ಪ್ರೀತಿಸಿ ಓಡಿಹೋದ ವಿದ್ಯಾರ್ಥಿನಿ ಬೆಂಬಲಕ್ಕೆ ನಿಂತ ಕೇರಳ ಹೈಕೋರ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

Love--01

ತಿರುವನಂತಪುರ, ಜು.22: ಪ್ರೀತಿ- ಪ್ರೇಮ ಕುರುಡು ಹಾಗೂ ಸಹಜ ಮಾನವ ಪ್ರವೃತ್ತಿ ಎಂದು ಬಣ್ಣಿಸಿರುವ ಕೇರಳ ಹೈಕೋರ್ಟ್, ಪರಸ್ಪರ ಪ್ರೇಮಿಸಿ ಓಡಿಹೋದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯನ್ನು ಅಮಾನತು ಮಾಡಿರುವ ಕಾಲೇಜು ಕ್ರಮವನ್ನು ರದ್ದುಪಡಿಸಿ ತೀರ್ಪು ನೀಡಿದೆ. ತಮ್ಮನ್ನು ಕಾಲೇಜಿನಿಂದ ಅಮಾನತು ಮಾಡಿರುವ ಕಾಲೇಜು ಆಡಳಿತ ಮಂಡಳಿ ಕ್ರಮದ ವಿರುದ್ಧ ವರ್ಕಳ ಸಿಎಚ್‍ಎಂಎಂ ಕಾಲೇಜ್ ಫಾರ್ ಅಡ್ವಾನ್ಸ್‍ಡ್ ಸ್ಟಡೀಸ್‍ನ ಬಿಬಿಎ ವಿದ್ಯಾರ್ಥಿನಿ ಮಾಳವಿಕಾ ಬಾಬು (20) ಹಾಗೂ ಅದೇ ಕಾಲೇಜಿನ ವೈಶಾಖ್ (21) ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು.

ಕಾಲೇಜು ಅಧಿಕಾರಿಗಳು, ನಿಕಟ ವೈಯಕ್ತಿಕ ಸಂಬಂಧವನ್ನು ವೈಯಕ್ತಿಕ ಖಾಸಗಿ ವಿಚಾರ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಇವರ ಪ್ರೇಮ ಕಾಲೇಜು ತರಗತಿಗಳನ್ನು ನಡೆಸಲು ಅಡ್ಡಿಯಾಗಿದೆ ಎನ್ನುವುದನ್ನು ಸಮರ್ಥಿಸಲು ಯಾವುದೇ ಪುರಾವೆಗಳು ಇಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.   ಮಾಳವಿಕಾ ಮತ್ತು ವೈಶಾಖ್ ಪರಸ್ಪರ ಪ್ರೀತಿಸುತ್ತಿದ್ದು, ತಮ್ಮ ಪ್ರೀತಿಗೆ ಪೋಷಕರು ಅಡ್ಡಿಯಾಗಿದ್ದಾರೆಂದು ಇಬ್ಬರು ಓಡಿಹೋಗಿದ್ದರು. ಇವರಿಬ್ಬರನ್ನು ಕಾಲೇಜಿನಿಂದ ಡಿಬಾರ್ ಮಾಡಲಾಗಿತ್ತು.

ಮಾಳವಿಕಾ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಇವರನ್ನು ಕೋರ್ಟ್‍ನಲ್ಲಿ ಹಾಜರುಪಡಿಸಿದ್ದರು. ಯುವತಿಯನ್ನು ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗಿಲ್ಲ ಎನ್ನುವುದು ಖಾತ್ರಿಯಾದ ಬಳಿಕ ನ್ಯಾಯಾಲಯ ಸ್ವತಂತ್ರ ನಿರ್ಧಾರ ಕೈಗೊಳ್ಳುವ ಅಧಿಕಾರ ಆಕೆಗಿದೆ ಎಂದು ತೀರ್ಪು ನೀಡಿತ್ತು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin