ವಿಶ್ವಾಸ ಗೆದ್ದ ಎನ್‌ಡಿಎ, ಪ್ರತಿಪಕ್ಷಗಳಿಗೆ ಭಾರೀ ಮುಖಭಂಗ, ಮೋದಿ ಕೊಟ್ಟ ಉತ್ತರ ಹೇಗಿತ್ತು..?

ಈ ಸುದ್ದಿಯನ್ನು ಶೇರ್ ಮಾಡಿ

Modi-And-Rahul-Hug

ನವದೆಹಲಿ. ಜು.21 : ಟಿಡಿಪಿ ನೇತೃತ್ವದಲ್ಲಿ ಮಂಡಿಸಲಾಗಿದ್ದ ಅವಿಶ್ವಾಸ ನಿರ್ಣಯದಲ್ಲಿ ಆಡಳಿತಾರೂಢ ಎನ್ ಡಿ ಎ ಸರ್ಕಾರಕ್ಕೆ ಗೆಲುವು ಸಾಧಿಸಿದ್ದು, ಪ್ರತಿಪಕ್ಷಗಳಿಗೆ ಭಾರೀ ಮುಖಭಂಗವಾಗಿದೆ. ಅವಿಶ್ವಾಸ ನಿರ್ಣಯದ ಪರ 125ಮತಗಳು ಬಂದರೆ, ವಿರುದ್ದವಾಗಿ 325 ಮತಗಳು ಚಲಾವಣೆಯಾದವು. 11 ಮಂದಿ ಸದಸ್ಯರು ತಡಸ್ಥರಾದರೆ, 39 ಮಂದಿ ಸಂಸದರು ಬಹುಮತದಿಂದ ದೂರ ಉಳಿದಿದ್ದರು.

ಸುಮಾರು ಒಂದೂವರೆ ದಶಕದ ನಂತರ ಲೋಕಸಭೆಯಲ್ಲಿ ಮಂಡಿಸಲಾಗಿದ್ದ ಅವಿಶ್ವಾಸ ನಿರ್ಣಯವನ್ನು ಬಿಜೆಪಿ ನೇತೃತ್ವದ ಎನ್ ಡಿಎ ಯಶಸ್ವಿಯಾಗಿ ಎದುರಿಸಿರುವುದರಿಂದ ಈ ಬೆಳವಣಿಗೆ ಮುಂಬರುವ ಲೋಕಸಭಾ ಚುನಾವಣಾ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆ ಇದೆ.  ಇನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಅಶ್ವಮೇಧವನ್ನು ಕಟ್ಡಿ ಹಾಕಿ, ತೃತೀಯ ರಂಗ ರಚನೆ ಮಾಡಲು ಹೊರಟಿದ್ದ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳಿಗೆ ತೀವ್ರ ಹಿನ್ನಡೆಯಾಗಿದೆ.
ಲೋಕಸಭೆಯಲ್ಲಿ ಸ್ಪಷ್ಟ ಬಹುಮತ ಹೊಂದಿದ್ದ ಬಿಜೆಪಿಗೆ ಅವಿಶ್ವಾಸ ನಿರ್ಣಯವನ್ನು ಎದುರಿಸಲು ಯಾವುದೇ ಸಮಸ್ಯೆ ಇರಲಿಲ್ಲ. ಆದರೆ, ತನ್ನ ಎದುರಾಳಿ ಪಕ್ಷ ಒಗ್ಗಟ್ಟು ಪ್ರದರ್ಶನಕ್ಕೆ ಅವಕಾಶ ನೀಡಬಾರದೆಂಬ ಗುರಿಯನ್ನು ಸಾಧಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.

ಆರಂಭದಲ್ಲೇ ಹಿನ್ನಡೆ : 
ಅವಿಶ್ವಾಸ ನಿರ್ಣಯ ಮಂಡಿಸಿದ್ದ ವಿರೋಧ ಪಕ್ಷಗಳಿಗೆ ಪ್ರಾರಂಭದಲ್ಲೇ ಭಾರಿ ಹಿನ್ನಡೆ ಅನುಭವಿಸಬೇಕಾಯಿತು. ಬೆಂಬಲ ನೀಡಬಹುದು ಎಂದು ಹೇಳಲಾಗಿದ್ದ ಬಿಜೆಡಿಯ 18 ಮಂದಿ ಸದ ನಿರ್ಣಯವನ್ನು ವಿರೋಧಿಸಿ ಸದನದಿಂದ ಹೊರ ನಡೆದರು. ಇನ್ನು ಬಿಜೆಪಿಯನ್ನು ಹಾದಿ ಬೀದಿಯಲ್ಲಿ ಬಹಿರಂಗವಾಗಿಯೇ ಟೀಕೆ ಮಾಡುತ್ತಿದ್ದ ಮಿತ್ರ ಪಕ್ಷ ಶಿವಸೇನೆಯ 19 ಮಂದಿ ಸದಸ್ಯರು ಮತದಾನದಿಂದ ದೂರ ಉಳಿಯುವ ತೀರ್ಮಾನಕ್ಕೆ ಬಂದಿದ್ದು, ವಿರೋಧ ಪಕ್ಷಗಳಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂಬುದು ಸಾಬೀತಾಗಿತ್ತು.ದೇಶದಲ್ಲಿ ನಡೆಯುತ್ತಿರುವ ದಲಿತರ ಮೇಲಿನ ಹಲ್ಲೆ, , ಅಗತ್ಯ ವಸ್ತುಗಳ ಬೆಲೆ ಹೆಚ್ಚಳ, ರೈತರ ಬೆಳೆಗಳಿಗೆ ಬೆಂಬಲ ಬೆಲೆ ಸಿಗದಿರುವುದು, ಗೋ ರಕ್ಷಣೆಯ ಹೆಸರಿನಲ್ಲಿ ಕೆಲ ಸಂಘಟನೆಗಳು ನಡೆಸುತ್ತಿರುವ ಹಲ್ಲೆ ಸೇರಿದಂತೆ ಸರ್ಕಾರದ ವೈಪಲ್ಯಗಳ ಬಗ್ಗೆ ಪ್ರತಿಪಕ್ಷಗಳು ಸದನವನ್ನು ಚನ್ನಾಗಿಯೇ ಸದ್ಬಳಕೆ ಮಾಡಿಕೊಂಡವು.

ನರೇಂದ್ರ ಮೋದಿ ಸರ್ಕಾರದ ಜನ ವಿರೋಧಿ ನೀತಿ, ಹಾಗೂ ಚುನಾವಣೆಗೂ ಮುನ್ನಾ ದೇಶದ ಜನತೆಗೆ ನೀಡಿದ ಆಶ್ವಾಸನೆಯನ್ನು ಈಡೇರಿಸುವಲ್ಲಿ ಸರ್ಕಾರ ವೈಪಲ್ಯಗಳನ್ನು ಪ್ರತಿಪಕ್ಷಗಳು ಎಳೆಎಳೆಯಾಗಿ ಬಿಡಿಸಿಟ್ಟರು. ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಸೇರಿದಂತೆ ಮತ್ತಿತರ ಪಕ್ಷದ ಸಂಸದರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.  ಅದರಲ್ಲೂ ರಾಹುಲ್ ಗಾಂಧಿ ಯಂತೂ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿಶ್ ಷಾ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಫ್ರಾನ್ಸ್ ದೇಶದ ಜೊತೆ ಭಾರತ ಮಾಡಿಕೊಂಡಿರುವ ರಾಫೆಲ್ ಯುದ್ಧ ವಿಮಾನದ ಒಪ್ಪಂದದ ಬಗ್ಗೆ ಗಂಭೀರ ಆರೋಪ‌ ಮಾಡಿದ್ದು, ಸದನದಲ್ಲಿ ಕೋಲಾಹಲ ಸೃಷ್ಟಿಸಿತು.

