ಪ್ಯಾರಿಸ್‍ನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಶೇರಿಂಗ್ ಸೇವೆ

ಈ ಸುದ್ದಿಯನ್ನು ಶೇರ್ ಮಾಡಿ

ds-3

ಸಂಚಾರ ದಟ್ಟಣೆ ಮತ್ತು ವಾಯು ಮಾಲಿನ್ಯ ನಿಯಂತ್ರಣದಲ್ಲಿ ಇದೊಂದು ವಿಭಿನ್ನ ಪ್ರಯತ್ನ. ಇದಕ್ಕಾಗಿ ಪ್ಯಾರಿಸ್‍ನಲ್ಲಿ ಎಲೆಕ್ಟ್ರಿಕ್ ಸ್ಟ್ಯಾಂಡಿಂಗ್ ಸ್ಕೂಟರ್ ಶೇರಿಂಗ್ ಸೇವೆ ಆರಂಭಗೊಂಡಿದೆ. ಫ್ರಾನ್ಸ್ ರಾಜಧಾನಿ ಪ್ಯಾರಿಸ್‍ನಲ್ಲಿ ಎಲೆಕ್ಟಿಕ್ ಸ್ಟ್ಯಾಂಡಿಂಗ್ ಸ್ಕೂಟರ್‍ಗಳನ್ನು ಬಾಡಿಗೆ ನೀಡುವ ಸೇವೆ ಆರಂಭವಾಗಿದೆ. ಅಮೆರಿಕದ ಕ್ಯಾಲಿಫೋರ್ನಿಯಾದ ಬೈಸಿಕಲ್ ಶೇರಿಂಗ್ ಸರ್ವಿಸ್ ಸಂಸ್ಥೆ-ಲೈಮ್ ಈ ಸೌಲಭ್ಯವನ್ನು ಈಗ ಫ್ಯಾಷನ್ ನಗರಿ ಪ್ಯಾರಿಸ್‍ಗೂ ವಿಸ್ತರಿಸಿದೆ.
ಲೈಮ್ ವಿದ್ಯುತ್ ಸ್ಕೂಟರ್‍ಗಳಿಗೆ ಮೊಬೈಲ್ ಆ್ಯಪ್ ಮೂಲಕ ಲಾಕ್ ಮಾಡುವ ವ್ಯವಸ್ಥೆ ಅಳವಡಿಸಲಾಗಿದೆ. ಈ ಪುಟ್ಟ ಸ್ಕೂಟರ್‍ನನ್ನು ಗ್ರಾಹಕರು ಎಲ್ಲಿ ಬೇಕಾದರೂ ಬಾಡಿಗೆ ಪಡೆದು ಸವಾರಿ ಮಾಡಬಹುದಾಗಿದೆ. ಒಂದು ಬಾರಿ ಸವಾರಿಗೆ 1.16 ಡಾಲರ್ ಬಾಡಿಗೆ ನಿಗದಿಗೊಳಿಸಲಾಗಿದೆ.  ಗಂಟೆಗೆ 24 ತಾಸುಗಳ ಗರಿಷ್ಠ ವೇಗದಲ್ಲಿ ಚಲಿಸುವ ಈ ಸ್ಕೂಟರ್‍ಗಳು 50 ಕಿಲೋಮೀಟರ್‍ಗಳವರೆಗೆ ಚಲಿಸುವ ಸಾಮಥ್ರ್ಯ ಹೊಂದಿರುತ್ತವೆ.  ಎಲ್ಲ ಸ್ಕೂಟರ್‍ಗಳನ್ನು ಪ್ರತಿ ರಾತ್ರಿ 9 ಗಂಟೆಗೆ ರೀಚಾರ್ಜ್ ಮಾಡಿ ದುರಸ್ತಿಗೊಳಿಸಲಾಗುತ್ತದೆ ಎನ್ನುತ್ತರೆ ಲೈಮ್ ಫ್ರಾನ್ಸ್ ನಿರ್ದೇಶಕ ಅರ್ಥರ್ ಲೂಯಿಸ್ ಜಾಕ್ವೀರ್.

ds-1 ds

Facebook Comments

Sri Raghav

Admin