‘ರಾಮದಾಸ್’ಗೆ ತಪ್ಪದ ‘ಪ್ರೇಮ’ಕುಮಾರಿ ಕಾಟ, ಕಚೇರಿಯೆದುರು ಗೋಳಾಡಿ ರಂಪಾಟ

ಈ ಸುದ್ದಿಯನ್ನು ಶೇರ್ ಮಾಡಿ

Premakumari--01

ಮೈಸೂರು, ಜು 21 : ಶಾಸಕ ಎಸ್.ಎ.ರಾಮದಾಸ್ ಕಚೇರಿ ಮುಂಭಾಗ ಪ್ರೇಮಕುಮಾರಿ ಆತ್ಮಹತ್ಯೆಗೆ ಯತ್ನಿಸಿ ರಂಪಾಟ ಮಾಡಿದ ಘಟನೆ ನಡೆದಿದೆ. ವಿದ್ಯಾರಣ್ಯಪುರಂ ನಲ್ಲಿರುವ ಶಾಸಕ ರಾಮದಾಸ್ ಕಚೇರಿ ಮುಂಭಾಗ ದಿಢೀರನೆ ಬಂದ ಪ್ರೇಮಕುಮಾರಿ ಏಕಾಏಕಿ ತಾನು ತೊಟ್ಟಿದ್ದ ಚೂಡಿದಾರ್ ವೇಲ್‍ನಿಂದ ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅಲ್ಲಿದ್ದ ಸ್ಥಳೀಯರು ಆಕೆಯನ್ನು ಬಚಾವ್ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ನನಗೆ ಅವರು ಬೇಕು, ನಾನು ಅವರ ಜೊತೆ ಬಾಳಬೇಕು, ನಾನೇನು ಕೀಳು ಜಾತಿಯವಳಲ್ಲ ಎಂದು ರಂಪಾಟ ಮಾಡಿದ್ದಾರೆ. ನೆರೆದಿದ್ದ ಎಲ್ಲ ಜನರ ಮುಂದೆ ನೆಲದ ಮೇಲೆ ಬಿದ್ದು ಒದ್ದಾಡಿ, ಗೋಳಾಡಿ, ಹೆಗಲ ಮೇಲಿದ್ದ ವೇಲನ್ನು ಕುತ್ತಿಗೆ ಬಿಗಿದು ಆತ್ಮಹತ್ಯೆ ಮಾಡಿಕೊಳ್ಳುವ ಹೈಡ್ರಾಮಾ ಮಾಡಿದ್ದಾರೆ.  ನಾನು ಸಾಯಬೇಕು, ಬಿಡಿ ನನ್ನ ಎಂದು ಮಹಿಳೆಯೊಬ್ಬರಿಂದ ವೇಲನ್ನು ಕಸಿದುಕೊಂಡು ಚೀರಾಡಿ ಅತ್ತುಕರೆದು ನೆರೆದವರಿಗೆಲ್ಲ ರಂಜನೆ ನೀಡಿದರು ಪ್ರೇಮಕುಮಾರಿ. ಇಲ್ಯಾಕೆ ಸಾಯ್ತಿಯಮ್ಮ, ಮನೆಗೆ ಹೋಗಿ ಸಾಯಿ ಎಂದು ಕೆಲವರು ಹೇಳಿದರೂ, ಇಲ್ಲ ಇಲ್ಲೇ ಸಾಯ್ತೀನಿ ಎಂದು ಹಠ ಹಿಡಿದರು ಪ್ರೇಮಕುಮಾರಿ ಗೋಳಾಡುತ್ತಿದ್ದರು.

ಚುನಾವಣೆ ಸಮಯದಲ್ಲಿ ನೀಡಿದ್ದ ಮಾತು ರಾಮದಾಸ್ ಅವರು ತಪ್ಪಿದ್ದಾರೆಂದು ಪ್ರೇಮಕುಮಾರಿ ಆರೋಪಿಸಿದರು. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮದುವೆ ಮಾಡಿಕೊಳ್ಳುತ್ತೇನೆಂದು ನಂಬಿಸಿ ನಾಮಪತ್ರ ಸಲ್ಲಿಸುವುದನ್ನು ತಪ್ಪಿಸಿದ್ದರು ಎಂದು ಆರೋಪಗಳ ಸುರಿಮಳೆಗೈದರು. ನಾನು ಸತ್ತರೂ ರಾಮದಾಸ್ ಅವನನ್ನು ಬಿಡುವುದಿಲ್ಲ, ಅವನ ಗ್ರಹಚಾರ ಬಿಡಿಸುತ್ತೇನೆ, ಅವನಿಗೆ ಮುಂದಿದೆ ಮಾರಿಹಬ್ಬ ಎಂದು ಪ್ರೇಮಕುಮಾರಿ ಗೋಳು ಹೊಯ್ದುಕೊಳ್ಳುತ್ತಿದ್ದಾರೆ.

Facebook Comments

Sri Raghav

Admin