ಮೋದಿ ತಿರುಗೇಟು : 

ಇನ್ನು ಸುಧೀರ್ಘ ಚರ್ಚೆಯ ನಂತರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ವಿಪಕ್ಷಗಳಿಗೆ ಬಹುಮತವೇ ಇಲ್ಲ. ಆದರೂ ನಮ್ಮ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ. ಇದರಿಂದ ನೀವು ಸಾಧಿಸಿದ್ದಾರೂ ಏನನ್ನು ಎಂದು ಪ್ರತಿಪಕ್ಷಗಳಿಗೆ ಟಾಂಗ್ ನೀಡಿದರು. ಸರ್ಕಾರಕ್ಕೆ ಬಹುಮತ ಇದೆ ಎಂದು ಗೊತ್ತಿದ್ದರೂ ನೀವು ಅವಿಶ್ವಾಸ ನಿರ್ಣಯ ಮಂಡಿಸಿದಿರಿ.ಇದರಿಂದ ನೀವು ಸಾಧಿಸಿದ್ದಾರೂ ಏನು.?ಆಕಾಶ ಗುಡುಗಿತೇ?.ಭೂಮಿ ಕಂಪಿಸಿತೇ? ಎಂದು ಪ್ರಶ್ನಿಸಿದರು.

ಮೋದಿ ಹಠಾವೋ,‌ದೇಶ್ ಬಚಾವೋ ಎಂದು ವಿರೋಧ ಪಕ್ಷದವರು ಹೇಳುತ್ತಿದ್ದಾರೆ. ನಾನು ಈ ಮಾತನ್ನು ಕೇಳಿ ಆಶ್ಚರ್ಯ ಚಕಿತನಾಗಿದ್ದೇನೆ. 30 ವರ್ಷಗಳ ಬಳಿಕ ನಮ್ಮ ಪಕ್ಷ ಸ್ಪಷ್ಟ ಜನಾದೇಶ ಪಡೆದು ಆಡಳಿತ ನಡೆಸುತ್ತದೆ. ಇದನ್ನು ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಕುಟುಕಿದರು. 2019ರಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಬಂದರೂ ನಾನೇ ಪ್ರಧಾನ ಮಂತ್ರಿಯಾಗಿ ಮುಂದುವರೆಯುತ್ತೇನೆ. ಮೊದಲು ನಿಮ್ಮ ಮಿತ್ರ ಪಕ್ಷಗಳನ್ನು ಬಲಪಡಿಸಿಕೊಂಡು ನಂತರವೇ ಅಧಿಕಾರದ ಕನಸು ಕಾಣಿರಿ ಎಂದು ಕಾಲೆಳೆದರು.
ನಮಗೆ ಕೇವಲ ಬಹುಮತ ಬಂದಿಲ್ಲ. ದೇಶದ 125 ಕೋಟಿ ಜನತೆಯ ಆರ್ಶಿವಾದವೂ ಇದೆ.ಯಾವುದೇ ಸಮಸ್ಯೆಗಳ ಬಗ್ಗೆ ಚರ್ಚೆಸಲು ಸರ್ಕಾರ ಸಿದ್ದವಿದ್ದರೂ ಅನಗತ್ಯವಾಗಿ ಅವಿಶ್ವಾಸ ನಿರ್ಣಯ ಮಂಡಿಸಿದಿರಿ.2024ರಲ್ಲೂ ನೀವು ಅವಿಶ್ವಾಸ ನಿರ್ಣಯ ಮಂಡನೆ ಮಾಡಿದರೂ ಅಗಲೂ ನಾವು ಗೆದ್ದು ತೋರಿಸುತ್ತವೆ ಎಂದು ಕಾಂಗ್ರೆಸ್ ಗೆ ಸವಾಲು ಹಾಕಿದರು. ಮುಂದಿನ ಚುನಾವಣೆ ಬಳಿಕ ರಾಹುಲ್ ಗಾಂಧಿ ಪ್ರಧಾನಿಯಾಗುವರೋ? ಇಲ್ಲವೋ? ಎಂಬುದನ್ನು ಜನರು ತೀರ್ಮಾನಿಸಬೇಕು. ಆದರೆ, ರಾಹುಲ್ ಪ್ರಧಾನಿಯಾಗಲು ಆತುರಕ್ಕೆ ಬಿದ್ದಿದ್ದಾರೆ.ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದೀರಿ. ನಿಮ್ಮ ಮಿತ್ರಪಕ್ಷಗಳ ಬಗ್ಗೆ ನಿಮಗೆ ನಂಬಿಕೆ ಇದೆಯೇ?.

