ಮಾಜಿ ಸಚಿವೆ ವಿಮಲಾಬಾಯಿ ನಿಧನಕ್ಕೆ ದೇವೇಗೌಡರ ಸಂತಾಪ

ಈ ಸುದ್ದಿಯನ್ನು ಶೇರ್ ಮಾಡಿ

Devegowsda-cv01
ಬೆಂಗಳೂರು,ಜು.22- ಮಾಜಿ ಸಚಿವೆ ವಿಮಲಾ ಬಾಯಿ ಜೆ.ದೇಶಮುಖ್ ಅವರ ನಿಧನದಿಂದ ಮನಸಿಗೆ ಬಹಳ ನೋವಾಗಿದೆ. ಜನತಾ ಪರಿವಾರದ ಹಿರಿಯ ನಾಯಕಿಯೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಶೋಕ ವ್ಯಕ್ತಪಡಿಸಿದರು. ವಿಮಲಾ ಬಾಯಿ ಜೆ.ದೇಶಮುಖ್ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಅವರು, ವಿಮಲಾ ಬಾಯಿ ಅವರು ರಾಜ್ಯ ಕಂಡ ಉತ್ತಮ ರಾಜಕಾರಣಿ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಬೇಕು. ಭಗವಂತ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ತುಂಬಲಿ ಎಂದು ಪ್ರಾರ್ಥಿಸಿದ್ದಾರೆ.

ಕನ್ನಡ ಮತ್ತು ಸಂಸ್ಕøತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವ ಡಾ.ಜಯಮಲಾ ಅವರು ವಿಮಲಾ ಬಾಯಿ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದು, ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

Facebook Comments

Sri Raghav

Admin