ಮಾರುಕಟ್ಟೆಗಳ 5910 ಮಳಿಗೆಗಳಿಂದ 90 ಕೋಟಿ ರೂ.ಗೂ ಅಧಿಕ ಬಾಡಿಗೆ ಬರಬೇಕಿದೆ

ಈ ಸುದ್ದಿಯನ್ನು ಶೇರ್ ಮಾಡಿ

Padmanabhareddy--01

ಬೆಂಗಳೂರು, ಜು.24- ಬಿಬಿಎಂಪಿ ವ್ಯಾಪ್ತಿಯ ಮೂರು ವಲಯಗಳಲ್ಲಿರುವ 116 ಮಾರುಕಟ್ಟೆಗಳ 5910 ಮಳಿಗೆಗಳಿಂದ 90 ಕೋಟಿ ರೂ.ಗೂ ಅಧಿಕ ಬಾಡಿಗೆ ಬರಬೇಕಾಗಿದೆ. ಇಷ್ಟೊಂದು ಬೃಹತ್ ಮೊತ್ತದ ಬಾಡಿಗೆ ಉಳಿಸಿಕೊಂಡಿರುವುದರ ಹಿಂದೆ ಅಕ್ರಮ ನಡೆದಿದೆ ಎಂದು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಆರೋಪಿಸಿದ್ದಾರೆ. ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಮಳಿಗೆಗಳಿಂದ ಪಾಲಿಕೆಗೆ ವಾರ್ಷಿಕ 32 ಕೋಟಿಯ 65 ಲಕ್ಷದ 37 ಸಾವಿರದ 674 ರೂಪಾಯಿ ಬರಬೇಕು.ಆದರೆ ಇನ್ನೂ 90.77 ಕೋಟಿ ರೂ.ಗೂ ಹೆಚ್ಚಿನ ಹಣವನ್ನು ಮಳಿಗೆಯವರು ಉಳಿಸಿಕೊಂಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಕೆಲವು ಮಳಿಗೆಗಳಿಂದ ಅಧಿಕಾರಿಗಳು ಬಾಡಿಗೆ ವಸೂಲಿ ಮಾಡಿಲ್ಲ. ಆರ್ಥಿಕ ಸಂಕಷ್ಟದಲ್ಲಿರುವ ಬಿಬಿಎಂಪಿಗೆ ಬರಬೇಕಾದ ಕೋಟ್ಯಂತರ ರೂ.ಬಾಡಿಗೆಯನ್ನು
ವಸೂಲಿ ಮಾಡದೇ ಇರುವುದು ಕಾಂಗ್ರೆಸ್ ಮತ್ತು ಜೆಡಿಎಸ್‍ನ ಆಡಳಿತ ವೈಫಲ್ಯ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

90 ಕೋಟಿ ರೂ.ಗೂ ಅಧಿಕ ಬಾಡಿಗೆ ವಸೂಲಿ ಮಾಡದೆ ಇರುವುದರ ಹಿಂದೆ ಹಲವು ಸಂಶಯಗಳಿವೆ. ಇದರಲ್ಲಿ ಅಕ್ರಮ ನಡೆದಿರುವ ಶಂಕೆ ಇದೆ ಎಂದು ಆರೋಪಿದ ಪದ್ಮನಾಭ ರೆಡ್ಡಿ, ದೀರ್ಘ ಕಾಲದಿಂದ ಪಾಲಿಕೆಗೆ ಬಾಡಿಗೆ ಪಾವತಿಸದ ಮಳಿಗೆಗಳಿಗೆ ಕಾರಣ ಕೇಳಿ ಪತ್ರ ನೀಡಲಾಗಿದೆಯೇ? ಇಂತಹ ಮಳಿಗೆಗಳನ್ನು ತೆರವುಗೊಳಿಸಲು ಪಾಲಿಕೆ ಯಾವ ಕ್ರಮ ಕೈಗೊಂಡಿದೆ ಎಂದು ಅವರು ಪ್ರಶ್ನಿಸಿದ್ದಾರೆ.

Facebook Comments