ಪ್ರಜಾಪ್ರಭುತ್ವದಲ್ಲಿ ಜನತಾ ಜನಾರ್ದನ ನೀಡುವ ತೀರ್ಪು ಅಂತಿಮ. ನಾನು ಅಹಂಕಾರಿಯಲ್ಲ, ಯಾರಿಗೆ ಅಧಿಕಾರ ಇಲ್ಲವೋ ಅವರಿಗೆ ಅಹಂಕಾರ ಬಂದಿದೆ ಎಂದು ತರಾಟೆಗೆ ತೆಗೆದುಕೊಂಡರು. ನೀವು ನಾನು ಮಾತನಾಡುವಾಗ ಚೀರಾಡುತ್ತೀರಿ. ಇಡೀ ದೇಶವೇ ನಿಮ್ಮನ್ನು ಗಮನಿಸುತ್ತಿದೆ. ನೀವು ಕಿರುಚಾಡುವ ಮೂಲಕ ಸತ್ಯದ ಕತ್ತು ಹಿಸುಕಲು ಪ್ರಯತ್ನ ಮಾಡುತ್ತಿದ್ದಾರೆ. ರಫೆಲ್‌ ಡೀಲ್‌ ಕುರಿತು ಮಾತನಾಡಿದ ಪ್ರಧಾನಿ, ಫ್ರಾನ್ಸ್ ಹಾಗೂ ಭಾರತ ನಡುವೆ ಎಲ್ಲಾ ವ್ಯವಹಾರಗಳು ಪಾರದರ್ಶಕವಾಗಿಯೇ ನಡೆದಿದೆ. ನೀವು ಇದರ ಬಗ್ಗೆ ಬಾಲಿಶ ಹೇಳಿಕೆಗಳನ್ನು ನೀಡಿ ದೇಶದ ಭದ್ರತೆಗೆ ಧಕ್ಕೆ ತರಬೇಡಿ ಎಂದು ತವಿದರು. ವಿಪಕ್ಷಗಳಿಗೆ ಸರ್ಜಿಕಲ್‌ ಸ್ಟ್ರೈಲ್‌ ಬಗ್ಗೆ ನಂಬಿಕೆ ಇಲ್ಲ. ಅದನ್ನು ಜುಮ್ಲಾ ಎಂದು ಟೀಕಿಸುತ್ತಾರೆ. ಆದರೆ ನೆನಪಿಟ್ಟುಕೊಳ್ಳಿ ನನ್ನ ಬಗ್ಗೆ ಬೇಕಾದ್ರೆ ಮಾತನಾಡಿ. ಆದರೆ ದೇಶಕ್ಕಾಗಿ ಜೀವ ತ್ಯಾಗ ಮಾಡಿದ ಸೈನಿಕರ ಬಗ್ಗೆ ಮಾತನಾಡಬೇಡಿ ಎಂದರು.

