56 ವರ್ಷ ಹಳೆಯ ಪೆರಾರಿ ರೇಸ್ ಕಾರಿನ ಬೆಲೆ 45 ದಶಲಕ್ಷ ಡಾಲರ್..!

ಈ ಸುದ್ದಿಯನ್ನು ಶೇರ್ ಮಾಡಿ

Old-Car
ನೀವೇನೇ ಹೇಳಿ ಓಲ್ಡ್ ಈಸ್ ಗೋಲ್ಡ್ ಎಂಬುದು ಸತ್ಯ. ಇದಕ್ಕೆ ಸಾಕ್ಷಿ-1962ರ ಫೆರಾರಿ ರೇಸ್ ಕಾರೊಂದು ಭರ್ಜರಿ ಬೆಲೆಗೆ ಮಾರಾಟವಾಗಲು ಸಜ್ಞಾಗಿದೆ. ಈ ಕಾರು 45 ದಶಲಕ್ಷ ಡಾಲರ್‍ಗಿಂತಲೂ ಅಧಿಕ ಮೌಲ್ಯಕ್ಕೆ ಹರಾಜು ಆಗಲಿದೆ.  1962ರಲ್ಲಿ ನಿರ್ಮಾಣವಾದ 250-ಜಿಟಿಓ ರೋಡ್ ರೇಸಿಂಗ್ ಕಾರನ್ನು ಈಗ ಹರಾಜಿಗೆ ಇಡಲಾಗಿದೆ. ಆಗಸ್ಟ್ 24 ಮತ್ತು 24ರಂದು ಕ್ಯಾಲಿಫೋರ್ನಿಯಾದಲ್ಲಿ ಬಹು ಮೌಲ್ಯದ ಈ ಕಾರು 45 ದಶಲಕ್ಷ ಡಾಲರ್‍ಗಳಿಗೆ ಬಿಕರಿಯಾಗುವ ನಿರೀಕ್ಷೆ ಇದೆ.
ಕಡು ಕೆಂಪು ಬಣ್ಣದ ಫೆರಾರಿ ಕಾರು ಅತ್ಯಂತ ವಿರಳ ಮತ್ತು ವಿಂಟೇಜ್ ಕಾರು ಎಂಬ ಹೆಗ್ಗಳಿಕೆ ಪಡೆದಿದೆ. 250-ಜಿಟಿಒ ಮಾದರಿಯ ಕೇವಲ 36 ಕಾರುಗಳು ಮಾತ್ರ ಈ ವಿಶ್ವದಲ್ಲಿದೆ. ಇಟಲಿಯ ಪ್ರತಿಷ್ಠಿತ ಫೆರಾರಿ ಕಾರು ತಯಾರಿಕಾ ಸಂಸ್ಥೆ ಈ ವಾಹನವನ್ನು ನಿರ್ಮಿಸಿದೆ. 2000 ಇಸವಿ ತನಕ ಈ ಕಾರು ಅಮೆರಿಕದ ಕಾರು ಸಂಗ್ರಹಗಾರ ಹಾಗೂ ನ್ಯೂಮೆರಿಕ್ಸ್ ಸಾಫ್ಟ್‍ವೇರ್ ಕಂಪನಿ ಅಧ್ಯಕ್ಷ ಡಾ. ಗ್ರೆಜ್ ವಿಟ್ಟೆನ್ ಅವರ ಬಳಿ ಇತ್ತು. ಇದನ್ನು ಅವರು ವಿಂಟೇಜ್ ಕಾರ್ ರ್ಯಾಲಿಗಳಲ್ಲಿ ಬಳಸುತ್ತಿದ್ದರು. ಈಗ ಇದನ್ನು ಆರ್‍ಎಂ ಸೋಥೆಬಿಸ್ ಹರಾಜು ಕೇಂದ್ರ ಮಾರಾಟ ಮಾಡುತ್ತಿದೆ.   2014ರಲ್ಲಿ ಇದೇ ಮಾದರಿಯ ಕಾರು 38.1 ದಶಲಕ್ಷ ಡಾಲರ್‍ಗಳಿಗೆ ಮಾರಾಟವಾಗಿ ಬಹು ಮೌಲ್ಯಯುತ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈಗ 45 ದಶಲಕ್ಷ ಡಾಲರ್‍ಗಳಿಗೆ ಹರಾಜು ಆಗುವ ನಿರೀಕ್ಷೆ ಇದ್ದು, ಹಿಂದಿನ ದಾಖಲೆ ಮುರಿದು ಬೀಳಲಿದೆ.

Facebook Comments

Sri Raghav

Admin