ಲಾಸ್ ಏಂಜೆಲ್ಸ್ ಒತ್ತೆ ಪ್ರಕರಣ ಅಂತ್ಯ : ಗನ್‍ಮ್ಯಾನ್ ಬಂಧನ, ಮಹಿಳೆ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Los-Angeles
ಲಾಸ್ ಏಂಜೆಲ್ಸ್, ಜು.22-ತನ್ನ ಅಜ್ಜಿ ಮತ್ತು ಗರ್ಲ್‍ಫ್ರೆಂಡ್ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿ ನಂತರ ಸೂಪರ್‍ಮಾರ್ಕೆಟ್ ಒಂದಕ್ಕೆ ನುಗ್ಗಿ ಅಲ್ಲಿದ್ದವರನ್ನು ಒತ್ತೆಯಲ್ಲಿಟ್ಟುಕೊಂಡಿದ್ದ ಗನ್‍ಮ್ಯಾನ್ ಒಬ್ಬನನ್ನು ಲಾಸ್‍ಏಂಜೆಲ್ಸ್ ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯಲ್ಲಿ ಅಂಗಡಿಯೊಳಗಿದ್ದ ಮಹಿಳೆಯೊಬ್ಬರು ಬಲಿಯಾಗಿದ್ದು, ಕೆಲವರು ಗಾಯಗೊಂಡಿದ್ದಾರೆ.

ಅಜ್ಜಿ ಮತ್ತು ಗೆಳತಿ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿದ ನಂತರ ಕಾರಿನಲ್ಲಿ ಪರಾರಿಯಾಗುತ್ತಿದ್ದ ಬಂದೂಕುದಾರಿ ಯುವಕನೊಬ್ಬನನ್ನು ಪೊಲೀಸರು ಬೆನ್ನಟ್ಟಿದರು. ಕಾರಿನ ಮೇಲೆ ಗುಂಡು ಹಾರಿಸಿದಾಗ ಆತನ ಕಾರು ಕಂಬವೊಂದಕ್ಕೆ ಡಿಕ್ಕಿ ಹೊಡೆದು ನಂತರ ಸಿಲ್ವರ್ ಲೇಕ್ ಪ್ರದೇಶದಲ್ಲಿದ್ದ ಟ್ರೇಡರ್ ಜೋ ಸ್ಟೋರ್‍ಗೆ ನುಗ್ಗಿತ್ತು.

ಕಾರಿನಿಂದ ಇಳಿದ ಆತ ಗನ್ ತೋರಿಸಿ ಸೂಪರ್ ಮಾರ್ಕೆಟ್‍ನಲ್ಲಿದ್ದವರ ಮೇಲೆ ಗುಂಡು ಹಾರಿಸಿ ಬೆದರಿಸಿದ. ಈ ಘಟನೆಯಲ್ಲಿ ಮಹಿಳೆಯೊಬ್ಬರು ಮೃತಪಟ್ಟು ಕೆಲವರು ಗಾಯಗೊಂಡರು. ಈ ಘಟನೆ ನಡೆದಾಗ ಮಳಿಗೆಯಲ್ಲಿ 20ಕ್ಕೂ ಹೆಚ್ಚು ಮಂದಿ ಇದ್ದರು. ಬಳಿಕ ಸೂಪರ್‍ಮಾರ್ಕೆಟ್‍ನನ್ನು ಶಸ್ತ್ರಸಜ್ಜಿತ ಪೊಲೀಸರು ಸುತ್ತುವರೆದರು. ಮೂರು ಗಂಟೆಗಳ ನಂತರ ಈತ ಪೊಲೀಸರಿಗೆ ಶರಣಾದ ನಂತರ ಆತನನ್ನು ಬಂಧಿಸಲಾಯಿತು.

Facebook Comments

Sri Raghav

Admin