ವಲಯ ಅರಣ್ಯಾಧಿಕಾರಿ ಮನೆ ಮೇಲೆ ಎಸಿಬಿ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ACB

ಬೆಂಗಳೂರು, ಜು.21-ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಯಲ್ಲಾಪುರದ ಕಿರುವತ್ತ ವಲಯ ಅರಣ್ಯಾಧಿಕಾರಿ ಚಂದ್ರಕಾಂತ ಗೋವಿಂದ ನಾಯ್ಕ ಅವರ ಮನೆ, ವಸತಿ ಗೃಹ ಹಾಗೂ ಕಚೇರಿಗಳ ಮೇಲೆ ಮೇಲೆ ಭ್ರಷ್ಟಾಚಾರ ನಿಗ್ರಹದಳ ದಾಳಿ ನಡೆಸಿದೆ. ತನಿಖೆಯಿಂದ ಅಂಕೋಲಾ ತಾಲೂಕಿನ ಬೇಲೆಕೇರಿ ಹೋಬಳಿ ಸಕಲಬೇಣ ಗ್ರಾಮದಲ್ಲಿ ಒಂದು ಮನೆ, 5 ನಿವೇಶನ, ಅಂಕೋಲಾ ತಾಲೂಕಿನ ಶಿರಕುಳಿ ಗ್ರಾಮದಲ್ಲಿ ಒಂದು ನಿವೇಶನ ಮತ್ತು 10.05 ಎಕರೆ ಕೃಷಿ ಭೂಮಿ, ಶೇಡಾಗಿರಿ ಗ್ರಾಮದಲ್ಲಿ ಒಂದು ನಿವೇಶನ, ಬೋಗ್ರಿಬೈಲ್ ಗ್ರಾಮದಲ್ಲಿ ಒಂದು ನಿವೇಶನ, ಕಾರವಾರ ತಾಲೂಕು ಬಾಡ ಗ್ರಾಮದಲ್ಲಿ ಒಂದು ನಿವೇಶನ ಹಾಗೂ ಎರಡು ಫ್ಲ್ಯಾಟ್, 698 ಗ್ರಾಂ ಚಿನ್ನಾಭರಣ, ಒಂದು ಟಾಟಾ ಇಂಡಿಗೋ ಕಾರು, ದ್ವಿಚಕ್ರ ವಾಹನ, 2.43 ಲಕ್ಷ ನಗದು, ಬ್ಯಾಂಕ್ ಖಾತೆಯಲ್ಲಿ 2.74 ಲಕ್ಷ ಠೇವಣಿ ಹಾಗೂ 8 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸೇರಿದಂತೆ ಚರ ಹಾಗೂ ಸ್ಥಿರ ಆಸ್ತಿಗಳನ್ನು ಪತ್ತೆ ಮಾಡಲಾಗಿದೆ. ಆಸ್ತಿ ಗಳಿಕೆಯ ಮೂಲದ ಬಗ್ಗೆ ತನಿಖೆ ಹಾಗೂ ದಾಖಲೆಗಳ ಪರಿಶೀಲನಾ ಕಾರ್ಯ ಮುಂದುವರೆದಿದೆ.

Facebook Comments

Sri Raghav

Admin