ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ತಾನೇ ತೆರವುಗೊಳಿಸಿದ ಮಹಿಳಾ ಅಧಿಕಾರಿ..!

ಈ ಸುದ್ದಿಯನ್ನು ಶೇರ್ ಮಾಡಿ
ಸಾಂಧರ್ಭಿಕ ಚಿತ್ರ
ಸಾಂಧರ್ಭಿಕ ಚಿತ್ರ

ಅರಕಲಗೂಡು, ಜು.22- ಮಳೆಯ ಅಬ್ಬರಕ್ಕೆ ದಾರಿಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ಕತ್ತರಿಸಲು ನೆರವಾದ ಪಟ್ಟಣ ಪಂಚಾಯ್ತಿ ಮಹಿಳಾ ಅಧಿಕಾರಿಯ ಕಾರ್ಯಕ್ಕೆ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.  ಅರಕಲಗೂಡು ಪಟ್ಟಣ ಪಂಚಾಯ್ತಿ ಇಂಜನಿಯರ್ ಕವಿತಾ ಅವರು ಮರಕತ್ತರಿಸಲು ನೆರವಾಗಿದ್ದಾರೆ.  ಮಳೆಯ ಬಿರುಸಿಗೆ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿತ್ತು. ಇದರಿಂದ ರೋಗಿಯನ್ನು ಕರೆದೊಯ್ಯುತ್ತಿದ್ದ ವಾಹನ ಮುಂದೆ ಹೋಗಲಾಗದೆ ಅಡಚಣೆಯಾಗಿತ್ತು. ಇದೇ ಸಂದರ್ಭದಲ್ಲಿ ಈ ಮಾರ್ಗದಲ್ಲಿ ಕಾರಿನಲ್ಲಿ ಬಂದ ಕವಿತಾ ವಾಹನ ನಿಂತಿರುವುದನ್ನು ಕಂಡು ಕಾರಿನಿಂದ ಇಳಿದು ಬಂದರು.

ತಕ್ಷಣ ಸ್ಥಳೀಯರೊಂದಿಗೆ ಸೇರಿ ಗರಗಸದಿಂದ ಮರವನ್ನು ಕತ್ತರಿಸಿ ವಾಹನ ಮುಂದೆ ಸಾಗಲು ಅನುಕೂಲ ಮಾಡಿಕೊಟ್ಟರು. ಕವಿತಾ ಅವರ ಈ ಕಾರ್ಯವನ್ನು ಸಾರ್ವಜನಿಕರು ಮುಕ್ತಕಂಠದಿಂದ ಹೊಗಳಿದ್ದಾರೆ.

Facebook Comments

Sri Raghav

Admin