9 ತಿಂಗಳಲ್ಲಿ 44.4 ಲಕ್ಷ ಉದ್ಯೋಗ ಸೃಷ್ಟಿ

ಈ ಸುದ್ದಿಯನ್ನು ಶೇರ್ ಮಾಡಿ

EPFO
ನವದೆಹಲಿ(ಪಿಟಿಐ), ಜು.22-ಕಳೆದ ವರ್ಷ ಸೆಪ್ಟೆಂಬರ್‍ನಿಂದ ಈ ವರ್ಷ ಮೇವರೆಗೆ ಒಂಭತ್ತು ತಿಂಗಳಲ್ಲಿ 4.4 ದಶಲಕ್ಷ ಉದ್ಯೋಗ ಸೃಷ್ಟಿಯಾಗಿದೆ ಎಂದು ನಿವೃತ್ತಿ ನಿಧಿ ಸಂಸ್ಥೆ ಎಪಿಎಫ್‍ಒದ ಪೇ-ರೋಲ್ ವೇತನದಾರರ ಅಂಕಿಅಂಶಗಳು ತಿಳಿಸಿವೆ. 2017ರ ಸೆಪ್ಟೆಂಬರ್‍ನಿಂದ 2018ರ ಮೇ ಮಾಸದವರೆಗೆ ಒಟ್ಟು 44.4 ಲಕ್ಷ ಮಂದಿ ಉದ್ಯೋಗ ಪಡೆದಿದ್ದಾರೆ ಎಂದು ದತ್ತಾಂಶ ಮಾಹಿತಿ ವಿವರ ನೀಡಿದೆ.

ಮಾಹಿತಿ ಪ್ರಕಾರ, ಭವಿಷ್ಯ ನಿಧಿ, ವಿಮೆ, ಪಿಂಚಣಿ ಸೇರಿದಂತೆ ಇಪಿಎಫ್‍ಒ ಪ್ರಯೋಜನ ಪಡೆದುಕೊಳ್ಳುವ ಯೋಜನೆಗಳಿಗೆ ಸೆಪ್ಟೆಂಬರ್-ಏಪ್ರಿಲ್ ನಡುವೆ ಒಟ್ಟಾರೆ 4,126,138 ಹೊಸ ನೋಂದಣಿಗಳಾಗಿವೆ. ಕಳೆದ ಎಂಟು ತಿಂಗಳಿಗೆ ಹೋಲಿಸಿದರೆ ಇಪಿಎಫ್‍ಒ ಪ್ರಯೋಜನಗಳನ್ನು ಪಡೆದುಕೊಳ್ಳುವವರ ನೋಂದಣಿ ಪ್ರಮಾಣ ಮೇ ತಿಂಗಳಲ್ಲಿ ಹೆಚ್ಚಾಗಿದ್ದು, ಒಟ್ಟು 7,43,808 ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಇಪಿಎಫ್‍ಒ ತಿಳಿಸಿದೆ.

Facebook Comments