ಇನ್ನೆರಡು ದಿನದಲ್ಲಿ ಪೊಲೀಸರ ಕೈಸೇರಲಿದೆ ಶೀರೂರು ಶ್ರೀಗಳ ಮರಣೋತ್ತರ ಪರೀಕ್ಷಾ ವರದಿ

ಈ ಸುದ್ದಿಯನ್ನು ಶೇರ್ ಮಾಡಿ

Shirooru-Swamiji--01

ಬೆಂಗಳೂರು, ಜು.23- ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ತೀವ್ರಗೊಳಿಸಿರುವ ತನಿಖಾಧಿಕಾರಿಗಳು, ಶ್ರೀಗಳ ಮರಣೋತ್ತರ ಪರೀಕ್ಷೆಯ ವರದಿ ಗಾಗಿ ಕಾಯುತ್ತಿದ್ದಾರೆ. ಇಂದು ಅಥವಾ ನಾಳೆ ಈ ವರದಿ ಪೊಲೀಸರ ಕೈ ಸೇರಲಿದ್ದು, ಇದರಿಂದ ತನಿಖೆಗೆ ಇನ್ನಷ್ಟು ಸಹಕಾರವಾಗಲಿದೆ.  ಇದುವರೆಗೆ ನಾಲ್ವರನ್ನು ವಿಚಾರಣೆ ನಡೆಸಿದ ತನಿಖಾಧಿಕಾರಿಗಳಿಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆದ್ದರಿಂದ ಮರಣೋತ್ತರ ಪರೀಕ್ಷೆಯ ವರದಿ ಕೈ ಸೇರಿದ ಬಳಿಕ ಈ ನಿಟ್ಟಿನಲ್ಲಿ ಹೊಸ ಸುಳಿವು ಲಭ್ಯವಾಗಬಹುದು ಎಂಬುದು ಪೊಲೀಸರ ನಿರೀಕ್ಷೆಯಾಗಿದೆ. ಶ್ರೀಗಳಿಗೆ ಆಪ್ತರಾಗಿದ್ದರು ಎನ್ನಲಾದ ಮಹಿಳೆಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂಬ ವರದಿಯ ಬಗ್ಗೆಯೂ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರ್ಗಿ ಸ್ಪಷ್ಟವಾಗಿ ಏನನ್ನೂ ತಿಳಿಸಿಲ್ಲ. ಮಾತ್ರವಲ್ಲ ಮಾಧ್ಯಮಗಳು ಈ ವಿಷಯದಲ್ಲಿ ವದಂತಿಗಳನ್ನು ಹಬ್ಬಿಸಬಾರದು ಎಂದು ಮನವಿ ಮಾಡಿದ್ದಾರೆ.

Facebook Comments

Sri Raghav

Admin