ಬೋರ್‌ವೆಲ್‌ ಲಾರಿ ಉರುಳಿ ಬಿದ್ದು ಇಬ್ಬರ ಸ್ಥಳದಲ್ಲೇ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Borwell-larry-fell-Down

ಹೆಚ್.ಡಿ.ಕೋಟೆ,ಜು.24- ಚಾಲಕನ ನಿಯಂತ್ರಣ ತಪ್ಪಿ ಬೋರ್‍ವೆಲ್ ಲಾರಿ ಉರುಳಿ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ನಾಲ್ವರು ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಛತ್ತೀಸ್‍ಘಡದ ನಿವಾಸಿಗಳಾದ ಅವಿನಾಶ್(22), ಶರವಣ(23) ಮೃತಪಟ್ಟ ದುರ್ದೈವಿಗಳು.
ಎಚ್.ಡಿ.ಕೋಟೆಯ ಚಿಕ್ಕರೆಯೂರು ಗ್ರಾಮದ ಬಳಿ ಇಂದು ಬೆಳಗ್ಗೆ ಬೋರ್‍ವೆಲ್ ಲಾರಿಯೊಂದು ಚಲಿಸುತ್ತಿದ್ದಾಗ ಎದುರಿಗೆ ಬಂದ ಆಟೋಗೆ ದಾರಿ ಬಿಡಲು ಪಕ್ಕಕ್ಕೆ ಲಾರಿ ಚಾಲಿಸಿದಾಗ ಚಾಲಕನ ನಿಯಂತ್ರಣ ತಪ್ಪಿ ಲಾರಿ ಮಗುಚಿಬಿದ್ದಿದೆ. ಈ ವೇಳೆ ಲಾರಿಯಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಾಲ್ವರು ಗಾಯಗೊಂಡಿದ್ದು, ಇವರನ್ನು ಎಚ್.ಡಿ.ಕೋಟೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.  ಸ್ಥಳಕ್ಕೆ ವೃತ್ತ ನಿರೀಕ್ಷಕ ಹರೀಶ್ ಗೌಡ, ಸಬ್‍ಇನ್‍ಸ್ಪೆಕ್ಟರ್ ಅಶೋಕ್, ಸಿಬ್ಬಂದಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.  ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments