ಪತ್ನಿಯ ಶೀಲ ಶಂಕಿಸಿ ಕುತ್ತಿಗೆ ಮೇಲೆ ಕಾಲಿಟ್ಟು ತುಳಿದು ಕೊಂದ ಪತಿದೇವ..!

ಈ ಸುದ್ದಿಯನ್ನು ಶೇರ್ ಮಾಡಿ

Wife

ಬೆಂಗಳೂರು, ಜು.20- ಪತ್ನಿಯ ಶೀಲ ಶಂಕಿಸಿ ಜಗಳವಾಡಿದ ಪತಿ ಆಕೆಯ ಕುತ್ತಿಗೆ ಮೇಲೆ ಕಾಲಿಟ್ಟು ತುಳಿದು ಸಾಯಿಸಿರುವ ಹೀನಾಯ ಘಟನೆ ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾಜೇಶ್ವರಿನಗರದ ನಿವಾಸಿ ಸೌಮ್ಯ(29) ಕೊಲೆಯಾದ ಮಹಿಳೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಈಕೆಯ ಪತಿ ಜಗದೀಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

10 ವರ್ಷದ ಹಿಂದೆ ಜಗದೀಶ್‍ನೊಂದಿಗೆ ಸೌಮ್ಯ ವಿವಾಹವಾಗಿದ್ದು, ಇವರಿಗೆ ಒಂದು ಗಂಡು ಮಗುವಿದೆ. ರಾಜೇಶ್ವರಿನಗರದಲ್ಲಿ ದಂಪತಿ ವಾಸವಾಗಿದ್ದು, ಜಗದೀಶ್ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಸೌಮ್ಯ ಗಾರ್ಮೆಂಟ್ಸ್‍ನಲ್ಲಿ ಕೆಲಸ ಮಾಡುತ್ತಿದ್ದರು. ಸೌಮ್ಯ ಮೇಲೆ ಅಕ್ರಮ ಸಂಬಂಧದ ಶಂಕೆ ವ್ಯಕ್ತಪಡಿಸಿ ಪತಿ ರಾತ್ರಿ 9 ಗಂಟೆಯಿಂದ 10 ಗಂಟೆ ಮಧ್ಯೆ ಜಗಳವಾಡಿದ್ದಾನೆ. ಜಗಳದ ಹಂತದಲ್ಲಿ ತಳ್ಳಾಟ, ನೂಕಾಟದ ವೇಳೆ ಸೌಮ್ಯ ಕೆಳಕ್ಕೆ ಬಿದ್ದಿದ್ದಾಳೆ.

ಈ ಸಂದರ್ಭದಲ್ಲಿ ಜಗದೀಶ ಆಕೆಯ ಕುತ್ತಿಗೆ ಮೇಲೆ ಕಾಲಿಟ್ಟು ತುಳಿದು ಸಾಯಿಸಿದ್ದಾನೆ. ಸುದ್ದಿ ತಿಳಿದ ರಾಜಗೋಪಾಲನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿ ಜಗದೀಶ್‍ನನ್ನು ಬಂಧಿಸಿ ಸ್ಥಳ ಪರಿಶೀಲನೆ ನಡೆಸಿ ಶವವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ.
ಈ ಸಂಬಂಧ ರಾಜಗೋಪಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin