ಮೂಲವ್ಯಾಧಿ ಸೇರಿ ಹಲವು ಖಾಯಿಲೆಗಳಿಗೆ ‘ಮೂಲಂಗಿ’ ಮದ್ದು..!

ಈ ಸುದ್ದಿಯನ್ನು ಶೇರ್ ಮಾಡಿ

Moolangi--01

ಮೂಲಂಗಿಯನ್ನು ದಿವ್ಯೌಷಧಿ ಗುಣಗಳ ತರಕಾರಿ ಎಂದೇ ಪರಿಗಣಿಸಲಾಗಿದೆ. ಮೂಲಂಗಿ ಮತ್ತು ಮೂಲಂಗಿ ಎಲೆಯಲ್ಲಿ ಔಷಧೀಯ ಗುಣಗಳಿವೆ. 100 ಗ್ರಾಂ ಮೂಲಂಗಿಯಲ್ಲಿ ಅನೇಕ ಪೋಷಕಾಂಶಗಳಿವೆ. ಸಸಾರಜನಕ, ಪಿಷ್ಠ, ಮೇದಸ್ಸು, ಖನಿಜಾಂಶ, ನಾರಿನಂಶ, ರಂಜಕ, ಸೋಡಿಯಂ, ಪೊಟ್ಯಾಷಿಯಂ, ಸುಣ್ಣ, ಕಬ್ಬಿಣ, ಥಿಯಾಮಿನ್, ರಿಬೋಫ್ಲಾವಿನ್, ಆಕ್ಸಾಲಿಕ್ ಆಮ್ಲ, ಎ ಮತ್ತು ಸಿ ಜೀವಸತ್ವ ಇದರಲ್ಲಿದೆ. ಮೂಲಂಗಿಯಿಂದ ಅನೇಕ ಪ್ರಯೋಜನಗಳಂಟು.ಜೀರ್ಣಕ್ರಿಯೆಗೆ ಮಲಬದ್ದತೆ, ಮೂಲವ್ಯಾಧಿ ಮತ್ತು ಮೂಲವೃಣ ನಿವಾರಣೆಗೆ ಇದು ಗುಣಕಾರಿ. ಮೂಲಂಗಿ ಜೀರ್ಣಕಾರಿ. ಊಟದಲ್ಲಿ ಮೂಲಂಗಿಯ ಪಚ್ಚಡಿ ಉಪಯೋಗಿಸುವುದರಿಂದ ಉಂಡ ಆಹಾರ ಚೆನ್ನಾಗಿ ಜೀರ್ಣವಾಗುವುದು. ಊಟದ ನಂತರ ಹಸಿ ಮೂಲಂಗಿ ತಿನ್ನುವುದರಿಂದಲೂ ಉಂಡ ಆಹಾರ ಪಚನವಾಗುವುದು.

Moolangi--02

ಬೆಂದ ಮೂಲಂಗಿ ಹೊಟ್ಟೆಯಲ್ಲಿ ಹೆಚ್ಚು ಗಾಳಿ ಉತ್ಪತ್ತಿ ಮಾಡುತ್ತದೆ. ಆದುದರಿಂದ ಹಸಿ ಮೂಲಂಗಿಯೇ ತಿನ್ನಲು ಯೋಗ್ಯ. ಕಣ್ಣು, ಕಿವಿ, ಮೂಗು, ಗಂಟಲು ರೋಗಗಳಲ್ಲಿ ಮೂಲಂಗಿ ಅತ್ಯಂತ ಗುಣಕಾರಿ. ಆದುದರಿಂದ ಹಸಿ ಮೂಲಂಗಿ ಸೇರಬೇಕಾದ್ದು ಅತ್ಯಗತ್ಯ. ರೊಟ್ಟಿ ಅಥವಾ ಚಪಾತಿಯೊಂದಿಗೆ ಹಸಿ ಮೂಲಂಗಿ ಕಚ್ಚಿ ತಿನ್ನಬಹುದು.

