ಸುಜುಕಿ ಬರ್ಗ್ಮನ್ ಸ್ಟ್ರೀಟ್ ಮಾರುಕಟ್ಟೆಗೆ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

Suzuki-1

ಬೆಂಗಳೂರು, ಜು.22- ಜಪಾನ್‍ನ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯಾದ ಸುಜುಕಿ ಮೋಟಾರ್ ಕಾರ್ಪೋರೇಶನ್‍ನ ಅಧೀನ ಸಂಸ್ಥೆಯಾದ ಸುಜುಕಿ ಮೋಟಾರ್ ಸೈಕಲ್ ಇಂಡಿಯಾವಿನ್ಯಾಸದಿಂದ ತೆಗೆದುಕೊಂಡ ಐಶಾರಾಮಿ ವಿನ್ಯಾಸ ಹಾಗೂ ಆಧುನಿಕ ತಂತ್ರಜ್ಞಾನ ಭರಿತವಾಗಿದ್ದು, ಸುಜುಕಿಯ ಉತ್ಪಾದನಾ ಘಟಕದಿಂದ ಹೊರಬಂದಿರುವ ಹೊಸ ಬರ್ಗ್ಮನ್ ಸ್ಟ್ರೀಟ್ ವಾಹನ ಚಾಲನೆಯ ಪರಮಾನಂದವನ್ನು ಪ್ರತಿನಿಧಿಸುತ್ತದೆ ಎಂದು ವಾಹನ ಬಿಡುಗಡೆ ಮಾಡಿದ ಸಂಸ್ಥೆಯ ದಕ್ಷಿಣ ಭಾರತ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಕೆ.ಎನ್.ವಿ.ಎಸ್.ಸುರೇಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬರ್ಗ್ಮನ್ ಸ್ಟ್ರೀಟ್, ಆಧುನಿಕ ಐಶಾರಾಮಿ ಚಾಲನೆಯ ಪರಿಕಲ್ಪನೆಯ ಮೇಲೆ ಗಮನ ಕೇಂದ್ರೀಕರಿಸುತ್ತಾ ಭಾರತದಲ್ಲಿ ಸ್ಕೂಟರ್‍ನ ಹೊಸ ವರ್ಗವನ್ನು ಸೃಷ್ಟಿಸುತ್ತದೆ. ಗ್ರಾಹಕರಿಗೆ ಪ್ರೀಮಿಯಮ್, ಆವಿಷ್ಕಾರದ ತನ್ನ ಬಹು ನಿರೀಕ್ಷಿತ 125 ಸಿಸಿ ಸ್ಕೂಟರ್ ಬರ್ಗ್ಮನ್ ಸ್ಟ್ರೀಟ್‍ಅನ್ನು ನಗರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.  ಐರೋಪ್ಯ ಸ್ಕೂಟರ್ ವಿನ್ಕಾರಿ ವಿಶ್ವದರ್ಜೆ ಉತ್ಪನ್ನಗಳನ್ನು ಒದಗಿಸುವುದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಅವರು ತಿಳಿಸಿದರು
ಹೊಸ ಬರ್ಗ್ಮನ್ ಸ್ಟ್ರೀಟ್ ಮೆಟಾಲಿಕ್ ಮ್ಯಾಟ್ ಫೈಬ್ರಾಯ್ನ್ ಗ್ರೇ, ಗ್ಲಾಸ್ ಸ್ಪಾರ್ಕ್‍ಲ್ ಬ್ಲ್ಯಾಕ್ ಹಾಗೂ ಪರ್ಲ್ ಮಿರಾಜ್ ವೈಟ್ ಮಾದರಿಗಳಲ್ಲಿ ಲಭ್ಯವಿದೆ ಅವರು ಹೇಳಿದರು.

Facebook Comments

Sri Raghav

Admin