ಭಾರೀ ಅಲೆ ಹಾಗೂ ಬಿರುಗಾಳಿಯಿಂದ ಬೋಟ್ ಮುಳುಗಿ 17 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

17-KLilled-----01

ಮಿಸ್ಸೌರಿ, ಜು.21-ಪ್ರಯಾಣಿಕರು ಖುಷಿ ಖುಷಿಯಿಂದ ಬೋಟ್‍ನಲ್ಲಿ ಪ್ರಯಾಣ ಮಾಡುತ್ತಿದ್ದರು. ಭಾರೀ ಅಲೆ ಹಾಗೂ ಬಿರುಗಾಳಿ ಸಿಲುಕಿ ಬೋಟ್ ಮುಳುಗಿದ ಪರಿಣಾಮ ಸುಮಾರು 17 ಮಂದಿ ಜಲಸಮಾಧಿಯಾದರು. ಅಮೆರಿಕದ ಮಿಸ್ಸೌರಿಯಲ್ಲಿ ಟೇಬಲ್‍ರಾಕ್ ಸರೋವರದಲ್ಲಿ ಈ ದುರ್ಘಟನೆ ಸಂಭವಿಸಿದೆ. ಸರೋವರದಲ್ಲಿ ಬೋಟಿಂಗ್ ವ್ಯವಸ್ಥೆಯಿದ್ದು , ಸುಮಾರು 31 ಜನರನ್ನು ಹೊತ್ತೊಯ್ಯುತ್ತಿದ್ದ ಬೋಟ್ ಭಾರೀ ಗಾಳಿ ಹಾಗೂ ಅಲೆಗಳಿಗೆ ಬೋಟ್ ನೋಡು ನೋಡುತ್ತಿದ್ದಂತೆ ನೀರಿನಲ್ಲಿ ಮುಳುಗಿದ್ದು, 17 ಮಂದಿ ಮೃತಪಟ್ಟಿದ್ದಾರೆ.

ಕೂಡಲೇ ಎಚ್ಚೆತ್ತುಕೊಂಡ ರಕ್ಷಣಾ ತಂಡ ಇತರ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಸಮುದ್ರದಲ್ಲಿ ಭಾರೀ ಚಂಡಮಾರುತ ಅಪ್ಪಳಿಸುವ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು. ಇದಾದ ಕೆಲವೇ ಕ್ಷಣಗಳಲ್ಲಿ ದುರಂತ ಸಂಭವಿಸಿದೆ. ಬೋಟ್ ದುರಂತಕ್ಕೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Facebook Comments

Sri Raghav

Admin