ವಿದ್ಯುತ್ ಶಾರ್ಟ್‍ಸಕ್ರ್ಯೂಟ್’ನಿಂದ 18 ಲಕ್ಷ ಮೌಲ್ಯದ ವಸ್ತುಗಳು ಭಸ್ಮ

ಈ ಸುದ್ದಿಯನ್ನು ಶೇರ್ ಮಾಡಿ

mulabaagilu
ಮುಳಬಾಗಿಲು, ಜು.20- ತಾಲ್ಲೂಕಿನ ತಾಯಲೂರು ಸರ್ಕಾರಿ ಪ್ರೌಢ ಶಾಲೆಯ ಕಂಪ್ಯೂಟರ್ ಪ್ರಯೋಗ ಶಾಲೆಯಲ್ಲಿ ಆಕಸ್ಮಿಕವಾಗಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಸಂಭವಿಸಿ ಸುಮಾರು 18 ಲಕ್ಷ ರೂ. ಮೌಲ್ಯದ ವಸ್ತುಗಳು ಮತ್ತು ಯಂತ್ರೋಪಕರಣಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ. ಶಾಲೆಯ ಕಂಪ್ಯೂಟರ್ ಕೊಠಡಿಯಲ್ಲಿ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ 18 ಕಂಪ್ಯೂಟರ್, 2 ಯುಪಿಎಸ್, 24 ಬ್ಯಾಟರಿ, ಒಂದು ಜೆರಾಕ್ಸ್ ಪ್ರಿಂಟರ್, 50 ಚೇರು, ಒಂದು ಟಿವಿ, 16 ಟೇಬಲ್ಲು, ಒಂದು ಆಂಪ್ಲಿಫೈಯರ್ ಸೆಟ್ಟು ಸುಟ್ಟು ಭಸ್ಮವಾಗಿವೆ.

ಕಂಪ್ಯೂಟರ್ ಕೊಠಡಿ ಸುಟ್ಟು ಕರಕಲಾಗಿದ್ದು ಇದರಲ್ಲಿ ಶಾಲೆಗೆ ಸಂಬಂಧಿಸಿದ ದಾಖಲೆ ಪುಸ್ತಕಗಳು, ಓಚರುಗಳು ಮುಂತಾದ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ ಎಂದು ಮುಳಬಾಗಿಲು ಗ್ರಾಮಾಂತರ ಠಾಣೆಯಲ್ಲಿ ಶಾಲೆಯವರು ದೂರು ನೀಡಿದ್ದಾರೆ. ಘಟನೆ ಮುಂಜಾನೆ ಸಮಯದಲ್ಲಿ ಸಂಭವಿಸಿರುವುದರಿಂದ ಶಾಲೆಯಲ್ಲಿ ಯಾರೂ ಮಕ್ಕಳಿಲ್ಲದ ಕಾರಣದಿಂದಾಗಿ ಯಾವುದೇ ಅನಾಹುತ ಸಂಭವಿಸಿಲ್ಲ. ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿರುವ ಕುರಿತು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಾಗಿದೆ ಎಂದು ಶಾಲೆಯ ಉಪ ಪ್ರಾಂಶುಪಾಲೆ ನಾರಾಯಣಮ್ಮ ತಿಳಿಸಿದರು.

Facebook Comments

Sri Raghav

Admin