ಇದ್ದಕ್ಕಿದ್ದಂತೆ ರಾಹುಲ್ ಮೋದಿಯನ್ನು ತಬ್ಬಿಕೊಂಡಿದ್ದೇಕೆ..?

ಈ ಸುದ್ದಿಯನ್ನು ಶೇರ್ ಮಾಡಿ

Loksabha-Rahul-Modi--01

ನವದೆಹಲಿ, ಜು.20-ರಾಹುಲ್‍ಗಾಂಧಿ ದಿಢೀರನೆ ಪ್ರಧಾನಿ ಬಳಿ ಬಂದಿದ್ದೇಕೆ? ತಬ್ಬಿಕೊಂಡಿದ್ದೇಕೆ? ಅಷ್ಟೊಂದು ಪ್ರೀತಿಯೇ ಅಥವಾ ಸಹನೆ ಅವರಿಗೆ ಬಂದಿದ್ದಾದರೂ ಹೇಗೆ? ಇಂತಹ ಮಾತುಗಳು ಈಗ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಸದನದಲ್ಲಿಂದು ಪ್ರಧಾನಿ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿ ಟೀಕೆ ಮಾಡಿದ ರಾಹುಲ್‍ಗಾಂಧಿಯ ಈ ನಡೆಗೆ ರಾಜಕೀಯ ವಿಶ್ಲೇಷಕರು ತಮ್ಮದೇ ಆದ ರೀತಿಯಲ್ಲಿ ವರ್ಣಿಸಲಾರಂಭಿಸಿದ್ದಾರೆ.

ಕೆಲವರು ಇದು ರಾಹುಲ್ ಅವರು ಸಂಸತ್‍ನ ನಿಯಮವನ್ನು ತಿಳಿದಿಲ್ಲ ಎಂದರೆ, ಮತ್ತೆ ಕೆಲವರು ಇಂತಹ ಘಟನೆಗಳು ಬಹಳ ವಿರಳ. ಆದರೂ ರಾಹುಲ್‍ಗಾಂಧಿ ಹೀಗೆ ಮಾಡುತ್ತಾರೆ ಎಂದು ಊಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇನ್ನೂ ಹಲವರು ಕಾಂಗ್ರೆಸ್ ಮೇಲೆ ಈಗ ಹಲವಾರು ಗುರುತರ ಆರೋಪಗಳು ಕೇಳಿ ಬರುತ್ತಿವೆ. ಕಾನೂನು ಸಂಕಷ್ಟಗಳಿಗೆ ಸಿಲುಕುತ್ತಿದ್ದಾರೆ. ಅದರಿಂದ ತಪ್ಪಿಸಿಕೊಳ್ಳಲು ಪ್ರಧಾನಿ ಬಳಿ ಮೃದು ಧೋರಣೆ ತಳೆದಿದ್ದಾರೆ ಎಂದು ಕೂಡ ಹೇಳುತ್ತಿದ್ದಾರೆ.

ಲೋಕಸಭೆಯಲ್ಲಿ ನಡೆದಿದ್ದೇನು..?

ಲೋಕಸಭೆಯಲ್ಲಿಂದು ಅವಿಶ್ವಾಸ ನಿರ್ಣಯ ಚರ್ಚೆ ಹಲವು ಕುತೂಹಲಕಾರಿ ಘಟನೆಗಳು ನಡೆದು ಎಲ್ಲರನ್ನು ಹುಬ್ಬೇರುವಂತೆ ಮಾಡಿತು. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಎನ್‍ಡಿಎ ಸರ್ಕಾರದ ವಿರುದ್ಧ ಟೀಕಾಪ್ರಹಾರವನ್ನೇ ನಡೆಸಿದ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯವರು ಮಾತು ಮುಗಿಸಿದ ನಂತರ ನೇರವಾಗಿ ಸ್ಪೀಕರ್ ಪೀಠದತ್ತ ಬಂದರು.

ಏನಾಯಿತು ಎಂದು ಎಲ್ಲರೂ ಅಚ್ಚರಿಯಿಂದ ಅವರನ್ನೇ ದೃಷ್ಟಿಯಿಟ್ಟು ನೋಡುತ್ತಿದ್ದಾಗ ಸೀದಾ ಪ್ರಧಾನಿ ಮೋದಿಯವರ ಬಳಿ ಬಂದು ನಮಸ್ಕರಿಸಿ ಕೈ ಕುಲುಕಿ, ತಬ್ಬಿಕೊಂಡರು . ಅದಕ್ಕೆ ಪ್ರತಿಯಾಗಿ ಮೋದಿ ಕೂಡ ಬೆನ್ನು ತಟ್ಟಿ ಏನೋ ಸಲಹೆ ಕೊಟ್ಟರು. ಈ ಕುತೂಹಲಕಾರಿ ಸನ್ನಿವೇಶವನ್ನು ಆಡಳಿತ ಪಕ್ಷದವರು ನೋಡಿ ನಕ್ಕರೆ, ಪ್ರತಿಪಕ್ಷದ ಸಾಲಿನಲ್ಲಿ ಕುಳಿತಿದ್ದವರಿಂದ ಮೆಚ್ಚುಗೆ ವ್ಯಕ್ತವಾಯಿತು. ಸ್ವತಃ ಸೋನಿಯಾಗಾಂಧಿಯವರೇ ಮೇಜು ಕುಟ್ಟಿ ಮಗನ ನಿಲುವನ್ನು ಹಸನ್ಮುಖಿಯಾಗಿ ಬೆಂಬಲಿಸಿದರು.

Facebook Comments

Sri Raghav

Admin