ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆಯಿಂದ ವ್ಯವಹಾರ ಸುಲಭ

ಈ ಸುದ್ದಿಯನ್ನು ಶೇರ್ ಮಾಡಿ

Anna-dorai

ಬೆಂಗಳೂರು,ಜು.20-ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡುವುದರಿಂದ ವ್ಯವಹಾರ ಸುಲಭವಾಗುತ್ತದೆ. ಆದರೆ ಭದ್ರತೆ ಮತ್ತು ಖಾಸಗಿತನ ಹರಣ ವಿಷಯದಲ್ಲಿ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ವಿ.ಆರ್.ರಾವ್ ಉಪಗ್ರಹ ಕೇಂದ್ರ ನಿರ್ದೇಶಕ ಡಾ.ಅಣ್ಣಾದೊರೈ ಹೇಳಿದರು. ಐಸಾಕ್ ಸಂಸ್ಥೆಯ ಬೆಂಗಳೂರು ಘಟಕ ಏರ್ಪಡಿಸಿದ್ದ ತಂತ್ರಜ್ಞಾನದ ಹಂಚಿಕೆ ಮತ್ತು ಸೈಬರ್ ಸೆಕ್ಯೂರಿಟಿ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆಯ ಜೋಡಣೆಯನ್ನು ಕೇಂದ್ರ ಮಾಡುತ್ತಿದೆ. ಇದರಿಂದ ಬ್ಯಾಂಕ್ ವ್ಯವಹಾರದ ಚಟುವಟಿಕೆಗಳು ಸುಲಭವಾಗಿದೆ. ಮುಂದಿನ
ದಿನಗಳಲ್ಲಿ ಇನ್ನಷ್ಟು ಅತ್ಯಾಧುನಿಕವಾದ ವ್ಯವಸ್ಥೆಯನ್ನು ರೂಢಿಸಿಕೊಳ್ಳಲು ಸಾಧ್ಯವಿದೆ ಎಂದರು.

ಆದರೆ ವ್ಯಕ್ತಿಗಳ ಖಾಸಗಿತನಕ್ಕೆ ಧಕ್ಕೆಯಾಗುವ ಸಂಭವವೂ ಇದೆ. ಮನೆಯಲ್ಲೇ ಕುಳಿತು ಇಂಟರ್‍ನೆಟ್ ಮೂಲಕ ಬ್ಯಾಂಕಿಂಗ್ ವ್ಯವಹಾರವನ್ನು ನಿಭಾಯಿಸುವ ಸಂದರ್ಭದಲ್ಲಿ ಭದ್ರತೆ ಬಗ್ಗೆಯೂ ಎಚ್ಚರಿಕೆ ವಹಿಸಬೇಕಾಗುತ್ತದೆ ಎಂದು ಹೇಳಿದರು.  ಸೈಬರ್ ಸೆಕ್ಯೂರಿಟಿ ಎಂಬುದು ಇತ್ತೀಚೆಗೆ ಮೇಲ್ದರ್ಜೆಗೇರುತ್ತಿವೆ. ಉಪಗ್ರಹ ಮೂಲಕ ಎಲ್ಲವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಅಂತರ್ಜಾಲ ಬಳಕೆ ಹೆಚ್ಚಾದಂತೆಲ್ಲ ಅದರ ಮೇಲೆ ದಾಳಿ ಮಾಡುವವರು, ಮಾಹಿತಿ ಕದಿಯುವವರು ಹೆಚ್ಚಾಗಿ ಹುಟ್ಟುಕೊಳ್ಳುತ್ತಿದ್ದಾರೆ. ಈ ಬಗ್ಗೆ  ಅತ್ಯಂತ ಎಚ್ಚರಿಕೆಯ ಅಗತ್ಯವಿದೆ ಎಂದರು.

ಗಡಿ ಪ್ರದೇಶಗಳಲ್ಲಿ ನಡೆಯುವ ಚಟವಟಿಕೆಗಳನ್ನು ಕಚೇರಿಯಲ್ಲೇ ಕುರಿತು ನೋಡುವ ಮತ್ತು ಅದರ ಮೇಲೆ ಕ್ರಮ ವಹಿಸುವಷ್ಟರ ಮಟ್ಟಿಗೆ ತಂತ್ರಜ್ಞಾನ ಮುಂದುವರೆದಿದೆ. ಇದರಿಂದ ಗಡಿಭದ್ರತಾ ಪಡೆ ಮತ್ತು ಹೆಚ್ಚಿನ ರಕ್ಷಣಾ ಸಂಸ್ಥೆಗಳಿಗೆ ಉಪಯುಕ್ತವಾಗಿದೆ. ಅದೇ ಸಮಯದಲ್ಲಿ ಅಂತರ್ಜಾಲದ ಭದ್ರತೆ ಬಗ್ಗೆ ಕಾಳಜಿ ವಹಿಸಬೇಕು. ಸೆಲ್‍ಫೋನ್ ಕಂಪ್ಯೂಟರ್ ಬಳಕೆ ಹೆಚ್ಚಾದಂತೆಲ್ಲ ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದೆ. ಇದರ ಉಪಯೋಗ ಎಷ್ಟಿದೆಯೋ ಅಪಾಯವೂ ಅಷ್ಟೇ ಇದೆ ಎಂದು ಅವರು ಹೇಳಿದರು.  ಐಸಾಕ್ ಸಂಸ್ಥೆಯ ಅಧ್ಯಕ್ಷ ರಾಜರಾಮನ್, ಮುಖಂಡರಾದ ಶ್ರೀಧರ್, ವಿಜಯ್ ವನಿತ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Facebook Comments

Sri Raghav

Admin