ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 57 ಮಂದಿಯಿಂದ 13,300 ರೂ. ದಂಡ ವಸೂಲಿ

ಈ ಸುದ್ದಿಯನ್ನು ಶೇರ್ ಮಾಡಿ

Train-TC
ಮೈಸೂರು,ಜು.22-ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದವರಿಂದ 13,300 ರೂ.ಗಳನ್ನು ರೈಲ್ವೆ ಇಲಾಖೆ ವೀಶೇಷ ತಂಡ ವಸೂಲಿ ಮಾಡಿದೆ.
ನೈರುತ್ಯ ರೈಲ್ವೆ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಯಶೋಧಕುಮಾರ್ ನೇತೃತ್ವದ ತಂಡ ಅರಸೀಕೆರೆ-ಮೈಸೂರು ಪ್ಯಾಸೆಂಜರ್ ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿ ದ್ದವರಿಂದ ದಂಡ ವಸೂಲಿ ಮಾಡಲಾಗಿದೆ.  ಟಿಕೆಟ್ ರಹಿತ ಪ್ರಯಾಣ, ಮಹಿಳೆಯರಿಗೆ ಮೀಸಲಿಟ್ಟ ಸೀಟಿನಲ್ಲಿ ಪುರುಷರು ಕುಳಿತಿರು ವುದು, ಫುಟ್‍ಬೋಡ್‍ನಲ್ಲಿ ನಿಂತಿದ್ದವರ ಹಾಗೂ ಧೂಮಪಾನ ಮಾಡುತ್ತಿದ್ದವರಿಗೆ ದಂಡ ವಿಧಿಸಲಾಗಿದೆ.  57 ಪ್ರಯಾಣಿಕರನ್ನು ವಶಕ್ಕೆ ಪಡೆದು ನಂತರ ರೈಲ್ವೆ ಮ್ಯಾಜಿಸ್ಟ್ರೇಟ್ ರವೀಂದ್ರ.ಡಿ. ಹರಿ ಅವರ ಮುಂದೆ ಹಾಜರುಪಡಿಸಲಾಗಿದ್ದು, 23 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಉಳಿದ 34 ಮಂದಿಯಿಂದ 13,300 ರೂ. ದಂಡ ವಿಧಿಸಲಾಗಿದೆ.

Facebook Comments