ಶ್ರೀದೇವಿ ಮುತ್ತುಮಾರಿಯಮ್ಮನವರ 36ನೆ ಕರಗ ಮಹೋತ್ಸವ

ಈ ಸುದ್ದಿಯನ್ನು ಶೇರ್ ಮಾಡಿ

Karaga
ಬೆಂಗಳೂರು, ಜು.22- ನಗರದ ನಂದಿನಿ ಬಡಾವಣೆಯಲ್ಲಿ ಶ್ರೀದೇವಿ ಮುತ್ತುಮಾರಿಯಮ್ಮನವರ 36ನೆ ವರ್ಷದ ಕರಗ ಮಹೋತ್ಸವವನ್ನು ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿಸಲಾಯಿತು. ನಿನ್ನೆ ಸಂಜೆ ಶ್ರೀದೇವಿ ಆರಾಧಕರಾದ ಪದ್ಮಾವತಿ ಅವರು ಹೂವಿನ ಕರಗವನ್ನು ತಲೆ ಮೇಲೆ ಹೊತ್ತು ಶಂಕರನಗರ, ಯಶವಂತಪುರ, ಆರ್‍ಎಂಸಿ ಯಾರ್ಡ್, ಮಾರಪ್ಪನಪಾಳ್ಯ, ಕೃಷ್ಣಾನಂದನಗರ, ಅಶೋಕಪುರಂ ಸೇರಿದಂತೆ ಪ್ರಮುಖ ಬಡಾವಣೆಗಳಲ್ಲಿ ಸಂಚರಿಸಿ ಮೂಲಸ್ಥಾನವನ್ನು ಸೇರಿದರು. ಕರಗ ಬರುವ ವೇಳೆ ರಸ್ತೆಯುದ್ದಕ್ಕೂ ಸಾರ್ವಜನಿಕರು ಭಕ್ತಿ-ಭಾವದಿಂದ ಕರಗಕ್ಕೆ ನಮಿಸಿ ಪೂಜೆ ಸಲ್ಲಿಸಿದರು.

ರಾತ್ರಿ ಶ್ರೀದೇವಿ ಮುತ್ತುಮಾರಿಯಮ್ಮ ದೇವಾಲಯದ ಬಳಿ ಅಗ್ನಿಕೊಂಡವನ್ನು ಹಾಕಲಾಗಿತ್ತು. ಪದ್ಮಾವತಿಯವರು ಕರಗ ಹೊತ್ತುಕೊಂಡೇ ಅಗ್ನಿಕೊಂಡ ಹಾದುದು ವಿಶೇಷವಾಗಿತ್ತು. ಸಾಮಾನ್ಯವಾಗಿ ಕೊಂಡ ಹೊತ್ತು ಅಗ್ನಿಕೊಂಡ ಹಾಯುವುದು ಅಪರೂಪ. ಹರಕೆ ಹೊತ್ತ ಭಕ್ತರು ಕೂಡ ಕೊಂಡದಲ್ಲಿ ಹಾಯ್ದು ಭಕ್ತಿಯನ್ನು ಮೆರೆದರು.  ಕಳೆದ 18 ರಿಂದ ದೇವಿಗೆ ವಿವಿಧ ಅಭಿಷೇಕ ಸೇರಿದಂತೆ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿಕೊಂಡು ಬರಲಾಗಿದ್ದು, ರಾತ್ರಿ ಪಲ್ಲಕ್ಕಿ ಉತ್ಸವ ನಡೆಯಿತು. ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಕರಗ ಮಹೋತ್ಸವದ ಪ್ರಯುಕ್ತ ಶ್ರೀದೇವಿ ಮುತ್ತುಮಾರಿಯಮ್ಮನವರಿಗೆ ವಿವಿಧ ಅಭಿಷೇಕ ನೆರವೇರಿಸಿ ಹೂವಿನ ಅಲಂಕಾರ ಮಾಡಲಾಗಿತ್ತು. ರಾಜರಾಜೇಶ್ವರಿನಗರ ಕೈಲಾಸ ಆಶ್ರಮದ ಪೀಠಾಧ್ಯಕ್ಷರಾದ ಶ್ರೀ ಜಯೇಂದ್ರಪುರಿ ಸ್ವಾಮೀಜಿ, ಮಾಜಿ ಶಾಸಕ ನೆ.ಲ.ನರೇಂದ್ರಬಾಬು ಸೇರಿದಂತೆ ಹಲವಾರು ಮುಖಂಡರು ಕರಗ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಇಂದು ಮಧ್ಯಾಹ್ನ ದೇವಾಲಯದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

Facebook Comments

Sri Raghav

Admin