ಕೆಲವರು ಹೇಳುತ್ತಾರೆ, ನಮಗೆ ಸಂಖ್ಯೆ ಇಲ್ಲ ಎಂದು ಆದರೆ ನಮಗೆ ವಿಶ್ವಾಸಮತ ಸಾಬೀತು ಪಡಿಸಲು ಬೇಕಾದ ಸಂಖ್ಯೆ ಇದೆ. 1999 ರಲ್ಲಿ ಕೇವಲ ಒಂದು ವೋಟಿನಿಂದ ಆಟಲ್‌ ಬಿಹಾರಿ ವಾಜಪೇಯಿಯವರನ್ನು ಅಧಿಕಾರದಿಂದ ಕೆಳಗಿಳಿಸಲಾಯಿತು. 11 ತಿಂಗಳಿನಲ್ಲಿ ಮತ್ತ ಚುನಾವಣೆ ನಡೆದು ಅಟಲ್‌ಜಿ ಭಾರೀ ಬಹುಮತದಿಂದ ಗೆದ್ದು ಪ್ರಧಾನಿಯಾದರು. ಕಾಂಗ್ರೆಸ್‌ ಎಲ್ಲರಿಗೂ ಮೋಸ ಮಾಡಿದೆ. ತಮ್ಮ ವಿರುದ್ಧ ಇದ್ದವರನ್ನು ಅವಿಶ್ವಾಸದ ಮೂಲಕ ಕೆಳಗಿಳಿಸಿದರು. ದೇವೇಗೌಡರಿಗೆ ಮೋಸ ಮಾಡಿದರು, ಚೌಧರಿ ಚರಣ್‌ ಸಿಂಗ್‌ಗೆ ಮೋಸ ಮಾಡಿದರು ಎಂದು ಹೇಳಿದರು.

ನನಗೆ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲಿಕ್ಕೆ ಆಗುವುದಿಲ್ಲ ಎಂದು ಹೇಳುತ್ತಾರೆ. ಹೌದು ನನಗೆ ಸಾಧ್ಯವಿಲ್ಲ. ಯಾಕೆಂದತರೆ ನಾನು ಬಡ ತಾಯಿಯ ಮಗ. ನಾನು ನಿಮ್ಮ ಹಾಗೆ ನಾಮ್‌ದಾರ್‌ ಅಲ್ಲ, ನಾನು ಕಾಮ್‌ ದಾರ್‌. ನನ್ನನ್ನು ಚೌಕಿದಾರ್‌ ಅಲ್ಲ, ಭಾಗೀದಾರ್‌ ಎಂದು ಟೀಕಿಸಿದ್ದೀರಿ. ಹೌದು ನಾನು ಭಾಗಿದಾರನೇ, ರೈತರ ದುಃಖದಲ್ಲಿ ಬಡವರ ದುಃಖದಲ್ಲಿ. ಅಶಕ್ತರ ದುಃಖದಲ್ಲಿ ದೇಶದ ಯುವಜನರ ಆಶೋತ್ತರಗಳಲ್ಲಿ ಭಾಗಿದಾರನಾಗಿದ್ದೇನೆ ಎಂದು ಹೇಳಿದರು. ಮತ್ತೆ ಕಾಂಗ್ರೆಸ್‌ ವಿರುದ್ಧ ಕುಟುಂಬ ರಾಜಕಾರಣದ ಆರೋಪ ಹೊರಿಸಿದ ಮೋದಿ, ಯಾರು ಏನೆಲ್ಲಾ ಮಾಡಿದ್ದಾರೆ ಎಂದು ದೇಶಕ್ಕೆ ಗೊತ್ತಿದೆ. ದಲಿತರು, ಶೋಷಿತರನ್ನು ತುಳಿದು ರಾಜಕಾರಣ ಮಾಡುತ್ತಿದ್ದಾತರೆ. ಪದೇ ಪದೇ ಅಂಬೇಡ್ಕರ್‌ ಹೆಸರು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಒಂದು ಕುಟುಂಬದ ಸ್ವಾರ್ಥಕ್ಕಾಗಿ ಅನೇಕ ಚುನಾವಣೆಗಳನ್ನು ನಡೆಸಿದ್ದಾರೆ ಎಂದು ಗಾಂಧಿ ಕುಟುಂಬದ ವಿರುದ್ಧ ಹರಿಹಾಯ್ದಿದರು.

