ಇಂದಿನ ಪಂಚಾಗ ಮತ್ತು ರಾಶಿಫಲ (22-07-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಬನ್ನಿ ಬನ್ನಿ, ಈ ಆಸನದಲ್ಲಿ ಕುಳಿತಿರಿ, ಬಹಳ ಕಾಲದಿಂದ ಏಕೆ ಕಾಣಲಿಲ್ಲ? ಸಮಾಚಾರವೇನು, ಬಹಳ ದುರ್ಬಲರಾಗಿದ್ದೀರಲ್ಲಾ, ಕುಶಲವೇ, ನಿಮ್ಮನ್ನು ಕಂಡು ಬಹಳ ಸಂತಸವಾಯಿತು” ಹೀಗೆ ಯಾರು ಬಂದ ಮಿತ್ರರನ್ನು ಆದರದಿಂದ ಸಂತೋಷಗೊಳಿಸುವರೋ ಅಂಥವರ ಮನೆಗೆ ಯಾವ ಸಂದೇಹವೂ ಇಲ್ಲದ ಮನಸ್ಸಿನಿಂದ ಯಾವಾಗಲೂ ಹೋಗುವುದು ಯುಕ್ತ. -ಪಂಚತಂತ್ರ, ಮಿತ್ರಸಂಪ್ರಾಪ್ತಿ

Rashi

ಪಂಚಾಂಗ : 22.07.2018 ಭಾನುವಾರ
ಸೂರ್ಯ ಉದಯ ಬೆ.06.03 / ಸೂರ್ಯ ಅಸ್ತ ಸಂ.06.49
ಚಂದ್ರ ಉದಯ ಮ.02.37 / ಚಂದ್ರ ಅಸ್ತ ರಾ.02.18
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು
ಆಷಾಢ ಮಾಸ / ಶುಕ್ಲ ಪಕ್ಷ / ತಿಥಿ : ದಶಮಿ (ಮ.02.48)
ನಕ್ಷತ್ರ: ವಿಶಾಖ (ಮ.10.44) / ಯೋಗ: ಶುಭ (ಬೆ.07.16)
ಕರಣ: ಗರಜೆ-ವಣಿಜ್ (ಮ.02.48-ರಾ.03.32)
ಮಳೆ ನಕ್ಷತ್ರ: ಪುನರ್ವಸು / ಮಾಸ: ಕಟಕ / ತೇದಿ: 07

ಇಂದಿನ ವಿಶೇಷ: ಆಯನ, ಸಾಯನ ವೈಧೃತಿ ಸಾ.04.31

ರಾಶಿ ಭವಿಷ್ಯ : 

ಮೇಷ : ವಿದೇಶ ಪ್ರಯಾಣದಿಂದ ಹಣ ಸಂಪಾದಿ ಸುವಿರಿ. ಉತ್ತಮ ಭಾಷಣ ಮಾಡುವಿರಿ
ವೃಷಭ : ಸೋದರ ಮಾವ ನಿಮ್ಮನ್ನು ಕಡೆಗಣಿಸು ತ್ತಾರೆ.ಪ್ರೇಮಿಗಳಿಗೆ ತೊಂದರೆಯಾಗಬಹುದು
ಮಿಥುನ: ಮಕ್ಕಳು ನಿಮ್ಮ ಹಿತವಚನ ಕೇಳುವುದಿಲ್ಲ
ಕಟಕ : ಯಾವುದೇ ಕಾರಣಕ್ಕೂ ಸಾಲಕ್ಕೆ ಜಾಮೀನು ನೀಡದಿರಿ
ಸಿಂಹ: ಕೆಲಸ-ಕಾರ್ಯಗಳು ಉತ್ತಮವಾಗಿ ನಡೆಯುತ್ತವೆ
ಕನ್ಯಾ: ಶಿರೋಬಾಧೆ ಕಾಣಿಸು ತ್ತದೆ. ಖರ್ಚಿನಲ್ಲಿ ಹಿಡಿತವಿರಲಿ
ತುಲಾ: ಮನೆಯಲ್ಲಿ ಸಂತೋಷ ಕೂಟಗಳು ನಡೆಯುತ್ತವೆ
ವೃಶ್ಚಿಕ: ನ್ಯಾಯಾಲಯದಲ್ಲಿನ ತೀರ್ಪು ನಿಮ್ಮ ಪರವಾಗಿ ಬರಬಹುದು. ಉತ್ತಮ ದಿನ
ಧನುಸ್ಸು: ಶತ್ರುಗಳು ದೂರ ಸರಿಯುವರು. ಭೂ ವ್ಯವಹಾರದಲ್ಲಿ ಲಾಭವಿದೆ
ಮಕರ: ಓದುವುದಕ್ಕೆ ತಂದೆ-ತಾಯಿಯರ ಒತ್ತಡ ಹೆಚ್ಚಾಗುವುದು. ಇತರರಿಗೆ ಉಪಕಾರ ಮಾಡುವಿರಿ
ಕುಂಭ: ಜೂಜು ಮತ್ತು ಇತರೆ ವ್ಯವಹಾರಗಳಲ್ಲಿ ಹಣ ಕಳೆದುಕೊಳ್ಳುವಿರಿ. ಪ್ರೇಮಿಗಳಿಗೆ ವಿಪತ್ಕಾಲ
ಮೀನ: ಯಾರೊಂದಿಗೂ ವಾಗ್ವಾದ ಮಾಡಬೇಡಿ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್ >

Click Here to Download : Android / iOS

Facebook Comments

Sri Raghav

Admin