ವನ್ಯ ಜೀವಿಗಳ ಚರ್ಮ ಮಾರಾಟ ಮಾಡುತಿದ್ದ ಉತ್ತರ ಕನ್ನಡ ಜಿಲ್ಲೆಯ 8 ಮಂದಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

 

crime

ಬೆಂಗಳೂರು, ಜು.21-ವಿವಿಧ ವನ್ಯಜೀವಿಗಳ ಚರ್ಮವನ್ನು ಚೀಲದಲ್ಲಿ ತಂದು ಮಾರಾಟ ಮಾಡುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಎಂಟು ಮಂದಿಯನ್ನು ಉತ್ತರ ವಿಭಾಗದ ಮಹಾಲಕ್ಷ್ಮಿಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ ರತ್ನಾಕರ್ ನಾಯ್ಕ್ (30), ಕೃಷ್ಣ ಗಣಪ್ಪ ನಾಯಕ್ (60) ಉದಯ್ ಗಂಗಾಧರ್ ರಾಯ್ಕರ್ (48), ಉದಯ್ ರಾಮನಾಯ್ಕ್ (59), ಮಹೇಂದ್ರ ಹೆಗಡೆ (19), ಮಂಜುನಾಥ ನಾಯ್ಕ(24), ರಾಘವೇಂದ್ರ ನಾರಾಯಣ ಪೂಜಾರಿ(27) ಮತ್ತು ಸುನೀಲ್ ನಾಯಕ್ (24)ಬಂಧಿತ ಆರೋಪಿಗಳು.

ಬಂಧಿತರಿಂದ ಒಂದು ಚಿರತೆ ಹಾಗೂ ಜಿಂಕೆಯ ಚರ್ಮ, ಆರು ಜಿಂಕೆಯ ಕೊಂಬುಗಳನ್ನು ಮಹಾಲಕ್ಷ್ಮಿಲೇಔಟ್ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮೊನ್ನೆ ರಾತ್ರಿ 8ಗಂಟೆಯಲ್ಲಿ ಕಿರ್ಲೋಸ್ಕರ್ ಪೌಡ್ರಿ ಹತ್ತಿರ ಗೋಣಿ ಚೀಲದಲ್ಲಿ ಚಿರತೆ ಚರ್ಮ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡಲು ಹೊಂಚು ಹಾಕುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ 8 ಮಂದಿಯನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಂಡಿದ್ದಾರೆ. ಮಲ್ಲೇಶ್ವರಂ ಉಪವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಧನಂಜಯ ಅವರ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಲೋಹಿತ್, ಪಿಎಸ್‍ಐ ವೆಂಕಟರಮಣಪ್ಪ ಅವರನ್ನೊಳಗೊಂಡ ತಂಡ ಈ ದಾಳಿ ನಡೆಸಿತು.

Facebook Comments