ಬಾಲಿವುಡ್‍ನ ಖ್ಯಾತ ಸಾಹಿತಿ ಗೋಪಾಲ್‍ದಾಸ್ ನೀರಜ್ ವಿಧಿವಶ

ಈ ಸುದ್ದಿಯನ್ನು ಶೇರ್ ಮಾಡಿ

Gopal-das

ನವದೆಹಲಿ, ಜು. 20- ಖ್ಯಾತ ಕವಿ ಹಾಗೂ ಬಾಲಿವುಡ್‍ನ ಗೀತಸಾಹಿತಿ ಗೋಪಾಲ್‍ರಾವ್ ನೀರಜ್ (93) ಕರಳುಬೇನೆ ಸಂಬಂಧಿಸಿದ ಕಾಯಿಲೆಯಿಂದ ಏಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.  ಹಿಂದಿ ಹಾಗೂ ಉರ್ದು ಭಾಷೆಗಳಲ್ಲಿ ಹಲವಾರು ಕೃತಿಗಳನ್ನು ರಚಿಸಿರುವ ನೀರಜ್ ಅವರು ಬಾಲಿವುಡ್ ಚಿತ್ರಗಳಿಗೂ ಗೀತೆಗಳನ್ನು ರಚಿಸಿದ್ದಾರೆ.

ನೀರಜ್ ಅವರು ಕನ್ಯಾದಾನ್ ಚಿತ್ರಕ್ಕಾಗಿ ರಚಿಸಿದ್ದ `ನ ಲಿಕ್ ಜೊ ಕಥ್ ತುಜೇ…’ ಎಂಬ ಗೀತೆಗೆ ಖ್ಯಾತ ಗಾಯಕ ಮೊಹಮ್ಮದ್ ರಫಿ ಅವರು ಹಾಡಿದ್ದರು.
ಪ್ರೇಮ್ ಪೂಜಾರಿ ಚಿತ್ರಕ್ಕಾಗಿ ಬರೆದಿದ್ದ ` ಶೋಕ್‍ಹಿಯೋ ಮೈನ್ ಗೋಲಾ..’, ಪೆಹಾಚಾನ್ ಸಿನಿಮಾದ `ವ ಬಸ್ ಯಾಹಿ ಅಪರಾದ್ ಮೈ ಹರ್ ಬಾರ್ ಕರ್‍ತಾ ಹೂಂ…’ , ಮೇರಾ ನಾಮ್ ಚಿತ್ರದ `ಹೇ ಬಾಯ್ ಜರಾ ದೇಖ್‍ಖೇ ಚಲೋ…’ ಎಂಬ ಗೀತೆಗಳು ಜನಪ್ರಿಯವಾಗಿದ್ದವು. ಗೋಪಾಲ್‍ದಾಸ್ ಅವರು ಸಾಹಿತ್ಯ ಲೋಕದಲ್ಲಿ ಮಾಡಿದ ಸೇವೆಯನ್ನು ಗುರುತಿಸಿ 1991ರಲ್ಲಿ ಪದ್ಮಶ್ರೀ, 2007ರಲ್ಲಿ ಪದ್ಮಭೂಷಣ್ ಪ್ರಶಸ್ತಿಗಳು ಲಭಿಸಿದ್ದವು.

Facebook Comments

Sri Raghav

Admin