಗಲಕೋಟೆ
ಶಿವಾನಂದಪಾಟೀಲ್-ವಿಜಯಪುರ
ರಾಜಶೇಖರ ಪಾಟೀಲ್ -ಬೀದರ್ ಜಿಲ್ಲಾ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಕೊನೆಗಳಿಗೆಯಲ್ಲಿ ಒಂದೆರಡು ಜಿಲ್ಲೆ ಹಾಗೂ ಸಚಿವರ ಉಸ್ತುವಾರಿ ಬದಲಾವಣೆಯಾದರೂ ಆಗಬಹುದು ಎಂದು ಉನ್ನತ ಮೂಲಗಳು ತಿಳಿಸಿವೆ.

Facebook Comments

Sri Raghav

Admin