ಲಂಡನ್‍ನಿಂದ ಬಹುಮಾನ ಬಂದಿದೆ ಎಂದು ನಂಬಿಸಿ ಲಕ್ಷಾಂತರ ರೂ. ಪಂಗನಾಮ..!

ಈ ಸುದ್ದಿಯನ್ನು ಶೇರ್ ಮಾಡಿ

Fraud-gift

ಕೆಜಿಎಫ್, ಜು.23- ಲಂಡನ್‍ನಿಂದ ಬಹುಮಾನ ಬಂದಿದೆ ಅದಕ್ಕೆ ನೀವು ಹಣ ಪಾವತಿಸಬೇಕು ಎಂದು ನಂಬಿಸಿ ವ್ಯಕ್ತಿಯಿಂದ ಲಕ್ಷಾಂತರ ಹಣ ವಂಚಿಸಿರುವ ಘಟನೆ ಆಂಡ್ರಸನ್‍ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಾಮರಾಜಪೇಟೆ ಬಡಾವಣೆ ನಿವಾಸಿ ಸ್ವಾಮಿನಾಥನ್ ಎಂಬುವರ ಪತ್ನಿ ಗಿರಿಜಾ ರವರ ಮೊಬೈಲ್‍ಗೆ ಕರೆ ಮಾಡಿ ನಿಮಗೆ ಲಂಡನ್ ನಿಂದ ಬಹುಮಾನ ಪಾರ್ಸೆಲ್ ಬಂದಿದೆ ಎಂದು ನಂಬಿಸಿ ಕಳೆದ ಫೆ.19 ರಿಂದ ಮಾ.7 ರ ವರೆಗೆ ಆಗಾಗ ಕರೆ ಮಾಡಿ ಸುಮಾರು 16.45 ಲಕ್ಷ ಹಣವನ್ನು ಖಾತೆಗೆ ಜಮಾ ಮಾಡಿಸಿಕೊಂಡು ಮೋಸ ಮಾಡಿದ್ದಾರೆ ಎಂದು ಸ್ವಾಮಿನಾಥನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Facebook Comments

Sri Raghav

Admin