ಯೂರೋಪ್‍ನ ಪ್ರಥಮ ಷೇಕ್ಸ್’ಫಿಯರ್ ಥಿಯೇಟರ್ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

ds

ಜಗದ್ವಿಖ್ಯಾತ ನಾಟಕಕಾರ ವಿಲಿಯಂ ಷೇಕ್ಸ್’ಫಿಯರ್ ಈಗಲೂ ಜನಪ್ರಿಯ. ಇದಕ್ಕೆ ಸಾಕ್ಷಿ ಎಂಬಂತೆ ಇಂಗ್ಲೆಂಡ್‍ನ ಯಾರ್ಕ್ ನಗರದಲ್ಲಿ ಯೂರೋಪ್‍ನ ಪ್ರಥಮ ಷೇಕ್ಸ್’ಫಿಯರ್ ಥಿಯೇಟರ್ ಆರಂಭವಾಗಿದೆ.  ಈಶಾನ್ಯ ಇಂಗ್ಲೆಂಡ್‍ನ ಯಾರ್ಕ್ ನಗರದಲ್ಲಿ ದಿ ಷೇಕ್ಸ್’ಫಿಯರ್ ರೋಸ್” ಎಂಬ ಹೊಸ ಥಿಯೇಟರ್ ಆರಂಭವಾಗಿದೆ. ಇದು ಐರೋಪ್ಯ ಖಂಡದ ಪ್ರಥಮ ಷೇಕ್ಸ್’ಫಿಯರ್ ಚಿತ್ರಮಂದಿರ ಎಂಬ ಹೆಗ್ಗಳಿಕೆ ಪಡೆದಿದೆ.

ds-1

ಈ ತಾತ್ಕಾಲಿಕ ಸ್ಥಳವು ಲಂಡನ್‍ನ ವಿಶ್ವವಿಖ್ಯಾತ ಷೇಕ್ಸ್’ಫಿಯರ್ ಗ್ಲೋಬಲ್ ಥಿಯೇಟರ್‍ನನ್ನೇ ಹೋಲುತ್ತದೆ. ಆದರೆ ಇದು ಅದರ ಯಥಾರೂಪವಲ್ಲ. ಇದು ಷೇಕ್ಸ್’ಫಿಯರ್ ಥೀಮ್‍ನೊಂದಿಗೆ ನಿರ್ಮಿತವಾಗಿದೆ. ಇದರಲ್ಲಿ 13 ಪಾಶ್ರ್ವಗಳಿದ್ದು, ಮೂರು ಅಂತಸ್ತುಗಳಷ್ಟು ಎತ್ತರ ಇದೆ. ಇದರಲ್ಲಿ 660 ಜನರು  ಕುಳಿತು ಕೊಳ್ಳಬಹುದು. ಮತ್ತು 300 ಜನರು ನಿಂತು ನಾಟಕಗಳನ್ನು ವೀಕ್ಷಿಸಲು ಅವಕಾಶ ಇದೆ ಎನ್ನುತ್ತಾರೆ ನಿರ್ಮಾಪಕ ಜೇಮ್ಸ್ ಕುಂಡಲ್ ಷೇಕ್ಸ್’ಫಿಯರ್ ರೋಸ್ ಥಿಯೇಟರ್ 30,000 ಘನ ಮೀಟರ್‍ಗಳ ವೇದಿಕೆ ಹೊಂದಿದ್ದು, ಇಲ್ಲಿ ರೋಮಿಯೋ ಜ್ಯೂಲಿಯಟ್, ಮ್ಯಾಕ್‍ಬೆತ್ ಮತ್ತು ಎ ಮಿಡ್‍ಸಮರ್ ನೈಟ್ಸ್ ಡ್ರೀಮ್ ಸೇರಿದಂತೆ  ನಾಲ್ಕು ನಾಟಕಗಳು ಪ್ರದರ್ಶನವಾಗಲಿದೆ. ಸೆಪ್ಟೆಂಬರ್ 2ವರೆಗೂ ಇಲ್ಲಿ ನಾಟಕ ಪ್ರದರ್ಶನಗಳು ನಡೆಯಲಿವೆ.

Facebook Comments

Sri Raghav

Admin