ಬೋಕೊ ಉಗ್ರರು ನಡೆಸಿದ ಭೀಕರ ದಾಳಿಯಲ್ಲಿ 18 ಬಲಿ, 10 ಮಹಿಳೆಯರ ಅಪಹರಣ

ಈ ಸುದ್ದಿಯನ್ನು ಶೇರ್ ಮಾಡಿ

Boko--01
ಎನ್‍ ಜಾಮೆನಾ, ಜು.22-ಆಫ್ರಿಕಾದ ನೈಜೀರಿಯಾದ ಲೇಕ್ ಚಾಡ್ ಪ್ರಾಂತ್ಯದಲ್ಲಿ ಬೋಕೊ ಹರಂ ಉಗ್ರರು ನಡೆಸಿದ ಭೀಕರ ದಾಳಿಯಲ್ಲಿ 18 ಮಂದಿ ಮೃತಪಟ್ಟು, ಅನೇಕರು ತೀವ್ರ ಗಾಯಗೊಂಡಿದ್ದಾರೆ. 10 ಮಹಿಳೆಯರನ್ನು ಅಪಹರಿಸಿದ್ದಾರೆ ಎಂದು ಚಾಡಿಯನ್ ಮಿಲಿಟರಿ ಮೂಲಗಳು ತಿಳಿಸಿವೆ. ನೈಗರ್ ಮತ್ತು ಚಾಡ್ ಗಡಿ ಪ್ರದೇಶದ ಡಬೌ ಗ್ರಾಮದ ಮೇಲೆ ಬೋಕೊ ಹರಂ ಜಿಹಾದಿಗಳು ನಿನ್ನೆ ರಾತ್ರಿ 9ರಲ್ಲಿ ಆಕ್ರಮಣ ನಡೆಸಿ 18 ಗ್ರಾಮಸ್ಥರು ಕೊಂದು ಹಾಕಿದರು ಎಂದು ಸೇನಾ ಮೂಲಗಳು ತಿಳಿಸಿವೆ.

ಈ ದಾಳಿಯಲ್ಲಿ ಅನೇಕರು ಗಾಯಗೊಂಡಿದ್ದು, 10ಕ್ಕೂ ಹೆಚ್ಚು ಮಹಿಳೆಯರನ್ನು ಉಗ್ರರು ಅಪಹರಿಸಿದ್ದಾರೆ.   ನೈಜೀರಿಯಾದಲ್ಲಿ 2009ರಿಂದ ಬೋಕೋ ಉಗ್ರರ ಉಪಟಳದಿಂದ 20,000ಕ್ಕೂ ಹೆಚ್ಚು ಮಂದಿ ಹತರಾಗಿದ್ದು, 20 ಲಕ್ಷಕ್ಕೂ ಹೆಚ್ಚು ಜನರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

Facebook Comments

Sri Raghav

Admin