ಶಾಸಕ ಶ್ರೀರಾಮುಲು ಕಿಚ್ಚ ಸುದೀಪ್’ರನ್ನು ಭೇಟಿ ಮಾಡಿದ್ದೇಕೆ..?

ಈ ಸುದ್ದಿಯನ್ನು ಶೇರ್ ಮಾಡಿ

Sudeep--02

ಬೆಂಗಳೂರು, ಜು.23- ನಟ ಸುದೀಪ್ ಅವರನ್ನು ಇಂದು ಅವರ ಮನೆಯಲ್ಲಿ ಭೇಟಿ ಮಾಡಿದ ಶಾಸಕ ಶ್ರೀರಾಮುಲು, ಕೇಂದ್ರ ಸರ್ಕಾರದ ಸಾಧನೆಗಳನ್ನು ಕಿರುಹೊತ್ತಿಗೆಯನ್ನು ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮುಖ ಯೋಜನೆಗಳಾದ ಬೇಟಿ ಪಡಾವೋ,ಬೇಟಿ ಬಚಾವೊ, ಜನಧನ್, ಉಜ್ವಲ್ ಯೋಜನೆ ಸೇರಿದಂತೆ ಇನ್ನಿತರ ಪ್ರಮುಖ ಯೋಜನೆಗಳನ್ನು ಒಳಗೊಂಡ ನಾಲ್ಕು ವರ್ಷಗಳ ಸಾಧನೆಯ ಕಿರುಹೊತ್ತಿಗೆಯನ್ನು ಭೇಟಿ ಸಂದರ್ಭದಲ್ಲಿ ಕೊಟ್ಟರು.

Sudeep--01

ಸಮಾಜದ ಗಣ್ಯರಿಗೆ ಸಾಧನೆಯ ಈ ಕಿರುಹೊತ್ತಿಗೆ ನೀಡಲು ಬಿಜೆಪಿ ವರಿಷ್ಠ ಅಮಿತ್ ಷಾ ಸೂಚನೆ ಹಿನ್ನೆಲೆಯಲ್ಲಿ ಈಗಾಗಲೇ ಆದಿಚುಂಚನಗಿರಿಯ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ರವಿಶಂಕರ್ ಗುರೂ ಸೇರಿದಂತೆ ಮತ್ತಿತರರಿಗೆ ನೀಡಲಾಗಿದೆ. ಇಂದು ಸುದೀಪ್ ಅವರ ನಿವಾಸಕ್ಕೆ ಶ್ರೀರಾಮುಲು ಭೇಟಿ ನೀಡಿ ಪುಸ್ತಕ ಹಸ್ತಾಂತರಿಸಿದರು.

Facebook Comments

Sri Raghav

Admin