ನಿಧಿಗಾಗಿ ಐತಿಹಾಸಿಕ ಆಂಜನೇಯ ದೇಗುಲ ಅಗೆದ ಕಳ್ಳರು

ಈ ಸುದ್ದಿಯನ್ನು ಶೇರ್ ಮಾಡಿ

nidhi-robbers
ಕೊಪ್ಪಳ, ಜು.23-ನಿಧಿಗಾಗಿ ಕಳ್ಳರು ವಿಜಯನಗರ ಕಾಲದ ಐತಿಹಾಸಿಕ ಆಂಜನೇಯ ದೇಗುಲದಲ್ಲಿ ಗುಂಡಿ ತೋಡಿ ಶೋಧಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಗಂಗಾವತಿ ತಾಲೂಕಿನ ಕಡೇಬಾಗಿಲು ಗ್ರಾಮದಲ್ಲಿರುವ ವಿಜಯನಗರ ಸಾಮ್ರಾಜ್ಯದಲ್ಲಿ ನಿರ್ಮಾಣಗೊಂಡಿದ್ದ ಆಂಜನೇಯ ದೇಗುಲದಲ್ಲಿ ಗುಂಡಿ ತೋಡುವ ಮೂಲಕ ಕಳ್ಳರು ಶೋಧ ನಡೆಸಿದ್ದಾರೆ. ನಿನ್ನೆ ಭಕ್ತರು ದೇವಾಲಯಕ್ಕೆ ತೆರಳಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿದ್ದು, ಅಗೆದಿದ್ದ ಗುಂಡಿಯನ್ನು ಸ್ಥಳೀಯರು ಮುಚ್ಚಿದ್ದಾರೆ ಹಾಗೂ ಗ್ರಾಮೀಣ ಠಾಣೆಗೂ ಈ ಬಗ್ಗೆ ದೂರು ನೀಡಲಾಗಿದೆ.

ಇಂತಹ ಘಟನೆಗಳಿಂದ ಪ್ರಾಚೀನ ಸ್ಮಾರಕಗಳಿಗೆ ಧಕ್ಕೆಯಾಗುತ್ತಿದ್ದರೂ ಇದನ್ನು ಸಂರಕ್ಷಿಸಬೇಕಾದ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಸಂಬಂಧ ಕೂಡಲೇ  ಪ್ರಾಧಿಕಾರ ದೇವಾಲಯಗಳಿಗೆ ರಕ್ಷಣೆ ನೀಡುವಂತೆ ಒತ್ತಾಯಿಸಿದ್ದಾರೆ.

Facebook Comments

Sri Raghav

Admin