ಈ ಶ್ವಾನಗಳ ಸಾಮಾಜಿಕ ಕಾರ್ಯ ನಿಮ್ಮ ಮೆಚ್ಚುಗೆಗೂ ಪಾತ್ರವಾಗಲಿದೆ

ಈ ಸುದ್ದಿಯನ್ನು ಶೇರ್ ಮಾಡಿ

ds
ಪರಿತ್ಯಕ್ತ ಸಾಕು ಪ್ರಾಣಿಗಳಿಗೆ ನೆರವಾಗುತ್ತಿರುವ ಸ್ಪೇನ್‍ನ ಛಾಯಾಗ್ರಾಹಕನ ಕಾರ್ಯ ಜನಮೆಚ್ಚುಗೆಗೆ ಪಾತ್ರವಾಗಿದೆ. ನಾಯಿ ಮತ್ತು ಬೆಕ್ಕುಗಳಿಗೆ ಆಶ್ರಯ ನೀಡುತ್ತಿರುವ ಈ ಪ್ರಾಣಿಪ್ರಿಯ ಅವುಗಳ ಛಾಯಾಚಿತ್ರಗಳನ್ನು ತೆಗೆಯುತ್ತಾರೆ. ಆ ಫೋಟೋಗಳು ಪರಿತ್ಯಕ್ತ ಮತ್ತು ನಿರಾಶ್ರಿತ ಪ್ರಾಣಿಗಳನ್ನು ದತ್ತು ಸ್ವೀಕರಿಸಲು ಜನರಿಗೆ ಉತ್ತೇಜನ ನೀಡುವಂತಾಗಿದೆ.

ds-3

ಸ್ಪೇನ್ ಫೋಟೋಗ್ರಾಫರ್ ಎಮಿಲಿಯೋ ಕ್ಯೂಂಕಾ ಪ್ರಾಣಿ ಪ್ರಿಯ. ಈತ ಪರಿತ್ಯಕ್ತ ನಾಯಿ ಮತ್ತು ಬೆಕ್ಕುಗಳಿಗೆ ಉಚಿತ ಆಶ್ರಯ ನೀಡುತ್ತಾರೆ. ಮಾತ್ರವಲ್ಲ, ಅವುಗಳ ಫೋಟೊಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುತ್ತಾರೆ. ಇದು ಇಂಥ ನಿರ್ಗತಿಕ ಪ್ರಾಣಿಗಳನ್ನು ದತ್ತು ಸ್ವೀಕರಿಸಲು ಜನರಿಗೆ ಪ್ರೋತ್ಸಾಹ ನೀಡುತ್ತಿದೆ. ಸ್ಪೇನ್‍ನಲ್ಲಿ 2017ರಲ್ಲಿ ಸುಮಾರು 1,38,000 ಶ್ವಾನಗಳು ಮತ್ತು ಮಾಜರ್ಲಗಳನ್ನು ರಕ್ಷಿಸಲಾಗಿದೆ ಎಂದು ಅಫಿನಿಟಿ ಫೌಂಡೇಷನ್ ಪ್ರಾಣಿ ಕಲ್ಯಾಣ ಸಂಸ್ಥೆ ಅಂದಾಜು ಮಾಡಿದೆ. ಆದರೆ ಈ ಸಂಖ್ಯೆ ಎರಡರಷ್ಟಿದೆ ಎಂದು ಸ್ಪೇನ್ ಪ್ರಾಣಿ ಹಕ್ಕುಗಳ ಸಂಸ್ಥೆ ಪಿಎಸಿಎಂಎ ಹೇಳಿದೆ.

ds-8

ಪರಿತ್ಯಕ್ತ, ಆಶ್ರಯರಹಿತ ಮತ್ತು ವಿಷಮ ಸ್ಥಿತಿಯಲ್ಲಿರುವ ನಾಯಿ ಮತ್ತು ಬೆಕ್ಕುಗಳನ್ನು ದತ್ತು ಪಡೆಯುವಂತೆ ಮಾಡಲು ನಾನು ಪ್ರಾಣಿ ರಕ್ಷಣಾ ಸಮೂಹಗಳೊಂದಿಗೆ ಕಾರ್ಯನಿರ್ವಹಿಸುತ್ತೇನೆ. ಇದಕ್ಕೆ ಛಾಯಾಚಿತ್ರ ತುಂಬಾ ಮುಖ್ಯವಾಗುತ್ತದೆ. ಸೋಷಿಯಲ್ ಮೀಡಿಯಾ ಅಥವಾ ವೆಬ್‍ಸೈಟ್‍ಗಳ ಮೂಲಕ ಫೋಟೋಗಳನ್ನು ಪ್ರಕಟಿಸಿ ಅವುಳನ್ನು ದತ್ತು ತೆಗೆದುಕೊಳ್ಳುವಂತೆ ಮಾಡುವುದು ನನ್ನ ಉದ್ದೇಶ ಎನ್ನುತ್ತಾರೆ ಫೋಟೊಗ್ರಾಫರ್ ಎಮಿಲಿಯೋ..
ಈ ಫೋಟೊಗಳನ್ನು ನೋಡಿದ ಶ್ವಾನ ತರಬೇತು ದಾರರು ನಾಯಿಗಳನ್ನು ದತ್ತು ಸ್ವೀಕರಿಸಿ ಎಮಿಲಿಯೋ ಜೊತೆ ಈ ಯೋಜನೆಯಲ್ಲಿ ಕೈ ಜೋಡಿಸಿದ್ದಾರೆ. ನಾಯಿ ಮತ್ತು ಬೆಕ್ಕುಗಳ ಫೋಟೋಗಳನ್ನು ನೋಡಿ ಅನೇಕ ಪ್ರಾಣಿಪ್ರಿಯರು ಮತ್ತು ನಿವಾಸಿಗಳು ಇವುಗಳನ್ನು ದತ್ತು ಸ್ವೀಕರಿಸುತ್ತಿದ್ದಾರೆ.

ds-6

ds-7 ds-5 ds-4 ds-2 ds-1

Facebook Comments