ಟೀಂ ಇಂಡಿಯಾದ ಬೌಲಿಂಗ್ ಪಡೆ ಸದೃಢವಾಗಿದೆ

ಈ ಸುದ್ದಿಯನ್ನು ಶೇರ್ ಮಾಡಿ

Jahir-Khan

ಮುಂಬೈ, ಜು. 22- ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯಿಂದ ಭಾರತ ತಂಡದ ಪ್ರಮುಖ ವೇಗಿಗಳಾದ ಭುವನೇಶ್ವರ್‍ಕುಮಾರ್ ಹಾಗೂ ಜಸ್‍ಪ್ರೀತ್ ಬೂಮ್ರಾ ಹೊರಗುಳಿದಿದ್ದರೂ ಕೂಡ ಬೌಲಿಂಗ್ ಪಡೆ ಸದೃಢವಾಗಿದೆ ಎಂದು ಮಾಜಿ ಕ್ರಿಕೆಟಿಗ ಜಹೀರ್‍ಖಾನ್ ಇಂದಿಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಆಂಗ್ಲರ ನಾಡಿನಲ್ಲಿ ಚುಟುಕು ಸರಣಿಯನ್ನು ಗೆದ್ದು ಸಂಭ್ರಮ ಪಟ್ಟಿದ್ದ ವಿರಾಟ್ ಕೊಹ್ಲಿ ಪಡೆ ಏಕದಿನ ಸರಣಿಯಲ್ಲಿ ಬೌಲಿಂಗ್ ಸಾಮಥ್ರ್ಯದಿಂದಲೇ ಸರಣಿ ಸೋತಿತು ಎಂದು ಹೇಳಲಾಗುತ್ತಿದೆ, ಆದರೆ ಟೆಸ್ಟ್‍ನಲ್ಲಿ ಟೀಂ ಇಂಡಿಯಾ ಬೌಲಿಂಗ್ ಸದೃಢವಾಗಿದ್ದು ಉತ್ತಮ ಪ್ರದರ್ಶನವನ್ನು ತೋರಲಿದ್ದಾರೆ ಎಂದರು.

ಭುವನೇಶ್ವರ್, ಬೂಮ್ರಾರ ಅನುಪಸ್ಥಿತಿ ಯಲ್ಲಿ ತಂಡದಲ್ಲಿ ಬೌಲಿಂಗ್‍ನ ಮುಂದಾಳತ್ವವನ್ನು ವಹಿಸಿ ಕೊಳ್ಳಲಿರುವ ಉಮೇಶ್‍ಯಾದವ್, ಇಶಾಂತ್‍ಶರ್ಮಾ, ಮೊಹಮ್ಮದ್ ಶಮಿ ಅವರು ಈಗಾಗಲೇ ಇಂಗ್ಲೆಂಡ್‍ನ ಪಿಚ್‍ಗಳಲ್ಲಿ ಆಡಿದ ಅನುಭವವನ್ನು ಹೊಂದಿದ್ದು ಈ ಬಾರಿಯ ಸರಣಿಯಲ್ಲಿ ಅನುಕೂಲವಾಗಲಿದೆ ಎಂದರು.
ಹೆಚ್ಚುವರಿ ಬೌಲರ್ ಆಗಿ ಗುರುತಿಸಿಕೊಂಡಿರುವ ಹಾರ್ದಿಕ್ ಪಾಂಡ್ಯಾ, ಸ್ಪಿನ್ನರ್‍ಗಳಾದ ರವಿಚಂದ್ರನ್ ಅಶ್ವಿನ್, ಕುಲ್‍ದೀಪ್‍ಯಾದವ್, ಯಜುವೇಂದ್ರಚಹಾಲ್ ಅವರು ಕೂಡ ಉತ್ತಮ ಬೌಲಿಂಗ್ ಕೌಶಲ್ಯತೆಯನ್ನು ಹೊಂದಿರುವುದರಿಂದ ಟೆಸ್ಟ್ ಸರಣಿಯಲ್ಲಿ ಬೌಲಿಂಗ್ ಸಮಸ್ಯೆ ಕಾಡದು ಎಂದು ಮಾಜಿ ಕ್ರಿಕೆಟಿಗ ಜಹೀರ್‍ಖಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Facebook Comments