ಅಲ್ವರ್ ಪ್ರಕರಣ ಮೋದಿ ಅವರ ‘ಕ್ರೂರ ನವಭಾರತ’ದ ನಿದರ್ಶನ : ರಾಹುಲ್

ಈ ಸುದ್ದಿಯನ್ನು ಶೇರ್ ಮಾಡಿ

RAHUL

ನವದೆಹಲಿ, ಜು.23-ರಾಜಸ್ತಾನದ ಅಲ್ವರ್ ನಲ್ಲಿ ಗೋ ಕಳ್ಳಸಾಗಣೆ ಶಂಕೆಯಿಂದ ಗ್ರಾಮಸ್ಥರಿಂದ ಯುವಕನೊಬ್ಬ ಹತ್ಯೆಯಾದ ಪ್ರಕರಣವನ್ನು ಕಟುವಾಗಿ ಖಂಡಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಇದು ಪ್ರಧಾನಿ ನರೇಂದ್ರ ಮೋದಿ ಅವರ ಕ್ರೂರ ನವಭಾರತದ ನಿದರ್ಶನ ಎಂದು ಆರೋಪಿಸಿದ್ದಾರೆ.
ಈ ಹತ್ಯೆಗೆ ಟ್ವಿಟರ್‍ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅವರು, ಪ್ರಧಾನಿ ಮೋದಿ ಮತ್ತು ಬಿಜೆಪಿ ಆಡಳಿತವಿರುವ ರಾಜ್ಯದ ವೈಫಲ್ಯವನ್ನು ಖಂಡಿಸಿದರು.

ಗ್ರಾಮಸ್ಥರಿಂದ ತೀವ್ರ ಥಳಿತಕ್ಕೆ ಒಳಗಾದ ಯುವಕನ್ನು 6 ಕಿ.ಮೀ.ದೂರದಲ್ಲಿರುವ ಆಸ್ಪತ್ರೆಗೆ ಸೇರಿಸಲು ಅಲ್ಲಿನ ಪೊಲೀಸರಿಗೆ ಮೂರು ತಾಸುಗಳು ಬೇಕಾಯಿತು. ಇದು ರಾಜಸ್ತಾನ ಪೊಲೀಸರ ವೈಫಲ್ಯಕ್ಕೆ ಸಾಕ್ಷಿ ಎಂದು ಅವರು ಕಿಡಿಕಾರಿದರು.

Facebook Comments

Sri Raghav

Admin