ಮೆಕ್ಸಿಕೋ ನಗರದ ರಸ್ತೆ ಒಳಗೆ ಪ್ರಾಚೀನ ಅಝ್‍ಟೆಕ್ ದೇಗಲ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Ds

ಕೆಲವೊಮ್ಮೆ ಭೂಗರ್ಭದಲ್ಲಿನ ವಿಸ್ಮಯಗಳ ಆಕಸ್ಮಿಕವಾಗಿ ಬೆಳಕಿಗೆ ಬರುತ್ತವೆ. ಮೆಕ್ಸಿಕೋ ನಗರದಲ್ಲಿ ರಸ್ತೆಗಳ ಒಳಗೆ ಹುದುಗಿ ಹೋಗಿದ್ದ ಪ್ರಾಚೀನ ಅಝ್‍ಟೆಕ್ ದೇವಾಲಯ ಅನಾವರಣಗೊಂಡಿದೆ. ಸಾರ್ವ ಜನಿಕರು ಪಾದಚಾರಿ ಮಾರ್ಗದಲ್ಲಿ ಅಳವಡಿಸಿರುವ ಕಿಟಕಿ ಮೂಲಕ ಈ ಭೂಮಿಯ ವಿಸ್ಮಯವನ್ನು ವೀಕ್ಷಿಸ ಬಹುದಾಗಿದೆ.  ಮೆಕ್ಸಿಕೋ ರಾಜಧಾನಿ ಮೆಕ್ಸಿಕೋ ಸಿಟಿಯಲ್ಲಿನ ಜನಸಂದಣಿಯ ಪಾದ ಚಾರಿ ಮಾರ್ಗದ ಮೇಲೆ ಕಿಟಕಿಯೊಂದನ್ನು ಅಳವಡಿಸ ಲಾಗಿದೆ. ಈ ಐತಿಹಾಸಿಕ ಸ್ಥಳದಲ್ಲಿ ನೂರಾರು ವರ್ಷಗಳ ಹಿಂದೆ ಹುದುಗಿ ಹೋಗಿದ್ದ ಪ್ರಾಚೀನ ಎಹೆಕಾಟಿ-ಕ್ವೆಟ್‍ಝಲ್‍ಕೊಯಿಟಲ್ ದೇವಸ್ಥಾನ ಪಳಿಯುಳಿಕೆಗಳನ್ನು ಈ ಕಿಟಕಿ ಮೂಲಕ ವೀಕ್ಷಿಸಬಹುದಾಗಿದೆ.

Ds-1

ಎಹೆಕಾಟಿ-ಕ್ವೆಟ್‍ಝಲ್‍ಕೊಯಿಟಲ್ ದೇಗುಲವು ಅಝ್‍ಟೆಕ್ ವಾಯು ದೇವನಿ ಗಾಗಿ 600 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. 1,180 ಚದರ ಅಡಿ ವಿಸ್ತೀರ್ಣದ ಈ ಮಂದಿರದಲ್ಲಿ ದೇವನನ್ನು ಒಲಿಸಿಕೊಳ್ಳಲು ಸಾಂಪ್ರದಾಯಿಕ ಆಚರಣೆಗಳು ನಡೆಯುತ್ತಿದ್ದ ಕುರುಹುಗಳೂ ಕೂಡ ಪತ್ತೆ ಯಾಗಿವೆ. ಈ ದೇವ ನಾಗರಿಕ ಸಮಾಜದ ಸೃಷ್ಟಿಕರ್ತ ಹಾಗೂ ಪುರಾಣ-ಪುಣ್ಯಕಥೆಗಳ ಸಾಂಸ್ಕø ತಿಕ ದೂತ ಎಂದೇ ನಂಬಲಾಗಿದೆ.  ಮೆಕ್ಸಿಕೋ ಸಿಟಿ ಮೇಲ್ಮೈನ ಕೆಳಗೆ ಇರುವ ರಹಸ್ಯ ಬೆಳಕಿಗೆ ಬಂದ ನಂತರ ಅಲ್ಲಿ ಪಾದಚಾರಿ ಕಿಟಕಿಯನ್ನು ನಿರ್ಮಿಸಲಾಗಿದೆ. 2014ರಲ್ಲಿ ಸೂಪರ್‍ಮಾರ್ಕೆಟ್ ನಿರ್ಮಿಸಲು ಬೃಹತ್ ಕಟ್ಟಡವೊಂದನ್ನು ಕೆಡವಿದಾಗ ಭೂಗರ್ಭದಲ್ಲಿ ಹುದುಗಿದ್ದ ಪ್ರಾಚೀನ ದೇಗುಲ ಗೋಚರಿಸಿತು. ಇಲ್ಲಿ ಮಾನವರ ಮೃತದೇಹದ ಪಳಿಯುಳಿಕೆಗಳು ಮತ್ತು ಮಡಿಕೆಗಳು ಸಹ ಪತ್ತೆಯಾಗಿತ್ತು. ಇವುಗಳನ್ನು ಸಂರಕ್ಷಿಸಿ ಇಡಲಾಗಿದೆ.

Facebook Comments

Sri Raghav

Admin