ಇದು ಜನಪರ ಸರ್ಕಾರ, ಆಯ್ಯುಷ್‌ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತಂದು ಜನರಿಗೆ ಉತ್ತಮ ಆರೋಗ್ಯ ಸೇವೆಯನ್ನು ನೀಡುತ್ತಿದ್ದೇವೆ.
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರನ್ನು ಸರಕಾರ ವಿಶ್ವಾಸಕ್ಕೆ ತೆಗೆದುಕೊಂಡಿದೆ. ರೈತರಿಂದ ಪಡೆದುಕೊಂಡ ಮೂರುಪಟ್ಟನ್ನು ಅವರಿಗೆ ವಾಪಸ್ಸ್ ನೀಡಲಾಗಿದೆ.ಬಡವರಿಗಾಗಿ ನಾವು ಬ್ಯಾಂಕ್ ಬಾಗಿಲು ತೆರೆದವು. ನಮ್ಮದು ಕೆಲಸ ಮಾಡುವ ಸರ್ಕಾರ ಆದರೂ ವಿಪಕ್ಷಗಳಿಗೆ ನಮ್ಮ ಮೇಲೆ ವಿಶ್ವಾಸವಿಲ್ಲ.18 ಸಾವಿರ ಹಳ್ಳಿಗಳಿಗೆ ಸರ್ಕಾರ ವಿದ್ಯುತ್ ವ್ಯವಸ್ಥೆ ಮಾಡಿದೆ. 70 ವರ್ಷಗಳಿಂದ ದೇಶದ ಈಶಾನ್ಯ ಭಾಗದ ಈ ಹಳ್ಳಿಗಳು ಕತ್ತಲಲ್ಲಿ ಇದ್ದವು ಎಂದು ಟೀಕಿಸಿದರು. ಮತ್ತೆ ಕಾಂಗ್ರೆಸ್‌ ವಿರುದ್ಧ ಕುಟುಂಬ ರಾಜಕಾರಣದ ಆರೋಪ ಹೊರಿಸಿದ ಮೋದಿ, ಯಾರು ಏನೆಲ್ಲಾ ಮಾಡಿದ್ದಾರೆ ಎಂದು ದೇಶಕ್ಕೆ ಗೊತ್ತಿದೆ. ದಲಿತರು, ಶೋಷಿತರನ್ನು ತುಳಿದು ರಾಜಕಾರಣ ಮಾಡುತ್ತಿದ್ದಾತರೆ. ಪದೇ ಪದೇ ಅಂಬೇಡ್ಕರ್‌ ಹೆಸರು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಒಂದು ಕುಟುಂಬದ ಸ್ವಾರ್ಥಕ್ಕಾಗಿ ಅನೇಕ ಚುನಾವಣೆಗಳನ್ನು ನಡೆಸಿದ್ದಾರೆ ಎಂದು ಗಾಂಧಿ ಕುಟುಂಬದ ವಿರುದ್ಧ ಹರಿಹಾಯ್ದಿದರು.

ಲೋಕಸಭೆಯ ಬಲಾಬಲ  : 
ಒಟ್ಟು ಸದಸ್ಯರು -534
ಸರಳ ಬಹುಮತ
ಬಹುಮತಕ್ಕೆ ಬೇಕಾದ ಸಂಖ್ಯೆ -226
ಎನ್‍ಡಿಎ ಬಲಾಬಲ-325
ಯುಪಿಎ ಮೈತ್ರಿಕೂಟ- 125

Facebook Comments

Sri Raghav

Admin