ಹಸಿ ಮೂಲಂಗಿ ಕೊಸಂಬರಿಯನ್ನು ಆಗಾಗ ಸೇವಿಸುತ್ತಿದ್ದರೆ ನೆಗಡಿ ಬರುವ ಸಂಭವ ಕಡಿಮೆಯಾಗುತ್ತದೆ.  ಅಜೀರ್ಣ, ಮಲಬದ್ಧತೆ, ದೃಷ್ಟಿಮಾಂದ್ಯ, ಮೂಲವ್ಯಾಧಿ, ಕಾಮಾಲೆ ಇತ್ಯಾದಿ ರೋಗಗಳಲ್ಲಿ ಹಸಿ ಮೂಲಂಗಿಯ ಹೋಳುಗಳಿಗೆ ಕಾಳು ಮೆಣಿಸಿನಪುಡಿ, ಉಪ್ಪು, ನಿಂಬೆ ರಸ ಸೇರಿಸಿ ಸೇವಿಸುವುದರಿಂದ ಗುಣವುಂಟು ಹಸಿದ ಹೊಟ್ಟೆಯಲ್ಲಿ ಮೂಲಂಗಿ ತಿನ್ನಬಾರದು ಮತ್ತು ಹೆಚ್ಚು ಬೇಯಿಸಿದ ಮೂಲಂಗಿಯನ್ನು ಸರ್ವಥಾ ತಿನ್ನಬಾರದು.

Moolangi--01

ಮೂಲವ್ಯಾಧಿಯಿಂದ ನರಳುವ ರೋಗಿಗಳು ಹಸಿ ಮೂಲಂಗಿ ಯಥೇಚ್ಚವಾಗಿ ತಿನ್ನುವುದರಿಂದ ಪ್ರಯೋಜನವಿದೆ. ಮೂಲಂಗಿ ಮತ್ತು ಉಪ್ಪು ನುಣ್ಣಗೆ ಅರಿದು ಚೇಳು ಕುಟುಕಿದ ಸ್ಥಳಕ್ಕೆ ಹಚ್ಚಿದರೆ ಚೇಳಿನ ವಿಷ ಏರುವುದಿಲ್ಲ. ಕೆಲವೇ ನಿಮಿಷಗಳಲ್ಲಿ ಉರಿ ಮತ್ತು ಚಳುಕು ನಿಂತು ಹೋಗುತ್ತದೆ. ಮೂಲಂಗಿ ಸೊಪ್ಪಿನಲ್ಲಿ ಉತ್ತಮ ಪೋಷಕಾಂಶಗಳಿರುವ ಕಾರಣ ಸೊಪ್ಪನ್ನು ಎಸೆಯಬಾರದು. ಸೊಪ್ಪಿನಿಂದ ಪಲ್ಯ ತಯಾರಿಸಿ ಸೇವಿಸುವುದು ಆರೋಗ್ಯಕರ.

Moolangi--03

ಮೂಲಂಗಿ ಸೊಪ್ಪನ್ನು ಜಜ್ಜಿ ಹಿಂಡಿ ರಸ ತೆಗೆಯಿರಿ. ಆ ರಸ ಸೇವಿಸುವುದರಿಂದ ಕಟ್ಟು ಮೂತ್ರ ನಿವಾರಣೆಯಾಗುತ್ತದೆ. ಒಂದು ಟೀ ಚಮಚ ಮೂಲಂಗಿ ಬೀಜವನ್ನು ನೀರಿನಲ್ಲಿ ನುಣ್ಣಗೆ ಅರೆದು, ಒಂದು ಬಟ್ಟಲು ಮಜ್ಜಿಗೆಯಲ್ಲಿ ಕದಡಿ ಸೇವಿಸುವುದರಿಂದ ತಡೆದ ಮುಟ್ಟು ಕ್ರಮಬದ್ಧವಾಗುತ್ತದೆ.     ಮೂಲಂಗಿ ಬೀಜವನ್ನು ಮೊಸರಿನಲ್ಲಾಗಲೀ, ನಿಂಬೆ ರಸದಲ್ಲಾಗಲೀ, ಸ್ವಮೂತ್ರದಲ್ಲಾಗಲಿ ಅರೆದು ಹಚ್ಚುವುರಿಂದ ಗಜಕರ್ಣ, ಹುಳುಕಡ್ಡಿ, ತುರಿಕಜ್ಜಿ ಇತ್ಯಾದಿ ಚರ್ಮರೋಗಗಳು ಗುಣವಾಗುತ್ತವೆ.   ಮೂಲಂಗಿಯಿಂದ ಸಾದಿಷ್ಟ ಮತ್ತು ಆರೋಗ್ಯಕರ ಅಡುಗೆಯನ್ನು ತಯಾರಿಸಬಹುದು.ಮೂಲಂಗಿ ಹುಳಿ, ಹಸಿ ಮೂಲಂಗಿ ಪಲ್ಯಗಳು, ಚಟ್ನಿ, ಸಲಾಡ್, ಸಾರು-ಸಂಬಾರುಗಳು, ರಸಂ, ಮತ್ತು ಪರೋಟ- ಮೂಲಂಗಿಯ ರುಚಿಕರ ಆಹಾರಗಳು.

Moolangi--04

Facebook Comments

Sri Raghav

Admin