ಫ್ಲೆಕ್ಸ್’ನಲ್ಲಿ ರಾರಾಜಿಸುತ್ತಿದೆ ರಾಹುಲ್ ಪ್ರಧಾನಿ ಮೋದಿಯನ್ನು ಅಪ್ಪಿಕೊಂಡ ಫೋಟೋ

ಈ ಸುದ್ದಿಯನ್ನು ಶೇರ್ ಮಾಡಿ

Rahul-Gandhi--01

ಮುಂಬೈ, ಜು.22- ಮುಂಬೈ ಕಾಂಗ್ರೆಸ್ ಘಟಕವು ಪಕ್ಷದ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅಪ್ಪಿಕೊಂಡಿರುವ ಚಿತ್ರವನ್ನು ತನ್ನ ಫ್ಲೆಕ್ಸ್ ಒಂದರಲ್ಲಿ ಅಳವಡಿಸಿಕೊಂಡಿದೆ.  ಅವಿಶ್ವಾಸ ನಿರ್ಣಯದ ವೇಳೆ ರಾಹುಲ್ ಗಾಂಧಿ ಮೋದಿಯವರನ್ನು ಅಪ್ಪಿಕೊಂಡ ಸಂಗತಿ ವ್ಯಾಪಕ ಚರ್ಚೆಯಾಗುತ್ತಿರುವಾಗಲೇ ಮುಂಬೈನ ಕಾಂಗ್ರೆಸ್ ಘಟಕ ಈ ಚಿತ್ರವಿರುವ ದೊಡ್ಡ ಫ್ಲೆಕ್ಸ್‍ಅನ್ನು ಮುಂಬೈ ಸಾರ್ವಜನಿಕ ಸ್ಥಳದಲ್ಲಿ ಹಾಕಿದೆ. ಮುಂಬೈನ ಅಂಧೇರಿಯಲ್ಲಿ ಹಾಕಲಾದ ಈ ಫ್ಲೆಕ್ಸ್ ನಲ್ಲಿ ಕೋಪದಿಂದಲ್ಲ ಪ್ರೀತಿಯಿಂದಲೇ ಗೆಲುವು ಸಾಧ್ಯ ಎಂದು ದೊಡ್ಡ ಅಕ್ಷರಗಳಲ್ಲಿ ಬರೆಯಲಾಗಿದೆ. ಮುಂಬೈ ಕಾಂಗ್ರೆಸ್ ಅಧ್ಯಕ್ಷ ಸಂಜಯ್ ನಿರುಪಮ್ ಈ ಫ್ಲೆಕ್ಸ್ ಹಾಕಿಸಿದ್ದು, ಇದರಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಚಿತ್ರಗಳೊಡನೆ ತಮ್ಮ ಚಿತ್ರವನ್ನೂ ಸೇರಿಸಿಕೊಂಡಿದ್ದಾರೆ.

Facebook Comments

Sri Raghav

Admin