ಆ.28ರಂದು ಅಲ್ವರ್ ಹತ್ಯೆ ಪ್ರಕರಣದ ಸುಪ್ರೀಂ ವಿಚಾರಣೆ

ಈ ಸುದ್ದಿಯನ್ನು ಶೇರ್ ಮಾಡಿ

Supreme_Court_of_India_-_Retouched
ನವದೆಹಲಿ, ಜು.23-ಅಲ್ವರ್‍ನಲ್ಲಿ ಗೋ ಕಳ್ಳ ಸಾಗಣೆದಾರ ಎಂಬ ಶಂಕೆಯಿಂದ ಯುವಕನೊಬ್ಬನನ್ನು ಗ್ರಾಮಸ್ಥರು ಬಡಿದು ಕೊಂದ ಪ್ರಕರಣದಲ್ಲಿ ರಾಜಸ್ತಾನ ಸರ್ಕಾರದ ವಿರುದ್ಧ ನ್ಯಾಯಾಲಯ ನಿಂದನಾ ಕ್ರಮ ಕೈಗೊಳ್ಳಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಇಂದು ಸಮ್ಮತಿಸಿದೆ. ಈ ಅರ್ಜಿಗಳ ವಿಚಾರಣೆಯನ್ನು ಆಗಸ್ಟ್ 28ರಂದು ನಡೆಸುವುದಾಗಿ ಸರ್ವೋನ್ನತ ನ್ಯಾಯಾಲಯ ತಿಳಿಸಿದೆ.

ಈ ಸಂಬಂಧ ತುಷಾರ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕ ತಹಸೀನ್ ಪೂನಾವಾಲಾ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಪೀಠವು ಆ.28ರಂದು ಇದರ ವಿಚಾರಣೆ ನಡೆಸುವುದಾಗಿ ತಿಳಿಸಿದೆ.  ಸುಪ್ರೀಂಕೋರ್ಟ್ ಆದೇಶವಿದ್ದರೂ ರಾಜಸ್ತಾನದಲ್ಲಿ ಗುಂಪಿನಿಂದ ಹತ್ಯೆ ನಡೆದಿದ್ದು, ಇದು ನ್ಯಾಯಾಲಯ ನಿಂದನೆ ಮತ್ತು ಕಾನೂನು ಉಲ್ಲಂಘನೆಯಾಗಿದೆ. ಇದಕ್ಕಾಗಿ ರಾಜಸ್ತಾನ ಸರ್ಕಾರವ ವಿರುದ್ಧ ನ್ಯಾಯಾಲಯ ನಿಂದನೆ ಕ್ರಮ ಜರುಗಿಸುವಂತೆ ಅರ್ಜಿದಾರರು ಕೋರಿದ್ದರು.

Facebook Comments