ಚಾಲಕನಿಲ್ಲದೆ ಚಲಿಸುವ ಕಾರು ಆವಿಷ್ಕರಿಸಿದ ಸಪ್ತಗಿರಿ ಕಾಲೇಜು ವಿದ್ಯಾರ್ಥಿಗಳು

ಈ ಸುದ್ದಿಯನ್ನು ಶೇರ್ ಮಾಡಿ

saptagiri-clg
ಬೆಂಗಳೂರು, ಜು.21- ಚಾಲಕನಿಲ್ಲದೆ ಚಲಿಸುವ ಕಾರು ಮತ್ತು ಹೇಳಿದ್ದನ್ನು ಟೈಪ್ ಮಾಡಿ ಕೊಳ್ಳುವ ವಿಶಿಷ್ಟ ಕಂಪ್ಯೂಟರ್‍ನ್ನು ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಆವಿಷ್ಕರಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಲೇಜಿನ ಪ್ರೊ.ಪ್ರಶಾಂತ್ ಹೊಸ ಹೊಸ ಸಂಶೋಧನೆಗಳ ಮೂಲಕ ಸಾರ್ವಜನಿಕರಿಗೆ ಕೈಗೆಟುಕುವ ಮತ್ತು ಅವರಿಗೆ ನೆರವಾಗುವ ಉಪಕರಣಗಳನ್ನು ಸಂಶೋಧಿಸುವುದೇ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಮೂಲ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ನಮ್ಮ ವಿದ್ಯಾರ್ಥಿಗಳು ಕಾರು ಹಾಗೂ ಕಂಪ್ಯೂಟರನ್ನು ವಿಶಿಷ್ಟ ರೀತಿಯಲ್ಲಿ ತಯಾರಿಸಿದ್ದಾರೆ ಎಂದರು.

ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಚಾಲಕನಿಲ್ಲದೆ ಸನ್ನೆ ಮೂಲಕ ಚಲಿಸುವ ಕಾರು, ಹೇಳುವುದನ್ನು ತಾನಾಗಿಯೇ ಟೈಪ್ ಮಾಡಿಕೊಳ್ಳುವ ಕಂಪ್ಯೂಟರ್ ಇದಾಗಿದ್ದು, ಇದು ಸಾಕಷ್ಟು ಉಪಯೋಗಕರವಾಗಲಿದೆ. ಚಾಲಕನಿಲ್ಲದೆ ಚಲಾಯಿಸಬಹುದಾದ ಈ ಕಾರು ರೋಬೋಟ್‍ನಂತೆ ಕಾರ್ಯ ನಿರ್ವಹಿಸಲಿದೆ. ಈ ಕಾರಿನಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರೂ, ಯಾವ ರಸ್ತೆಯಲ್ಲಾದರೂ,ಎಷ್ಟು ದೂರವಾದರೂ ಚಲಿಸಬಹುದಾಗಿದೆ.

ರಸ್ತೆಗಳಲ್ಲಿನ ಸಿಗ್ನಲ್‍ಗಳಿಗೆ ಸ್ಪಂದಿಸಿ ನಿಲ್ಲುವುದು ಹಾಗೂ ಸಿಗ್ನಲ್ ಆದೇಶ ಪಾಲಿಸಿ ಮುಂದುವರೆಯುವುದು, ರಸ್ತೆಗಳಲ್ಲಿನ ಬಿಳಿ ಪಟ್ಟಿ ಸೇರಿದಂತೆ ಒಟ್ಟಾರೆ ಸಂಚಾರಿ ನಿಯಮಗಳನ್ನು ಪಾಲಿಸುವ ಬಗ್ಗೆ ಒಂದು ಸಣ್ಣ ಯಂತ್ರವನ್ನು ಅಳವಡಿಸಿ ಆ ಮೂಲಕ ಕಾರ್ಯನಿರ್ವಹಿಸುವಂತೆ ಮಾಡಲಾಗಿದೆ. ಈ ಕಾರು ಜಿಪಿಎಸ್ ಆಧಾರಿತ ವಾಹನವಾಗಿದ್ದು, ಸಾರ್ವಜನಿಕರಿಗೆ ಇದು ಹೆಚ್ಚು ಅನುಕೂಲಕರ ವಾಗಲಿದೆ ಎಂದರು. ಈ ಕಾರನ್ನು ಮಾತನಾಡಲು ಬಾರದವರು ಮತ್ತು ವಿಕಲಾಂಗರೂ ಸೇರಿದಂತೆ ಪ್ರತಿ ಯೊಬ್ಬರೂ ಬಳಸಬಹುದಾಗಿದೆ ಎಂದು ವಿವರಿಸಿದರು. ವಿದ್ಯಾರ್ಥಿಗಳಾದ ಶಿವಸೇಠ್ ಗೋರಾ, ಎ.ಭಾರದ್ವಾಜ್, ಎಂ.ತೇಜಸ್‍ರಾವ್, ಪ್ರಜ್ವಲ್‍ರೆಡ್ಡಿ, ಬಿ.ವಿ.ಸಾಗರ್, ಎ.ಶಿಖ ಮತ್ತಿತರ ತಂಡ ಈ ಆವಿಷ್ಕಾರ ಮಾಡಿದೆ ಎಂದು ಪರಿಚಯಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಾಧ್ಯಾಪಕಿ ವಿ.ವೀಣಾ ಮತ್ತಿತರರಿದ್ದರು.

Facebook Comments

Sri Raghav

Admin