Shocking : ಅಮೆರಿಕ-ಮೆಕ್ಸಿಕೋ ಗಡಿಯಲ್ಲಿ 60,000 ಭಾರತೀಯ ಯುವಕರನ್ನು ಬಂಧನದಲ್ಲಿಡಲಾಗಿದೆ..!

ಈ ಸುದ್ದಿಯನ್ನು ಶೇರ್ ಮಾಡಿ

Mexico--01

ಲೂಧಿಯಾನಾ, ಜು.22-ಅಮೆರಿಕ ಮತ್ತು ಮೆಕ್ಸಿಕೋ ಗಡಿ ಭಾಗಗಳಲ್ಲಿರುವ ಶಿಬಿರಗಳಲ್ಲಿ 60,000ಕ್ಕೂ ಹೆಚ್ಚು ಭಾರತೀಯ ಯುವಕರನ್ನು ಬಂಧನದಲ್ಲಿಡಲಾಗಿದ್ದು, ಇವರಲ್ಲಿ ಹೆಚ್ಚಿನವರು ಪಂಜಾಬ್‍ನವರಾಗಿದ್ದಾರೆ ಎಂಬ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ. ಕಾಂಗ್ರೆಸ್ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಮನೀಷ್ ತಿವಾರಿ ನಿನ್ನೆ ಈ ಸುದ್ದಿಯನ್ನು ಬಹಿರಂಗಗೊಳಿಸಿದರು.

ಲೂಧಿಯಾನಾದಲ್ಲಿ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ತಾವು ಇತ್ತೀಚೆಗೆ ಅಮೆರಿಕ ಪ್ರವಾಸದ ವೇಳೆ ಅಮೆರಿಕ-ಮೆಕ್ಸಿಕೋ ಗಡಿ ಭಾಗಗಳಿಗೆ ಭೇಟಿ ನೀಡಿದಾಗ, ಅಲ್ಲಿನ ಗಂಭೀರ ಪರಿಸ್ಥಿತಿ ಬಗ್ಗೆ ತಿಳಿದು ಬಂದಿತು ಎಂದು ತಿವಾರಿ ಹೇಳಿದ್ದಾರೆ. ಮೆಕ್ಸಿಕೋ ಗಡಿಗಳ ಮೂಲಕ ಅಮೆರಿಕದೊಳಗೆ ನುಸುಳಲು ಯತ್ನಿಸಿದ್ದ 60,000ಕ್ಕೂ ಹೆಚ್ಚು ಭಾರತೀಯರನ್ನು ಬಂಧಿಸಲಾಗಿದೆ. ಇವರಲ್ಲಿ ಶೇ.90ರಷ್ಟು ಮಂದಿ ಪಂಜಾಬ್‍ನವರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಶಿಬಿರಗಳಲ್ಲಿ ಬಂಧನದಲ್ಲಿರುವ ಭಾರತೀಯರನ್ನು ಬಿಡುಗಡೆಗೊಳಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮುಂದಾಗಬೇಕು. ನಮ್ಮ ಯುವಕರು ಉದ್ಯೋಗ ಅರಸಿ ವಿದೇಶಕ್ಕೆ ತೆರಳಿ ತೊಂದರೆಗೆ ಸಿಲುಕುವುದನ್ನು ತಪ್ಪಿಸಿಲು ಇಲ್ಲೇ ಸೂಕ್ತ ಉದ್ಯೋಗಾವಕಾಶಗಳನ್ನು ಕಲ್ಪಿಸಬೇಕು ಎಂದು ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದರು.

Facebook Comments

Sri Raghav

Admin