ಚೆನ್ನೈನಲ್ಲಿ ನಿರ್ಮಾಣ ಹಂತದ ಕಟ್ಟಡವೊಂದು ಕುಸಿದು ಓರ್ವ ಸಾವು, 28 ಮಂದಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Building

ಚೆನ್ನೈ, ಜು.22-ಇಲ್ಲಿನ ಕಂದನ್ ಚಾವಡಿ ಪ್ರದೇಶದಲ್ಲಿ ನಿರ್ಮಾಣ ಹಂತದ ಕಟ್ಟಡವೊಂದು ಕುಸಿದು ಒಬ್ಬರು ಮೃತಪಟ್ಟು, ಇತರೆ 28 ಮಂದಿ ಗಾಯಗೊಂಡಿರುವ ಘಟನೆ ನಿನ್ನೆ ತಡರಾತ್ರಿ ಸಂಭವಿಸಿದೆ. ಭಗ್ನಾವಶೇಷಗಳ ಅಡಿ ಸಿಲುಕಿರುವ ಹಲವರ ರಕ್ಷಣೆಗೆ ಸಮರೋಪಾದಿಯ ಕಾರ್ಯಾಚರಣೆ ಮುಂದುವರಿದಿದೆ. ಅವಶೇಷಗಳಿಂದ ಒಬ್ಬ ವ್ಯಕ್ತಿಯ ಮೃತದೇಹವನ್ನು ಹೊರಕ್ಕೆ ತೆಗೆಯಲಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದ್ದು, ತಲೆಗೆ ಪೆಟ್ಟು ಬಿದ್ದಿರುವ ಐವರ ಸ್ಥಿತಿ ಗಂಭೀರವಾಗಿದೆ.

ನಿರ್ಮಾಣ ಹಂತದ ಆಸ್ಪತ್ರೆಯ ಕಬ್ಬಿಣದ ಸರಳು ಹಾಗೂ ಆಧಾರ ತೊಲೆಗಳು ಕಳಚಿ ಬಿದ್ದು ಈ ದುರ್ಘಟನೆ ಸಂಭವಿಸಿದೆ. ದುರಂತದ ಸುದ್ದಿ ತಿಳಿಯುತ್ತಿದ್ದಂತೆ 8 ಅಂಬ್ಯುಲೆನ್ಸಗಳು ಮತ್ತು ಮೂರು ವಾಹನಗಳಲ್ಲಿ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರಿಸಿದ್ದಾರೆ ಎಂದು ಚೆನ್ನೈ ಜಿಲ್ಲಾಧಿಕಾರಿ ಪೊನ್ನೈಯನ್ ತಿಳಿಸಿದ್ದಾರೆ.

Facebook Comments

Sri Raghav

Admin